Contact : +91 9663 755 105 / sremramakunja@gmail.com

ಪೋಷಕರ ಸಭೆ ಹಾಗೂ ಕಬ್ ಬುಲ್ ಬುಲ್ ದಳದ ಉದ್ಘಾಟನಾ ಸಮಾರಂಭ

 

ಪೋಷಕರ ಸಭೆ ಹಾಗೂ ಕಬ್ ಬುಲ್ ಬುಲ್ ದಳದ ಉದ್ಘಾಟನಾ ಸಮಾರಂಭ ಜುಲೈ 1 ಶನಿವಾರದಂದು ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು.

 

ಸಂಸ್ಥೆಯ ಕಾರ್ಯದರ್ಶಿ ಶ್ರೀಯುತ ಸೇಸಪ್ಪ ರೈ ಕಾರ್ಯಕ್ರಮವನ್ನು ಉದ್ಘಾಟಿಸಿ ಶಾಲೆಯ ನಿಯಮ ಹಾಗೂ ಇನ್ನಿತರ ವಿಚಾರಗಳ ಬಗ್ಗೆ ಪಾಲಕರಿಗೆ ಮಾಹಿತಿ ನೀಡಿದರು. ಸಂಸ್ಥೆಯ ಆಡಳಿತಾಧಿಕಾರಿ ಶ್ರೀಯುತ ಆನಂದ್‌ರವರು ಮಾತನಾಡಿ ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಜವಾಬ್ದಾರಿ ಬಹಳಷ್ಟಿದೆ ಎಂದರು.

 

ಗುಣಮಟ್ಟದ ಶಿಕ್ಷಣದ ಜೊತೆಗೆ ಮಕ್ಕಳಲ್ಲಿ ಶಿಸ್ತು ಕ್ರಿಯಾಶೀಲತೆ ಮೂಡಿಸಲು ಸಹೋದರತ್ವ ಸಹಜೀವನವನ್ನು ಬೆಳೆಸಲು ಉತ್ತಮ ಹೊಣೆಗಾರಿಕೆಯುಳ್ಳ ವ್ಯಕ್ತಿಗಳಾಗಿ ರೋಪುಗೊಳ್ಳಲು ಕಬ್ ಬುಲ್ ಬುಲ್‌ದಳ ಸಹಕಾರಿಯಾಗಿದೆ ಎಂದು ದಳದ ಕುರಿತು ದೈಹಿಕ ಶಿಕ್ಷಕಿ ಶ್ರೀಮತಿ ಪ್ರೇಮ ತಿಳಿಸಿದರು. ಸಂಸ್ಥೆಯ ಮುಖ್ಯಶಿಕ್ಷಕಿ ಶ್ರೀಮತಿ ಗಾಯತ್ರಿ ಉಪಸ್ಥಿತರಿದ್ದರು.

 

ಶ್ರೀ ರಾಮಕುಂಜೇಶ್ವರ ಕಿಂಡರ್ ಗಾರ್ಟನ್ ಮತ್ತು ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಶ್ರೀಮತಿ ಲೋಹಿತಾ ಸ್ವಾಗತಿಸಿದರು. ಸಹಶಿಕ್ಷಕಿ ಸುನಂದಾ ವಂದಿಸಿದರು. ಸಹಶಿಕ್ಷಕಿ ಶ್ರೀಮತಿ ಅಕ್ಷತಾ ಕಾರ‍್ಯಕ್ರಮ ನಿರೂಪಿಸಿದರು.