Contact : +91 9663 755 105 / sremramakunja@gmail.com

ಆಟಿ ಅಮವಾಸ್ಯೆ ಒಂದು ದಿನ

ತುಳುನಾಡಿನ ವಿಶಿಷ್ಟ ಸಾಂಸ್ಕೃತಿಕ ಪರಂಪರೆಯು ಇಂದಿನ ಆಧುನಿಕತೆಯ ಆಕ್ರಮಣದಿಂದ ನೇಪಥ್ಯಕ್ಕೆ ಸರಿಯುವ ಆತಂಕ ನಮ್ಮ ಮುಂದಿದೆ. ತುಳು ನಾಡ ಸಂಸ್ಕೃತಿ ಅನನ್ಯ ಅನುಭವದ ಕಣಜವಾಗಿದೆ. ಅಂತಹ ನಮ್ಮ ಸಂಸ್ಕೃತಿ ಇಂದಿನ ಯುವ ಪೀಳಿಗೆಯಲ್ಲಿ ಚಿಗುರೊಡೆಯಬೇಕು ಎಂಬುದು ನಮ್ಮ ಉದ್ದೇಶ.

ತುಳುನಾಡಿನಲ್ಲಿ ಆಟಿ ಅಮವಾಸ್ಯೆ ಒಂದು ವೈಶಿಷ್ಟ್ಯ ಪೂರ್ಣವಾದ ಆಚರಣೆಯಾಗಿರುತ್ತದೆ. ಅಂದು ಪ್ರಮುಖವಾಗಿ ಹಾಳೆ ರಸ (ಪಾಳೆದ ಕೆತ್ತೆ)ವನ್ನು ಬೆಳಿಗ್ಗೆ ಖಾಲಿ ಹೊಟ್ಟೆಗೆ ಕುಡಿಯುವುದು, ದಾನ ಬಿಟ್ಟು ತೀರ್ಥ ಸ್ನಾನ ಮಾಡಿ ತಾವು ಕಷ್ಟಪಟ್ಟು ಬೆಳೆಸಿದ ಬೆಳೆಗಳಿಗೆ ಕಳ್ಳಿ ಕಾಪು ಇಡುವುದು ಹಿಂದಿನ ಪರಂಪರೆ. ಈ ಬಗ್ಗೆ ಪೂರ್ಣ ಮಾಹಿತಿಯಿರುವ ಪುಸ್ತಕವನ್ನು ಎರಡು ಪರಿಸ್ಕೃತ ಮುದ್ರಣಗಳಲ್ಲಿ ಮುದ್ರಿಸಿ, ನಮ್ಮ ವಿದ್ಯಾ ಸಂಸ್ಥೆಯಲ್ಲಿ ವಿದ್ಯಾರ್ಜನೆ ಮಾಡುವ ರಾಜ್ಯದ ಬೇರೆ ಬೇರೆ ಜಿಲ್ಲೆಯ ವಿದ್ಯಾರ್ಥಿಗಳ ಹೆತ್ತವರಿಗೆ ಮಾಹಿತಿಯನ್ನು ನೀಡುತ್ತಾ ಬಂದಿದ್ದೇವೆ. ಆಟಿ ಅಮವಾಸ್ಯೆ ದಿನ ವೈಜ್ಞಾನಿಕ ಯುಗ ಒಪ್ಪುವ ದಿವ್ಯೌಷದ ಹಾಳೆರಸವನ್ನು ಸಂಸ್ಥೆಯ ಎಲ್ಲಾ ಮಕ್ಕಳು ಸ್ವೀಕರಿಸಿ ದಿನನಿತ್ಯದ ಕಾರ‍್ಯಕ್ರಮ ಮುಂದುವರಿಯುತ್ತದೆ.

