Contact : +91 9663 755 105 / sremramakunja@gmail.com

Green Day Celebration

ಶ್ರೀ ರಾಮಕುಂಜೇಶ್ವರ ಕಿಂಡರ್ ಗಾರ್ಟನ್‍ನಲ್ಲಿ ದಿನಾಂಕ 23-02-2022 ರಂದು ಗ್ರೀನ್ ಡೇ ಆಚರಿಸಲಾಯಿತು. ಬಾಲ್ಯದಲ್ಲಿ ಬಣ್ಣದ ಅರಿವು ಅತಿ ಸುಲಭದಲ್ಲಿ ಮಕ್ಕಳಿಗೆ ಪರಿಚಯಿಸಲು ವಿವಿಧ ಬಣ್ಣಗಳ ಗುರುತಿಸುವಿಕೆ ಸ್ಪಷ್ಟವಾಗಲು ಈ ಬಾರಿ ಹಸಿರು ಬಣ್ಣವನ್ನು ಮಕ್ಕಳಿಗೆ ಪರಿಚಯಿಸಲಾಯಿತು. ಹಸಿರು ಬಣ್ಣದ ವಿವಿಧ ಕ್ರಾಫ್ಟ್ ಗಳು ಬಲೂನುಗಳು, ಆಟಿಕೆಗಳು, ಹಸಿರು ಬಣ್ಣದ ವಿವಿಧ ಪರಿಕರಗಳನ್ನು ಒಂದೇ ಕಡೆ ಜೋಡಿಸಿ, ಅಲಂಕರಿಸಿ ಗ್ರೀನ್ ಡೇ ಆಚರಿಸುವುದರೊಂದಿಗೆ ಹಸಿರು ಬಣ್ಣದಿಂದ ಕೂಡಿದ ಪೇಂಟಿಂಗ್, ಡ್ರಾಯಿಂಗ್ ಮಾಡುವ ಮೂಲಕ ಬಣ್ಣದ ತಿಳುವಳಿಕೆ ಮೂಡಿಸಲು ಈ ಬಾರಿ ಗ್ರೀನ್ ಡೇ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಕೆ ಸೇಸಪ್ಪ ರೈ, ಪ್ರಾಥಮಿಕ ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಅಕ್ಷತಾ ಟಿ, ಶಿಕ್ಷಕ ವೃಂದ ಹಾಗೂ ಶಾಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.