Contact : +91 9663 755 105 / sremramakunja@gmail.com

ಕ್ರೀಡಾಕೂಟ 2016-17

Chidananda-pic

Jyothika-pic

ಸಾರ್ವಜನಿಕ ಶಿಕ್ಷಣಾ ಇಲಾಖಾ ವತಿಯಿಂದ ಜರುಗಿದ 2016-17 ನೇ  ಸಾಲಿನ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ವೈಯಕ್ತಿಕ ಚಾಂಪಿಯನ್ ಹಾಗೂ ತಂಡ ಪ್ರಶಸ್ತಿಯೊಂದಿಗೆ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಪ್ರೌಢ ಶಾಲೆಯಲ್ಲಿ ನವೆಂಬರ್ 4 ಮತ್ತು 5 ರಂದು ಜರುಗಿದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ವಿವಿಧ ಪ್ರಶಸ್ತಿಗಳನ್ನು ಗಳಿಸಿ ಕೋಟಿ – ಚೆನ್ನಯ ಕ್ರೀಡಾಂಗಣ ಪಂಜ ಸುಳ್ಯ ಇಲ್ಲಿ ಜರುಗಿದ ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ ಜ್ಯೋತಿಕಾ ಪಿ ರೈ ಹಾಗೂ ಚಿದಾನಂದ ಭಾಗವಹಿಸಿ ಚಿದಾನಂದ ಕೋಲ್ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದು 25/11/2016 ರಂದು ಧಾರವಾಡದಲ್ಲಿ ನಡೆಯುವ  ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ. ಜ್ಯೋತಿಕಾ ಪಿ ರೈ  ವಿದ್ಯಾಭಾರತಿ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ನವೆಂಬರ್ 23/11/2016 ರಿಂದ 25/11/2016 ವರೆಗೆ ಭುವನೇಶ್ವರದಲ್ಲಿ ನಡೆಯುವ ವಿದ್ಯಾಭಾರತಿ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಗುಂಡು ಎಸೆತದ ಸ್ಪರ್ಧೆಯಲ್ಲಿ ನಮ್ಮ ಸಂಸ್ಥೆಯನ್ನು ಪ್ರತಿನಿಧಿಸುತ್ತಿದ್ದಾಳೆ.