Updates

ಶ್ರೀರಾಮಕುಂಜೇಶ್ವರ ಶಾಲೆಯ 2020-21ನೇ ಸಾಲಿನ ವಿದ್ಯಾರ್ಥಿ ಸಂಘ ಉದ್ಘಾಟನೆ
Date: 12-03-2020
ರಾಮಕುಂಜದ ಶ್ರೀರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 2020-21ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನ ಸಮಾರಂಭವು ಶಾಲಾ ಸಭಾಂಗಣದಲ್ಲಿ ಜರಗಿತು. ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಶ್ರೀರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ನಿವೃತ್ತ ಇತಿಹಾಸ ಪ್ರಾಧ್ಯಾಪಕರಾದ ಸದಾಶಿವ ಭಟ್ ಅವರು ಶಾಲಾ ಹಂತದಲ್ಲಿಯೇ ನಾಯಕತ್ವ ಗುಣಗಳನ್ನು ಬೆಳೆಸಿಕೊಂಡಲ್ಲಿ ಮುಂದಿನ ನಾಯಕತ್ವ ಬೆಳವಣಿಗೆಗಳಿಗೆ ಸಹಾಯಕವಾಗಲಿದೆ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ನಂತರ ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈ ಮಾತನಾಡಿ ವಿದ್ಯಾರ್ಥಿಗಳು ತಮಗೆ ದೊರಕಿದ ಅವಕಾಶಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು. ಕಠಿಣ […]

ಶ್ರೀರಾ.ಆಂ.ಮಾ.ಶಾಲೆಯ ವಿದ್ಯಾರ್ಥಿಗಳು ಫೌಂಡೇಶನ್ ಕೋರ್ಸ್ ಪರೀಕ್ಷೆಯಲ್ಲಿ ತೇರ್ಗಡೆ
Date: 04-03-2020
ಶಾಲಾ ಮಟ್ಟದಲ್ಲಿ ನಡೆಸಿದ 2019-20ನೇ ಸಾಲಿನ ಫೌಂಡೇಶನ್ ಕೋರ್ಸ್ ಎನ್ಟಿಎಸ್ಇ, ಜೆಇಇ, ಸಿಇಟಿ, ನೀಟ್ ಮೊದಲಾದ ಪರೀಕ್ಷೆಯಲ್ಲಿ ಶ್ರೀರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಅಂಕ ಗಳಿಸಿ ತೇರ್ಗಡೆ ಹೊಂದಿದ್ದಾರೆ. ಅತ್ಯುತ್ತಮ ಅಂಕ ಗಳಿಸಿದ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಾದ ಅಂಜಲಿ ಎ.ಆರ್ ಭಟ್(8ನೇ), ಕಾವ್ಯ.ಪಿ(9ನೇ) ಅಂಜಲಿ(8ನೇ), ಲಿಖಿತ್ ಬಿ.ಜೆ(9ನೇ), ಜ್ಞಾನ್ ಕೆ.ಅರಸ್(9ನೇ). ಹಿರಿಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳಾದ ಮೇಘ ಎಸ್.ಪಿ(6ನೇ), ಯಶ್ವಿತ್ ರೈ(7ನೇ), ಗುರುಕಿರಣ್(7ನೇ), ಅಂಕಿತ್ ಯು ಗೌಡ(7ನೇ), ಸಿದ್ಧಾಂತ್ ಜೆ ಶೆಟ್ಟಿ(7ನೇ). ಪ್ರತಿ […]
ಕೆಡ್ಡಸ ದಿನ ಹಾಗೂ ತುಳು ಶಿಕ್ಷಕರ ಶೈಕ್ಷಣಿಕ ಕಾರ್ಯಗಾರ
Date: 11-02-2020
ದ.ಕ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯ ತುಳು ಶಿಕ್ಷಕರ ಶೈಕ್ಷಣಿಕ ಕಾರ್ಯಗಾರ ಮತ್ತು ಕೆಡ್ಡಸ ದಿನ ಕಾರ್ಯಕ್ರಮ ಫೆ.11 ಮಂಗಳವಾರದಂದು ಶ್ರೀರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಲಿದೆ. ಈ ಕಾರ್ಯಕ್ರಮದಲ್ಲಿ ಭೂಮಿ ಪೂಜೆ ಹಾಗೂ ಕೆಡ್ಡಸದ ಮಾಹಿತಿಗಾರರಾಗಿ ನಮ್ಮ ಕುಡ್ಲ ಚಾನೆಲ್ನ ಪ್ರಿಯಾ ಹರೀಶ್ ಶೆಟ್ಟಿ, ಸಭೆಯ ಅಧ್ಯಕ್ಷತೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ದಯಾನಂದ ಕತ್ತಲ್ ಸಾರ್, ಮುಖ್ಯ ಅಥಿತಿಗಳಾಗಿ ಪುತ್ತೂರಿನ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್.ಸಿ, ನಮ್ಮ ಟಿ.ವಿ ಚಾನೆಲ್ನ ಆಡಳಿತ ನಿರ್ದೇಶಕರಾದ ಶಿವರಣ […]

