Contact : +91 9663 755 105 / sremramakunja@gmail.com

ತುಳು ಕಲ್ಪಿನ ಜೋಕ್ಲೆನ ರಸ ಮಂಟಮೆ

 

ಶಾಲೆಗಳಲ್ಲಿ ತೃತೀಯ ಭಾಷೆಯಾಗಿ ತುಳು ಕಲಿಯುತ್ತಿರುವ ವಿದ್ಯಾರ್ಥಿಗಳಿಗಾಗಿ ರಾಮಕುಂಜದ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸಭಾಂಗಣದಲ್ಲಿ ಜು.28ರಂದು ‘ತುಳು ಕಲ್ಪಿನ ಜೋಕ್ಲೆನ ರಸ ಮಂಟಮೆ’ ಎನ್ನುವ ವಿಶಿಷ್ಟ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಎ.ಸಿ.ಭಂಡಾರಿ ತಿಳಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು ಮುಂದಿನ ಪೀಳಿಗೆಗೆ ತುಳು ಭಾಷೆ, ಸಂಸ್ಕೃತಿಯನ್ನು ಉಳಿಸುವ ಹಾಗೂ ಬೆಳೆಸುವ ದೃಷ್ಟಿಯಿಂದ ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ತುಳು ಪಠ್ಯ ಕಲಿಯುತ್ತಿರುವ ವಿದ್ಯಾರ್ಥಿಗಳಿಗಾಗಿ ತುಳು ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಅಂದು ಬೆಳಗ್ಗೆ 10ಕ್ಕೆ ತುಳು ಕೂಟ ಕುಡ್ಲ ಅಧ್ಯಕ್ಷ ರತ್ನಕುಮಾರ್ ಎಂ. ಉದ್ಘಾಟಿಸುವರು. ಸಂಜೆ 4:30ಕ್ಕೆ ಸಮಾರೋಪ ನಡೆಯಲಿದೆ ಎಂದರು.

ವೈಯುಕ್ತಿಕ ಸ್ಪರ್ಧೆ: ತುಳು ಕಬಿತೆ, ತುಳು ಭಾವಗೀತೆ, ಮಡಲಿನ ಕರಕುಶಲ ವಸ್ತುಗಳ ತಯಾರಿ, ತುಳುವೆರೆ ಹಳ್ಳಿ ಜೀವನ ಚಿತ್ರ. ತುಳು ಭಾಷಣ, ತುಳು ಏಕಪಾತ್ರ ಅಭಇನಯ, ತುಳು ವೈಯುಕ್ತಿಕ ಯಕ್ಷಗಾನ, ತುಳು ಜನಪದ ಕತೆ. *ಇಬ್ಬರ ತಂಡ ವಿಭಾಗ: ತುಳು ಒಗಟು, ತುಳು ಗಾದೆ, ತುಳು ರಸಪ್ರಶ್ನೆ.

10 ಜನರ ತಂಡ (ಗುಂಪು):ತುಳು ಸಂಸ್ಕೃತಿಯನ್ನು ಬಿಂಬಿಸುವ ತುಳು ನಾಟಕ, ತುಳು ಜನಪದ ಕುಣಿತ. ಸುದ್ದಿಗೋಷ್ಠಿಯಲ್ಲಿ ಶ್ರೀರಾಮ ಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ ಕಾರ್ಯದರ್ಶಿ ಕೆ.ಸೇಸಪ್ಪ ರೈ, ತುಳು ಅಕಾಡಮಿಯ ರಿಜಿಸ್ಟ್ರಾರ್‌ ಚಂದ್ರಹಾಸರೈ. ಬಿ., ಸಂಘಟಕರಾದ ಗೋಪಾಲ ಶೆಟ್ಟಿ ಕಲೆಂಜ, ಸರಿತಾ ರಾಮಕುಂಜ ಉಪಸ್ಥಿತರಿದ್ದರು.

 

 

Source Credits: http://www.varthabharati.in/article/karavali/144489