Contact : +91 9663 755 105 / sremramakunja@gmail.com

63ನೇ ಕನ್ನಡ ರಾಜೋತ್ಸವ ಆಚರಣೆ

 

ಶ್ರೀರಾಮಕುಂಜೇಶ್ವರ ಆ.ಮಾ.ಪ್ರೌ ಹಾಗೂ ಪ್ರಾ.ಶಾಲೆಯಲ್ಲಿ 63ನೇ ಕನ್ನಡ ರಾಜೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಶಾಲಾ ಮುಖ್ಯಗುರು ಗಾಯತ್ರಿ .ಯು.ಎನ್ ಧ್ವಜಾಹರೋಣ ನೇರವೇರಿಸಿ ರಾಜೋತ್ಸವದ ಮಹತ್ವವನ್ನು ವಿವರಿಸಿದರು. ಶಾಲಾ ಕನ್ನಡ ವಿಭಾಗದ ಶಿಕ್ಷಕಿಯರಾದ ರಾಜೇಶ್ವರಿ, ರಮ್ಯ.ರೈ ಅವರು ಕನ್ನಡ ರಾಜೋತ್ಸವ ಆಚರಣೆಯ ಕುರಿತಾದ ವಿಷಯಗಳನ್ನು ಮಂಡಿಸಿದರು. ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನೇರವೇರಿತು. ನಂತರ ವಿದ್ಯಾರ್ಥಿಗಳಿಗೆ ಸಿಹಿತಿಂಡಿ ವಿತರಿಸಲಾಯಿತು. ಕಾರ್ಯಕ್ರವನ್ನು ವಿದ್ಯಾರ್ಥಿ ಸಂಕಲ್ಪ್.ಬಿ.ಆರ್ ನಿರೂಪಿಸಿದರು. ವೇದಿಕೆಯಲ್ಲಿ ಆಡಳಿತಾಧಿಕಾರಿ ಆನಂದ್.ಎಸ್.ಟಿ, ದೈಹಿಕ ಶಿಕ್ಷಕರಾದ ಪ್ರೇಮ, ವಾಸಪ್ಪ, ಸಹಶಿಕ್ಷಕರಾದ ಹರೀಶ್, ವಸಂತ್, ವೆಂಕಟೇಶ್, ಸವಿತಾ, ಪುಷ್ಪ, ಅನಿತಾ, ಹೇಮಲತಾ, ಭವ್ಯ ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗ ಮೊದಲಾದವರು ಉಪಸ್ಥಿತರಿದ್ದರು.