ಸ್ಕೌಟ್ & ಗೈಡ್ಸ್ ರಾಜ್ಯ ಪುರಸ್ಕಾರ ಆವಾರ್ಡ್ ಪರೀಕ್ಷೆ: 11 ವಿದ್ಯಾರ್ಥಿಗಳು ತೇರ್ಗಡೆ
Date: 05-02-2020
ಭಾರತ್ ಸ್ಕೌಟ್ & ಗೈಡ್ಸ್ ರಾಜ್ಯ ಪುರಸ್ಕಾರ ಆವಾರ್ಡ್ ಪರೀಕ್ಷೆಯಲ್ಲಿ ಶ್ರೀರಾ.ಆಂ.ಮಾ.ಪ್ರೌಢಶಾಲೆಯ 6 ಸ್ಕೌಟ್ಸ್ ವಿದ್ಯಾರ್ಥಿಗಳು ಮತ್ತು 5 ಗೈಡ್ಸ್ ವಿದ್ಯಾರ್ಥಿಗಳು ರಾಜ್ಯ ಪುರಸ್ಕಾರ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ರಾಷ್ಟ್ರಪತಿ ಅವಾರ್ಡ್ ಪರೀಕ್ಷಗೆ ಅರ್ಹತೆ ಹೊಂದಿದ್ದಾರೆ. ಸ್ಕೌಟ್ಸ್ ವಿದ್ಯಾರ್ಥಿಗಳಾದ : ರಾಹುಲ್ ಎನ್.ಸಿ(10ನೇ) ರಾಮಕುಂಜದ ರಮೇಶ್.ಎನ್.ಸಿ ತಾಯಿ ರಮ್ಯ ರವರ ಪುತ್ರ, ಅನಿಲ್ ಕುಮಾರ್.ಎಸ್.ಡಿ(10ನೇ) ತಂದೆ ಸೀತಾರಾಮ.ಕೆ, ತಾಯಿ ಅನ್ನಪೂರ್ಣ.ಎಂ. ರಾಮಕುಂಜ ರವರ ಪುತ್ರ. ವಿನಯ್.ಆರ್(10ನೇ) ಚಿತ್ರದುರ್ಗದ ರಂಗಸ್ವಾಮಿ.ಎಸ್, ತಾಯಿ ಲಲಿತ ಎಂ.ಇ ರವರ ಪುತ್ರ, ಮಹದೇವ್ […]

ಶ್ರೀ.ರಾ.ಆಂ.ಮಾ.ಶಾಲೆಯಲ್ಲಿ ಪೇಜಾವರ ಶ್ರೀ ಆರಾಧನೋತ್ಸವ
Date: 09-01-2020
ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಆರಾಧನೋತ್ಸವದ ಅಂಗವಾಗಿ ಶ್ರೀರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭಜನೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಆರಂಭದಲ್ಲಿ ಹುಟ್ಟೂರು ರಾಮಕುಂಜಕ್ಕೆ ಅವರ ಕೊನೆಯ ಭೇಟಿಯಾದ ಸಂದರ್ಭ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ನೀಡಿದ ಆಶೀರ್ವಚನದ 3 ನಿಮಿಷದ ಆಡಿಯೋವನ್ನು ವಿದ್ಯಾರ್ಥಿಗಳಿಗೆ ಕೇಳಿಸಲಾಯಿತು. ಶಿಕ್ಷಕರು, ಸಿಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಪೇಜಾವರ ಶ್ರೀಗಳ ಭಾವಚಿತ್ರಕ್ಕೆ ಪುಪ್ಪಾಂಜಲಿ ಅರ್ಪಿಸಿ ನಮನ ಸಲ್ಲಿಸಿದರು. ನಂತರ ಅನ್ನಸಂತರ್ಪಣೆ ಏರ್ಪಡಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ.ರೈ, ಶಾಲಾ ಮುಖ್ಯಗುರು ಗಾಯತ್ರಿ.ಯು.ಎನ್, ಆಡಳಿತಾಧಿಕಾರಿ […]

