Contact : +91 9663 755 105 / sremramakunja@gmail.com

ವಿಶ್ವಗುರು ಪೇಜಾವರ ಶ್ರೀಯವರಿಗೆ ಶ್ರದ್ಧಾಂಜಲಿ ಅರ್ಪಣೆ

ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದಿನಾಂಕ 29/12/2020 ರಂದು ಶ್ರೀ ಶ್ರೀ ಶ್ರೀ ವಿಶ್ವೇಶ ತೀರ್ಥ ಪ್ರಸನ್ನ ಸ್ವಾಮೀಜಿಯವರ ಪ್ರಥಮ ಪುಣ್ಯತಿಥಿಯ ಸಂದರ್ಭದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ
ಕಾರ್ಯದರ್ಶಿಯವರಾದ ಶ್ರೀ ಕೆ ಸೇಸಪ್ಪ ರೈ ಮಾತನಾಡಿ, ಶ್ರೀಗಳು ಸನ್ಯಾಸ ವೃತವನ್ನು ತನ್ನ ಕೊನೆಯವರೆಗೂ ಪಾಲಿಸಿ, ತನ್ನಧೀಶಕ್ತಿಯನ್ನು ಸಮಾಜದ ಅಭಿವೃಧ್ದಿಗೆ ಧಾರೆಯೆರೆಯುತ್ತಾ ವಿಶ್ವಗುರು ಆದ ಸಂದರ್ಭವನ್ನು ಸ್ಮರಿಸಿಕೊಂಡರು. ಸಂಸ್ಥೆಯ ಮುಖ್ಯಗುರುಗಳಾದ ಶ್ರೀಮತಿ ಗಾಯತ್ರಿ ಯು ಎನ್ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಲೋಹಿತ ಎ, ಆಡಳಿತಾಧಿಕಾರಿಯವರಾದ ಶ್ರೀ ಆನಂದ್ ಎಸ್ ಟಿ ಹಾಗೂ ಶೈಕ್ಷಣಿಕ ಸಲಹೆಗಾರರಾದ ರವೀಂದ್ರ ದರ್ಬೆ, ಸಂಸ್ಥೆಯ ಶಿಕ್ಷಕ- ಶಿಕ್ಷಕೇತರ ಸಿಬ್ಬಂದಿ ಉಪಸ್ಥಿತರಿದ್ದರು.