Contact : +91 9663 755 105 / sremramakunja@gmail.com

ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯ 2 ವಿದ್ಯಾರ್ಥಿಗಳು ಇನ್ಸ್‍ಫೇರ್ ಅವಾರ್ಡ್ ಮಾನಕ್‍ಗೆ ಆಯ್ಕೆ

ಡಿಪಾರ್ಟ್‍ಮೆಂಟ್ ಆಫ್ ಸೈನ್ಸ್ ಆ್ಯಂಡ್ ಟೆಕ್ನೋಲಜಿ ಆ್ಯಂಡ್ ನ್ಯಾಶನಲ್ ಇನ್ನೋವೇಶನ್ ಪೌಂಡೇಶನ್ ಗಾರ್ಮೆಂಟ್ ಆಫ್ ಇಂಡಿಯಾ ಇದರ ವತಿಯಿಂದ ನಡೆಯುವ ಇನ್ಸ್‍ಫೇರ್ ಅವಾರ್ಡ್ ಮಾನಕ್ (INSPIRE AWARD MANAK) 2020-21 ಗೆ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯ 2 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಪ್ರಾಥಮಿಕಶಾಲಾ ವಿಭಾಗದ 6ನೇ ತರಗತಿಯ ಸ್ಪೂರ್ತಿ ಕೆ ಹಾಗೂ ಪ್ರೌಢಶಾಲಾ ವಿಭಾಗದ 8 ನೇ ತರಗತಿಯ ಶಶಾಂಕ್ ಜೆ ಶೆಟ್ಟಿ ಇವರು ತಲಾ 10,000 ಧನ ಸಹಾಯವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಸಂಸ್ಥೆಯ ಆಡಳಿತ ಮಂಡಳಿಯವರು ಮತ್ತು ಶಾಲಾ ಮುಖ್ಯೋಪಾಧ್ಯಾಯಿನಿಯವರು ವಿದ್ಯಾರ್ಥಿಗಳಿಗೆ ಸಹಕರಿಸುವರು ಮತ್ತು ವಿಜ್ಞಾನ ಶಿಕ್ಷಕರು ಮಾರ್ಗದರ್ಶನ ನೀಡಲಿದ್ದಾರೆ.