ಓಪನ್ ಕರಾಟೆ ಚಾಂಪಿಯನ್ಶಿಪ್ನಲ್ಲಿ ಶ್ರೀರಾ.ಆಂ.ಮಾ.ಶಾಲೆಗೆ ದ್ವಿತೀಯ ಸಮಗ್ರ ಪ್ರಶಸ್ತಿ
Date: 20-11-2019
ಮಂಗಳೂರು ಮಿಲಾಗ್ರಿಸ್ ಸಿಬಿಎಸ್ಇ ಶಾಲೆ ಹಂಪನಕಟ್ಟೆಯಲ್ಲಿ ನಡೆದ ಓಪನ್ ಕರಾಟೆ ಚಾಂಪಿಯನ್ಶಿಪ್ ವೆಸ್ರ್ಟನ್ ಕಪ್-2019ರ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಶ್ರೀರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ದ್ವಿತೀಯ ಸಮಗ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಫಲಿತಾಂಶ : ನಿರಂಜನ್(6ನೇ)ಕಟಾ ಪ್ರಥಮ, ಕುಮಿಟೆ ಪಥಮ್ರ, ಭುವನ್(6ನೇ) ಕಟಾ ಪ್ರಥಮ, ಕುಮಿಟೆ ಪ್ರಥಮ, ಕೇಸರಿನಂದನ್(6ನೇ) ಕಟಾ ದ್ವಿತೀಯ, ಕುಮಿಟೆ ದ್ವಿತೀಯ, ಕುಶಾಲ್ ಗೌಡ.ಎಸ್.ಸಿ(7ನೇ) ಕಟಾ ಪ್ರಥಮ, ಕುಮಿಟೆ ಪ್ರಥಮ, ಕುಂದನ್.ವಿ(8ನೇ) ಕಟಾ ಪ್ರಥಮ, ಲಿಖಿತ್ ಗೌಡ.ಎಸ್(10ನೇ) ಕಟಾ ದ್ವಿತೀಯ, ಕುಮಿಟೆ […]

ಶ್ರೀರಾ.ಆಂ.ಮಾ.ಶಾಲೆ ವಿದ್ಯಾರ್ಥಿಗಳಾದ ಸಂಕಲ್ಪ ಮತ್ತು ಶುಭಪ್ರದ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ
Date: 18-11-2019
ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಶ್ರೀರಾ.ಆಂ.ಮಾ.ಶಾಲೆ ವಿದ್ಯಾರ್ಥಿಗಳಾದ ಸಂಕಲ್ಪ 10ನೇ( ಕೋಲು ಜಿಗಿತ ಪ್ರಥಮ ) ಮತ್ತು ಶುಭಪ್ರದಾ 10ನೇ (ಚೆಸ್ ಸ್ಪರ್ಧೆ ದ್ವಿತೀಯ) ಇವರಿಗೆ ಆತೂರುನಿಂದ ಮೆರವಣಿಗೆಯ ಮೂಲಕ ಅದ್ದೂರಿ ಸ್ವಾಗತವನ್ನು ಮಾಡಲಾಯಿತು. ಸಂಕಲ್ಪ.ಬಿ.ಆರ್ ಡಿಸೆಂಬರ್ ತಿಂಗಳಿನಲ್ಲಿ ಪಂಜಾಬಿನಲ್ಲಿ ನಡೆಯುವ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾನೆ. ಶುಭಪ್ರದಾ ಕೊಲ್ಕತ್ತಾದಲ್ಲಿ ನಡೆಯುವ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾಳೆ. ದೈಹಿಕ ಶಿಕ್ಷಕರಾದ ಪ್ರೇಮ ಹಾಗೂ ವಾಸಪ್ಪ ತರಬೇತಿ ನೀಡಿದರು.ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ.ರೈ , ಆಡಳಿತಾಧಿಕಾರಿ ಆನಂದ.ಎಸ್.ಟಿ, ಶಾಲಾ ಮುಖ್ಯಗುರು ಗಾಯತ್ರಿ.ಯು.ಎನ್, ಶೈಕ್ಷಣಿಕ […]

