Contact : +91 9663 755 105 / sremramakunja@gmail.com

Updates

74ನೇ ವರ್ಷದ ಸ್ವಾತಂತ್ರ್ಯೋತ್ಸವ ಆಚರಣೆ

74ನೇ ವರ್ಷದ ಸ್ವಾತಂತ್ರ್ಯೋತ್ಸವ ಆಚರಣೆ

ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ ರಾಮಕುಂಜ, ಇಲ್ಲಿ 74ನೇ ವರ್ಷದ ಸ್ವಾತಂತ್ರ್ಯೋತ್ಸವನ್ನು ಸಾಂಕೇತಿಕವಾಗಿ ಆಚರಿಸಲಾಯಿತು. ಸಭಾಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಮಾನ್ಯ ಕಾರ್ಯದರ್ಶಿಯವರಾದ ಶ್ರೀ ಯುತ ಸೇಸಪ್ಪ ರೈ ಕೆ ಯವರು 74ನೇವರ್ಷದ ಸ್ವಾತಂತ್ರ್ಯ ದಿನದ ಶುಭ ಹಾರೈಸುತ್ತಾ, ಹೊಸ ರಾಷ್ಟ್ರ್ರೀಯ ಶಿಕ್ಷಣ ನೀತಿಗೆ ಶಿಕ್ಷಕರು ಬದ್ಧರಾಗುವಂತೆ ಸೂಚಿಸುತ್ತಾ, ಕೋವಿಡ್-19 ರ ಸಂಘರ್ಷದ ನಡುವೆ ಶಿಕ್ಷಕರು ವಿದ್ಯಾರ್ಥಿಗಳಿಗೆ ಆನ್-ಲೈನ್ ಶಿಕ್ಷಣ ನೀಡುವುದರ ಮೂಲಕ ಕಾಲವಕಾಶದ ಸದ್ಭಳಕೆ ಮಾಡಿಕೊಳ್ಳಲು ಶಿಕ್ಷಕರಿಗೆ ಇದು ವರದಾನವಾಯಿತು ಎಂದರು. ಶಾಲಾ ಆಡಳಿತಾಧಿಕಾರಿಯಾದ ಶ್ರೀಯುತ […]

Read More

ವಿದ್ಯಾರ್ಥಿ ಕೆ.ಕೌಶಿಕ್ ರಾವ್ 625ರಲ್ಲಿ 623 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಮೂರನೇ ರ್‍ಯಾಂಕ್

ವಿದ್ಯಾರ್ಥಿ ಕೆ.ಕೌಶಿಕ್ ರಾವ್ 625ರಲ್ಲಿ 623 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಮೂರನೇ ರ್‍ಯಾಂಕ್

Read More

ರಾಮಕುಂಜದಲ್ಲಿ ಆಟಿ ಅಮವಾಸ್ಯೆ ಆಚರಣೆ

ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ರಾಮಕುಂಜ ಇಲ್ಲಿ ಪ್ರತೀ ವರ್ಷದಂತೆ ದಿನಾಂಕ 20-07-2020 ರಂದು ಆಟಿ ಅಮವಾಸ್ಯೆ ಆಚರಣೆಯನ್ನು ಸಾಂಕೇತಿಕವಾಗಿ ಸರಳವಾಗಿ ಸಂಸ್ಥೆಯ ಕಾರ್ಯದರ್ಶಿಯವರ ನೆತೃತ್ವದಲ್ಲಿ ನಡೆಸಲಾಯಿತು. ಅಮವಾಸ್ಯೆಯ ವಿಶೇಷತೆಯ ಬಗ್ಗೆ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಯುತ ಸೇಸಪ್ಪ ರೈ ಕೆ ಯವರು ತಿಳಿಸಿದರು. ಶೈಕ್ಷಣಿಕ ಸಲಹೆಗಾರರಾದ ಶ್ರೀಯುತ ರವೀಂದ್ರ ದರ್ಬೆಯವರು ಸಂದರ್ಭೋಚಿತವಾಗಿ ಮಾತನಾಡಿದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಗಾಯತ್ರಿ ಯು ಎನ್ ರವರು ಸ್ವಾಗತಿಸಿದರು. ಸುಮಾರು 20 ಬಗೆಯ ನಿಸರ್ಗದತ್ತವಾದ ವಿಶೇಷ ತಿಂಡಿ […]

