Contact : +91 9449 283 025 / sremramakunja@gmail.com

ಕ್ಷೇತ್ರೀಯ ಮಟ್ಟದ ಕ್ರೀಡಾಕೂಟ

 

ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ, ರಾಮಕುಂಜ ಇಲ್ಲಿಯ ವಿದ್ಯಾರ್ಥಿಗಳು ವಿಧ್ಯಾಭಾರತಿ ಕರ್ನಾಟಕ ಕ್ಷೇತ್ರೀಯ ಮಟ್ಟದ ಕ್ರೀಡಾಕೂಟವು ದಿನಾಂಕ  01/09/2017 ರಿಂದ 18/09/2017 ರವರೆಗೆ ವಿಜಯವಾಡದ ನಾಗರ್ಜುನ ಯುನಿವರ್ಸಿಟಿ ಕ್ರೀಡಾಂಗಣ ಆಂದ್ರ ಪ್ರದೇಶದಲ್ಲಿ ಜರುಗಿದ ಕ್ಷೇತ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದು ಹಲವಾರು ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ತೀರ್ಥೆಶ್ ಪಿ ಶೆಟ್ಟಿ ನಡಿಗೆ ಸ್ಪರ್ಧೆಯಲ್ಲಿ ಪ್ರಥಮ, ಗಗನ್ ಎಚ್ 200ಮೀ ಪ್ರಥಮ, ಮನೋಜ್ ಬಿ.ಪಿ ನಡಿಗೆ ಸ್ಪರ್ಧೆಯಲ್ಲಿ ದ್ವಿತೀಯ, ಉಪನಿಷತ್ ಕೋಲುಜಿಗಿತ ದ್ವಿತೀಯ, ಗೌತಮ್ ಎಮ್ 200ಮೀ ದ್ವಿತೀಯ ಪ್ರಶಸ್ತಿಗಳನ್ನು ಗಳಿಸಿ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಿಗೆ ಆಯ್ಕೆಯಾಗಿರುತ್ತಾರೆ.