ಶ್ರೀರಾ.ಆಂ.ಮಾ.ಶಾಲೆಯಲ್ಲಿ ಮಕ್ಕಳ ದಿನಾಚರಣೆ
Date: 18-11-2019
ಶ್ರೀರಾಮಕುಂಜೇಶ್ವರ ಆ.ಮಾ.ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಶಾಲಾ ಆಡಳಿತಾಧಿಕಾರಿ ಆನಂದ.ಎಸ್.ಟಿ ಮಾತನಾಡಿ ಜವಾಹರಲಾಲ್ ನೆಹರು ಅವರ ತತ್ವ-ಆದರ್ಶಗಳನ್ನು ನಾವು ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ವಿದ್ಯಾರ್ಥಿಗಳಾದ ಲಿಂಚನ, ಕೈವಲ್ಯ ಮಕ್ಕಳ ದಿನಾಚರಣೆಯ ಕುರಿತಾದ ವಿಷಯಗಳನ್ನು ಮಂಡಿಸಿದರು. ವಿದ್ಯಾರ್ಥಿ ಸಂಘದ ನಾಯಕಿ ಪ್ರದೀತಿ ಸ್ವಾಗತಿಸಿ, ವಿದ್ಯಾರ್ಥಿ ವಿಭಾ ಕಾರ್ಯಕ್ರಮ ನಿರೂಪಿಸಿದರು. ಮಕ್ಕಳ ದಿನಾಚರಣೆಯ ಅಂಗವಾಗಿ ಲಗೋರಿ, ಬಾಂಬ್ ಬ್ಲಾಸ್ಟ್ ಸರ್ಕಲ್ ಹಾಗೂ ವಿವಿಧ ರೀತಿಯ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನಂತರ ವಿದ್ಯಾರ್ಥಿಗಳಿಗೆ ಸಿಹಿತಿಂಡಿ ವಿತರಿಸಲಾಯಿತು ಕಾರ್ಯಕ್ರಮದಲ್ಲಿ […]

ಸಂಕಲ್ಪ.ಬಿ.ಆರ್ ಪಂಜಾಬಿನಲ್ಲಿ ನಡೆಯುವ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ
Date: 15-11-2019
ಸಾರ್ವಜನಿಕ ಶಿಕ್ಷಣ ಇಲಾಖಾ ಹಾಗೂ ಮಂಡ್ಯ ಬಾಲಗಂಗಾಧರನಾಥ ಸ್ವಾಮೀಜಿ ವಿದ್ಯಾ ಸಂಸ್ಥೆ ಆದಿಚುಂಚನಗಿರಿ ಬಿ.ಜಿ.ಎಸ್. ವಿದ್ಯಾ ಸಂಸ್ಥೆ ಇದರ ಸಹಯೋಗದೊಂದಿಗೆ ನಡೆದ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಶ್ರೀರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಸಂಕಲ್ಪ.ಬಿ.ಆರ್(10ನೇ) ಕೋಲು ಜಿಗಿತ(ಪೋಲ್ ವಾಲ್ಟ್) ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಡಿಸೆಂಬರ್ ತಿಂಗಳಿನಲ್ಲಿ ಪಂಜಾಬಿನಲ್ಲಿ ನಡೆಯುವ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾನೆ. ಇವನು ಚಿಕ್ಕಮಂಗಳೂರು ಲಲಿತಾ.ಎಸ್.ಕೆ. ಮತ್ತು ರವಿನಾಥ್.ಬಿ.ಎ. ಇವರ ಸುಪುತ್ರನಾಗಿರುತ್ತಾನೆ. ದೈಹಿಕ ಶಿಕ್ಷಕರಾದ ಪ್ರೇಮ ಹಾಗೂ ವಾಸಪ್ಪ ತರಬೇತಿ ನೀಡಿದರು. ಸಂಸ್ಥೆಯ ಕಾರ್ಯದರ್ಶಿ […]