Read More

ರಾಮಕುಂಜ: ಭಾರತ್ ಸ್ಕೌಟ್ ಗೈಡ್ಸ್ ನಿಂದ ಕೊರೊನಾ ವೈರಸ್‍ನ ಮಾಹಿತಿ ಹಾಗೂ ಜಾಗೃತಿ

ರಾಮಕುಂಜ: ಭಾರತ್ ಸ್ಕೌಟ್ ಗೈಡ್ಸ್ ನಿಂದ ಕೊರೊನಾ ವೈರಸ್‍ನ ಮಾಹಿತಿ ಹಾಗೂ ಜಾಗೃತಿ

  ಭಾರತ್ ಸ್ಕೌಟ್ ಗೈಡ್ಸ್ ರಾಷ್ಟ್ರ ಸಂಸ್ಥೆ, ರಾಜ್ಯ ಸಂಸ್ಥೆ ಹಾಗೂ ಜಿಲ್ಲಾ ಸಂಸ್ಥೆಯು ಪ್ರತಿಯೊಬ್ಬ ಸ್ಕೌಟ್ಸ್ ಗೈಡ್ಸ್ ಸದಸ್ಯರುಗಳಿಗೆ ಒಂದು ವಿಶೇಷವಾದ ಜವಾಬ್ದಾರಿಯನ್ನು ಕೊಟ್ಟಿರುತ್ತದೆ. ಅದೇನೆಂದರೆ ಕೊರೊನ ಜಾಗೃತಿಯನ್ನು ಪ್ರತಿಯೊಬ್ಬರಿಗೂ ಮನದಟ್ಟು ಮಾಡುವುದು. ಅದರಂತೆಯೇ ನಾನು ಕೂಡ ನಮ್ಮ ಸುತ್ತಮುತ್ತಲ ಹಾಗೂ ನನ್ನೂರಿನ ನಮ್ಮ ಗ್ರಾಮದಲ್ಲಿ ಇದರ ಬಗ್ಗೆ ಮಾಹಿತಿ ಹಾಗೂ ಜಾಗೃತಿಯನ್ನು ಕೂಡ ಮಾಡಿರುತ್ತೇನೆ. ಮಾತ್ರವಲ್ಲದೆ ಮಾಸ್ಕನ್ನು ಹಂಚುವುದರೊಂದಿಗು ನಮ್ಮ ಸೇವೆ ಹಾಗೂ ಕರ್ತವ್ಯವನ್ನು ಕೂಡ ಮಾಡಿರುತ್ತೇನೆ. ಇಷ್ಟು ಮಾತ್ರವಲ್ಲದೆ 6 ತಿಂಗಳ ಪೆÇ್ರೀಜೆಕ್ಟ್‍ಗಳಲ್ಲಿ […]

