Contact : +91 9449 283 025 / sremramakunja@gmail.com

ಎಲ್ ಪಿ ಗ್ಯಾಸ್ ನ ಅಪಾಯಗಳು ಮತ್ತು ಸುರಕ್ಷತಾ ಕ್ರಮ

ದಿನಾಂಕ 22/07/2015ರಂದು ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮದಲಿ ಎಲ್ ಪಿ ಗ್ಯಾಸ್ ನ ಅಪಾಯಗಳು ಮತ್ತು ಸುರಕ್ಷತಾ ಕ್ರಮದ ಬಗ್ಗೆ ಮಾರ್ಕೆಟಿಂಗ್ ಡೈರೆಕ್ಟರ್ ಶ್ರೀ ಜಯಕುಮಾರ್ ಇವರು ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. ಎಲ್ ಪಿ ಗ್ಯಾಸ್ ಸಿಲಿಂಡರ್‌ನ ಪೈಪನ್ನು ಪ್ರತಿ 5 ವರ್ಷಕ್ಕೊಮ್ಮೆ ಬದಲಾವಣೆ ಮಾಡುತ್ತಿರಬೇಕು. ಹಾಗೆಯೇ ಸಿಲಿಂಡರನ್ನು ಖರೀದಿ ಮಾಡಿ ಅದನ್ನು ರೆಗ್ಯುಲೇಟರ್ ಗೆ ಸಿಕ್ಕಿಸು ಸಂಧರ್ಭದಲ್ಲಿ ಶಬ್ಧ ಬಂದರೆ ಅನಾಹುತ ಕಟ್ಟಿಟ್ಟ ಬುತ್ತಿ. ಎಣ್ಣೆ ತಾಗಿ ಸ್ಟೌಗೆ ಸಿಕ್ಕಿಸಿದ ಪೈಪ್ ಜಾರಿದಾಗಲೂ ಅನಾಹುತ ಖಂಡಿತ. ಇಷ್ಟೆಲ್ಲಾ ಅಪಾಯಗಳನ್ನು ತಪ್ಪಿಸಲು ಗ್ಯಾಸ್ ಫ್ಯೂಸ್ ನ ಅಳವಡಿಕೆಯಿಂದ ಅನಾಹುತ ಆಗುವ ಸಂಧರ್ಭದಲ್ಲಿ ತನ್ನಷ್ಟಕ್ಕೆ ತಾನೇ ಬರುವ ಗ್ಯಾಸ್ ಸಂಪರ್ಕ ಕಡಿದುಕೊಳ್ಳುತ್ತದೆ ಎಂದು ಪ್ರಾಯೋಗಿಕವಾಗಿ ತಿಳಿಯಪಡಿಸಿದರು. ಸಂಸ್ಥೆಯಲ್ಲಿ ಸಂಸ್ಥೆಯ ಕಾರ್ಯದರ್ಶಿಯವರಾದ ಶ್ರೀ ಕೆ ಸೇಸಪ್ಪ ರೈ ಹಾಗೂ ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಗಾಯತ್ರಿ ಯು ಎನ್ ಹಾಗೂ ಸಂಸ್ಥೆಯ ಶಿಕ್ಷಕ ವರ್ಗದವರು ಉಪಸ್ಥಿತರಿದ್ದರು.