ಪ್ರತಿವರ್ಷ ಸುಮಾರು 50 ರಿಂದ 60  ಔಷದಿಯ ಗುಣವುಳ್ಳ ತುಳುನಾಡ ತಿಂಡಿ-ತಿನಿಸುಗಳನ್ನು ತಯಾರಿಸಿ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಉಣ ಬಡಿಸುವ ವೈಶಿಷ್ಟ್ಯ ಪೂರ್ಣ ಕಾರ‍್ಯಕ್ರಮವೊಂದನ್ನು ನಮ್ಮ ವಿದ್ಯಾಸಂಸ್ಥೆ ನಡೆಸಿಕೊಂಡು ಬರುತ್ತಿದೆ. ಮಧ್ಯಾಹ್ನ ಸಭಾ ಕಾರ‍್ಯಕ್ರಮದಲ್ಲಿ ಪರಿಣತರಿಂದ ಆಟಿ ಅಮವಾಸ್ಯೆ ಕುರಿತು ತಿಳುವಳಿಕೆ ನೀಡುವುದು, ತುಳುವ ಗುಡಿಕೈಗಾರಿಕೆ, ಭೂತರಾಧನೆ, ನಾಟಿ ವೈದ್ಯ, ಜೋತಿಷ್ಯ ಹೀಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ತುಳುವ ಮಾತೆಯ ಸೇವ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರವನ್ನು ಗುರುತಿಸಿ ನಗದಿನೊಂದಿಗೆ ಗೌರವಿಸಿ ಅವರನ್ನು ಸಮಾಜಕ್ಕೆ ಪರಿಚಯಿಸುವ ಕಾರ‍್ಯಕ್ರಮವೊಂದು ಪ್ರಚಾರ ಬಯಸದೆ ಪ್ರತಿವರ್ಷ ನಡೆದು ಬರುತ್ತಿದೆ.

ಪ್ರತಿವರ್ಷದಂತೆ ಈ ವರ್ಷವೂ ದಿನಾಂಕ 11-08-2018ರಂದು ಮಾನ್ಯ ಶ್ರೀ ಸೇಸಪ್ಪ.ರೈ ಕಾರ‍್ಯದರ್ಶಿ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ ರಾಮಕುಂಜ ಇವರ ಅಧ್ಯಕ್ಷತೆಯಲ್ಲಿ, ಉದ್ಘಾಟಕರಾಗಿ ಡಾ| ಗಿರೀಶ್ .ಕೆ.ಜಿ. ಹರಿಹರ ಪಲ್ಲತ್ತಡ್ಕ, ಗಣ್ಯ ಅತಿಥಿಗಳಾಗಿ ಆಟಿ ಅಮವಾಸ್ಯೆಯ ವೈಶಿಷ್ಟ್ಯಗಳನ್ನು ಮಾನ್ಯ ಶ್ರೀಮತಿ ಮಂಜುಳಾ ಶೆಟ್ಟಿ ಉಪನ್ಯಾಸಕಿ, ಸರಕಾರಿ ಬಿ.ಎಡ್.ಕಾಲೇಜು.ಕುಡ್ಲ ಇವರು ನೀಡಲಿರುವರು. ಈ ಕಾರ‍್ಯಕ್ರಮದಲ್ಲಿ ಶ್ರೀಮತಿ ಶಿವಮ್ಮ.(ಪುಲ-ಮರ್ದ್‌ದ, ದೈ-ಬೇರೆನ್ಲ)ಪಂಡಿತೆ, ಪಂಚಲಾಜೆ ಬಾರ‍್ಯ ಗ್ರಾಮ, ಶ್ರೀಮತಿ ಭವಾನಿ ನಾಟಿ ವೈದ್ಯೆ, ನಡುಗುಡ್ಡೆ ಆಲಂಕಾರು ಇವರನ್ನು ಸನ್ಮಾನಿಸಲಾಗುವುದು. ಆಟಿ ಅಮವಾಸ್ಯೆ ಆಚರಣೆಯನ್ನು ನಮ್ಮ ಸಂಸ್ಥೆಯಲ್ಲಿ ವಿಶಿಷ್ಟ ರೀತಿಯಲ್ಲಿ ಆಚರಿಸಿಕೊಂಡು ಬರುತ್ತಿದ್ದೇವೆ.