Read More

ರಾಮಕುಂಜ: ಆನ್‌ಲೈನ್‌ ತರಗತಿ ಆರಂಭ

ದೇಶದಲ್ಲಿ ಕೊರೋನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಕೇಂದ್ರ ಸರಕಾರ ಲಾಕ್‌ಡೌನ್ ಜಾರಿಗೊಳಿಸಿತು. ಇದರಿಂದಾಗಿ 2019-20ನೇ ಸಾಲಿನ ಶೈಕ್ಷಣಿಕ ವರ್ಷದ 15 ದಿನದ ಮೊದಲೇ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆ ನೀಡಲಾಗಿತ್ತು. ಎಪ್ರಿಲ್ ತಿಂಗಳಿನಲ್ಲಿ ನಡೆಯುವ ಬೇಸಿಗೆ ಶಿಬಿರಗಳೂ ನಡೆಯಲಿಲ್ಲ. ಮಕ್ಕಳು ಮನೆಯೊಳಗೆಯೇ ಸೇರಿಕೊಳ್ಳಬೇಕಾದ ಪ್ರಮೇಯ ಒದಗಿ ಬಂದಿತ್ತು. ಇದರಿಂದಾಗಿ ಕಳೆದ 40-45 ದಿನಗಳಿಂದ ವಿದ್ಯಾರ್ಥಿಗಳು ತಮ್ಮ ಶಾಲೆಯಿಂದ ದೂರವೇ ಉಳಿದಿದ್ದಾರೆ. ಬಹುತೇಕ ಮಕ್ಕಳು ಪುಸ್ತಕದೊಂದಿಗಿನ ತಮ್ಮ ಸಂಬಂಧವನ್ನೇ ಕಡಿತಗೊಳಿಸಿದ್ದಾರೆ. ಮಕ್ಕಳ ಶೈಕ್ಷಣಿಕ ಚಟುವಟಿಕೆ ಪುನರಾರಂಭಿಸುವ ನಿಟ್ಟಿನಲ್ಲಿ ರಾಮಕುಂಜ […]

Read More

ಶ್ರೀರಾಮಕುಂಜೇಶ್ವರ ಶಾಲೆಯ 2020-21ನೇ ಸಾಲಿನ ವಿದ್ಯಾರ್ಥಿ ಸಂಘ ಉದ್ಘಾಟನೆ

ಶ್ರೀರಾಮಕುಂಜೇಶ್ವರ ಶಾಲೆಯ 2020-21ನೇ ಸಾಲಿನ ವಿದ್ಯಾರ್ಥಿ ಸಂಘ ಉದ್ಘಾಟನೆ

ರಾಮಕುಂಜದ ಶ್ರೀರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 2020-21ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನ ಸಮಾರಂಭವು ಶಾಲಾ ಸಭಾಂಗಣದಲ್ಲಿ ಜರಗಿತು. ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಶ್ರೀರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ನಿವೃತ್ತ ಇತಿಹಾಸ ಪ್ರಾಧ್ಯಾಪಕರಾದ ಸದಾಶಿವ ಭಟ್ ಅವರು ಶಾಲಾ ಹಂತದಲ್ಲಿಯೇ ನಾಯಕತ್ವ ಗುಣಗಳನ್ನು ಬೆಳೆಸಿಕೊಂಡಲ್ಲಿ ಮುಂದಿನ ನಾಯಕತ್ವ ಬೆಳವಣಿಗೆಗಳಿಗೆ ಸಹಾಯಕವಾಗಲಿದೆ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ನಂತರ ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈ ಮಾತನಾಡಿ ವಿದ್ಯಾರ್ಥಿಗಳು ತಮಗೆ ದೊರಕಿದ ಅವಕಾಶಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು. ಕಠಿಣ […]

