Contact : +91 9663 755 105 / sremramakunja@gmail.com

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ

ಸಬಳೂರು ಉನ್ನತಿ ಹಿ.ಪ್ರಾ. ಶಾಲೆಯಲ್ಲಿ ಜರಗಿದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ರಾಮಕುಂಜದ ಶ್ರೀರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಪ್ರಾಥಮಿಕ ಹಿರಿಯ ಮತ್ತು ಕಿರಿಯ ವಿಭಾಗದ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಮಗ್ರ ಪ್ರಶಸ್ತಿ ಪಡೆದುಕೊಂಡರು.

 

ಹಿರಿಯ ಪ್ರಾಥಮಿಕ : ಇಂಗ್ಲೀಷ್ ಕಂಠಪಾಠ ಯೊಗೀಂದ್ರ ದ್ವಿತೀಯ, ಸಂಸ್ಕøತ್ ಕಂಠಪಾಠ ಸುಧನ್ವ ಕೃಷ್ಣ ತೃತೀಯ, ಉರ್ದು ಕಂಠಪಾಠ ಫಾತಿಮ ಸುನೈನ ತೃತೀಯ, ಮರಾಠಿ ಕಂಠಪಾಠ ಗುರುಕಿರಣ ದ್ವಿತೀಯ, ತುಳು ಕಂಠಪಾಠ ಯಶ್ವಿತ್.ರೈ ದ್ವಿತೀಯ, ಧಾರ್ಮಿಕ ಪಠಣ ಸಂಸ್ಕøತ ಮೈತ್ರಿ ದ್ವಿತೀಯ, ಲಘು ಸಂಗೀತ ಮೇಘ ತೃತೀಯ, ಡ್ರಾಯಿಂಗ್ ಬೆನಕೇಶ ದ್ವಿತೀಯ, ಅಭಿನಯ ಗೀತೆ ಸ್ಪೂರ್ತಿ ಪ್ರಥಮ, ಭಕ್ತಿಗೀತೆ ಶ್ರಾವ್ಯ ತೃತೀಯ, ಆಶುಭಾಷಣ ರಾಘವೇಂದ್ರ ಪ್ರಥಮ, ಜನಪದ ನೃತ್ಯ ಬೆನಕೇಶ ಬಳಗ ದ್ವಿತೀಯ, ಕೋಲಾಟ ರಾಶಿ ಬಳಗ ದ್ವಿತೀಯ, ಕವ್ವಾಲಿ ಮೇಘ ಬಳಗ ತೃತೀಯ, ಯಕ್ಷಗಾನ ಬೆನಕೇಶ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ.

 

ಕಿರಿಯ ಪ್ರಾಥಮಿಕ : ಇಂಗ್ಲೀಷ್ ಕಂಠಪಾಠ ಶ್ರೀಗುರು ಪ್ರಥಮ, ಹಿಂದಿ ಕಂಠಪಾಠ ಭೌತಿಕ ಪ್ರಥಮ, ಸಂಸ್ಕøತ ಕಂಠಪಾಠ ಅನಿರುದ್ಧ ಪ್ರಥಮ, ಉರ್ದು ಕಂಠಪಾಠ ಖತೀಜ ಜಾಹಿಮ ತೃತೀಯ, ಧಾರ್ಮಿಕ ಪಠಣ ಅರೇಬಿಕ್ ಖತೀಜ ಜಾಹಿಮ ತೃತೀಯ, ಧಾರ್ಮಿಕ ಪಠಣ ಸಂಸ್ಕøತ ಕೆ.ಪ್ರಣವ ರಾವ್ ತೃತೀಯ, ಲಘು ಸಂಗೀತ ಭೌತಿಕ ಪ್ರಥಮ, ಡ್ರಾಯಿಂಗ್ ವಂಶಿ ಪ್ರಥಮ, ಕ್ಲೇ ಮಾಡಲಿಂಗ್ ಶ್ರೀಶ ತೃತೀಯ, ಭಕ್ತಿಗೀತೆ ಪ್ರಜ್ವಲ್.ಎಸ್ ತೃತೀಯ, ಆಶುಭಾಷಣ ಅಕ್ಷಯ್ ದ್ವಿತೀಯ, ಯಕ್ಷಗಾನ ಗಣ್ಯಶ್ರೀ ಪ್ರಥಮ, ರಸಪ್ರಶ್ನೆ ಶ್ರೀಗುರು ಬಳಗ ತೃತೀಯ, ಬಹುಮಾನ ಪಡೆದುಕೊಂಡಿದ್ದಾರೆ. ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ.ರೈ , ಪ್ರಾಥಮಿಕ ಶಾಲಾ ಮುಖ್ಯಗುರು ಲೋಹಿತ, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದರು.