Contact : +91 9663 755 105 / sremramakunja@gmail.com

ಕ್ಲಸ್ಟರ್ ಮಟ್ಟದ ಕ್ರೀಡಾಕೂಟ

 

ಬೆಥನಿ ವಿದ್ಯಾಸಂಸ್ಥೆ ನೂಜಿಬಾಳ್ತಿಲದಲ್ಲಿ ಎರಡು ದಿನಗಳ ಕಾಲ ಕಡಬ ಕ್ಲಸ್ಟರ್ ಮಟ್ಟದ ಕ್ರೀಡಾಕೂಟ ನಡೆಯಿತು. ಶ್ರೀರಾಮಕುಂಜೇಶ್ವರ ಆ.ಮಾ.ಪ್ರೌ.ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಅ.3 ಮತ್ತು 4 ರಂದು ಪುತ್ತೂರಿನ ಸೈಂಟ್ ಪಿಲೋಮಿನ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ಜರುಗುವ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ 20 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ವೈಯಕ್ತಿಕ ಚಾಂಪಿಯನ್ ಶಿಪ್ ಪ್ರಶಸ್ತಿ ಜಯಗೋಪಾಲ(8ನೇ), ಪ್ರಾಥಮಿಕ ಬಾಲಕರ ವಿಭಾಗದ ಪ್ರಥಮ ತಂಡಪ್ರಶಸ್ತಿ, 8ನೇ ಬಾಲಕರ ವಿಭಾಗದ ಪ್ರಥಮ ತಂಡಪ್ರಶಸ್ತಿ ಹಾಗೂ 17ರ ವಯೋಮಾನದ ಬಾಲಕರ ದ್ವಿತೀಯ ತಂಡ ಪ್ರಶಸ್ತಿಯನ್ನು ಪಡೆಯುವುದರೊಂದಿಗೆ ಸಂಸ್ಥೆಗೆ ಕೀರ್ತಿಯನ್ನು ತರುವಲ್ಲಿ ಯಶಸ್ವಿಯಾಗಿದ್ದಾರೆಂದು ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಶಾಲಾ ಮುಖ್ಯಗುರು ಗಾಯತ್ರಿ.ಯು.ಎನ್, ದೈಹಿಕ ಶಿಕ್ಷಕರಾದ ಪ್ರೇಮಾ ಮತ್ತು ವಾಸಪ್ಪ ಆಡಳಿತಾಧಿಕಾರಿ ಆನಂದ್.ಎಸ್.ಟಿ ಉಪಸ್ಥಿತರಿದ್ದರು.