Read More

ಶ್ರೀರಾ.ಆಂ.ಮಾ.ಶಾಲೆಯ ವಿದ್ಯಾರ್ಥಿಗಳು ಫೌಂಡೇಶನ್ ಕೋರ್ಸ್ ಪರೀಕ್ಷೆಯಲ್ಲಿ ತೇರ್ಗಡೆ

ಶ್ರೀರಾ.ಆಂ.ಮಾ.ಶಾಲೆಯ ವಿದ್ಯಾರ್ಥಿಗಳು ಫೌಂಡೇಶನ್ ಕೋರ್ಸ್ ಪರೀಕ್ಷೆಯಲ್ಲಿ ತೇರ್ಗಡೆ

ಶಾಲಾ ಮಟ್ಟದಲ್ಲಿ ನಡೆಸಿದ 2019-20ನೇ ಸಾಲಿನ ಫೌಂಡೇಶನ್ ಕೋರ್ಸ್ ಎನ್‍ಟಿಎಸ್‍ಇ, ಜೆಇಇ, ಸಿಇಟಿ, ನೀಟ್ ಮೊದಲಾದ ಪರೀಕ್ಷೆಯಲ್ಲಿ ಶ್ರೀರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಅಂಕ ಗಳಿಸಿ ತೇರ್ಗಡೆ ಹೊಂದಿದ್ದಾರೆ. ಅತ್ಯುತ್ತಮ ಅಂಕ ಗಳಿಸಿದ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಾದ ಅಂಜಲಿ ಎ.ಆರ್ ಭಟ್(8ನೇ), ಕಾವ್ಯ.ಪಿ(9ನೇ) ಅಂಜಲಿ(8ನೇ), ಲಿಖಿತ್ ಬಿ.ಜೆ(9ನೇ), ಜ್ಞಾನ್ ಕೆ.ಅರಸ್(9ನೇ).   ಹಿರಿಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳಾದ ಮೇಘ ಎಸ್.ಪಿ(6ನೇ), ಯಶ್ವಿತ್ ರೈ(7ನೇ), ಗುರುಕಿರಣ್(7ನೇ), ಅಂಕಿತ್ ಯು ಗೌಡ(7ನೇ), ಸಿದ್ಧಾಂತ್ ಜೆ ಶೆಟ್ಟಿ(7ನೇ). ಪ್ರತಿ […]

Read More

ಕೆಡ್ಡಸ ದಿನ ಹಾಗೂ ತುಳು ಶಿಕ್ಷಕರ ಶೈಕ್ಷಣಿಕ ಕಾರ್ಯಗಾರ

ದ.ಕ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯ ತುಳು ಶಿಕ್ಷಕರ ಶೈಕ್ಷಣಿಕ ಕಾರ್ಯಗಾರ ಮತ್ತು ಕೆಡ್ಡಸ ದಿನ ಕಾರ್ಯಕ್ರಮ ಫೆ.11 ಮಂಗಳವಾರದಂದು ಶ್ರೀರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಲಿದೆ. ಈ ಕಾರ್ಯಕ್ರಮದಲ್ಲಿ ಭೂಮಿ ಪೂಜೆ ಹಾಗೂ ಕೆಡ್ಡಸದ ಮಾಹಿತಿಗಾರರಾಗಿ ನಮ್ಮ ಕುಡ್ಲ ಚಾನೆಲ್‍ನ ಪ್ರಿಯಾ ಹರೀಶ್ ಶೆಟ್ಟಿ, ಸಭೆಯ ಅಧ್ಯಕ್ಷತೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ದಯಾನಂದ ಕತ್ತಲ್ ಸಾರ್, ಮುಖ್ಯ ಅಥಿತಿಗಳಾಗಿ ಪುತ್ತೂರಿನ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್.ಸಿ, ನಮ್ಮ ಟಿ.ವಿ ಚಾನೆಲ್‍ನ ಆಡಳಿತ ನಿರ್ದೇಶಕರಾದ ಶಿವರಣ […]

Read More

ಸ್ಕೌಟ್ & ಗೈಡ್ಸ್ ರಾಜ್ಯ ಪುರಸ್ಕಾರ ಆವಾರ್ಡ್ ಪರೀಕ್ಷೆ: 11 ವಿದ್ಯಾರ್ಥಿಗಳು ತೇರ್ಗಡೆ

ಸ್ಕೌಟ್ & ಗೈಡ್ಸ್ ರಾಜ್ಯ ಪುರಸ್ಕಾರ ಆವಾರ್ಡ್ ಪರೀಕ್ಷೆ: 11 ವಿದ್ಯಾರ್ಥಿಗಳು ತೇರ್ಗಡೆ

ಭಾರತ್ ಸ್ಕೌಟ್ & ಗೈಡ್ಸ್ ರಾಜ್ಯ ಪುರಸ್ಕಾರ ಆವಾರ್ಡ್ ಪರೀಕ್ಷೆಯಲ್ಲಿ ಶ್ರೀರಾ.ಆಂ.ಮಾ.ಪ್ರೌಢಶಾಲೆಯ 6 ಸ್ಕೌಟ್ಸ್ ವಿದ್ಯಾರ್ಥಿಗಳು ಮತ್ತು 5 ಗೈಡ್ಸ್ ವಿದ್ಯಾರ್ಥಿಗಳು ರಾಜ್ಯ ಪುರಸ್ಕಾರ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ರಾಷ್ಟ್ರಪತಿ ಅವಾರ್ಡ್ ಪರೀಕ್ಷಗೆ ಅರ್ಹತೆ ಹೊಂದಿದ್ದಾರೆ. ಸ್ಕೌಟ್ಸ್ ವಿದ್ಯಾರ್ಥಿಗಳಾದ : ರಾಹುಲ್ ಎನ್.ಸಿ(10ನೇ) ರಾಮಕುಂಜದ ರಮೇಶ್.ಎನ್.ಸಿ ತಾಯಿ ರಮ್ಯ ರವರ ಪುತ್ರ, ಅನಿಲ್ ಕುಮಾರ್.ಎಸ್.ಡಿ(10ನೇ) ತಂದೆ ಸೀತಾರಾಮ.ಕೆ, ತಾಯಿ ಅನ್ನಪೂರ್ಣ.ಎಂ. ರಾಮಕುಂಜ ರವರ ಪುತ್ರ. ವಿನಯ್.ಆರ್(10ನೇ) ಚಿತ್ರದುರ್ಗದ ರಂಗಸ್ವಾಮಿ.ಎಸ್, ತಾಯಿ ಲಲಿತ ಎಂ.ಇ ರವರ ಪುತ್ರ, ಮಹದೇವ್ […]

Read More

ಶ್ರೀ.ರಾ.ಆಂ.ಮಾ.ಶಾಲೆಯಲ್ಲಿ ಪೇಜಾವರ ಶ್ರೀ ಆರಾಧನೋತ್ಸವ

ಶ್ರೀ.ರಾ.ಆಂ.ಮಾ.ಶಾಲೆಯಲ್ಲಿ ಪೇಜಾವರ ಶ್ರೀ ಆರಾಧನೋತ್ಸವ

ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಆರಾಧನೋತ್ಸವದ ಅಂಗವಾಗಿ ಶ್ರೀರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭಜನೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಆರಂಭದಲ್ಲಿ ಹುಟ್ಟೂರು ರಾಮಕುಂಜಕ್ಕೆ ಅವರ ಕೊನೆಯ ಭೇಟಿಯಾದ ಸಂದರ್ಭ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ನೀಡಿದ ಆಶೀರ್ವಚನದ 3 ನಿಮಿಷದ ಆಡಿಯೋವನ್ನು ವಿದ್ಯಾರ್ಥಿಗಳಿಗೆ ಕೇಳಿಸಲಾಯಿತು. ಶಿಕ್ಷಕರು, ಸಿಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಪೇಜಾವರ ಶ್ರೀಗಳ ಭಾವಚಿತ್ರಕ್ಕೆ ಪುಪ್ಪಾಂಜಲಿ ಅರ್ಪಿಸಿ ನಮನ ಸಲ್ಲಿಸಿದರು. ನಂತರ ಅನ್ನಸಂತರ್ಪಣೆ ಏರ್ಪಡಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ.ರೈ, ಶಾಲಾ ಮುಖ್ಯಗುರು ಗಾಯತ್ರಿ.ಯು.ಎನ್, ಆಡಳಿತಾಧಿಕಾರಿ […]

Read More