Contact : +91 9663 755 105 / sremramakunja@gmail.com

ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ


ವಿದ್ಯಾಭಾರತಿ ದಕ್ಷಿಣಕನ್ನಡ ಪ್ರಾಂತೀಯ ಕ್ರೀಡಾಕೂಟ ಸಂತ ಮೀರಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ಅಂಗೋಲ ಬೆಳಗಾವಿಯಲ್ಲಿ ಆ.23ರಿಂದ 25ರವರೆಗೆ ಜರುಗಿದ ವಿದ್ಯಾಭಾರತೀಯ ರಾಜ್ಯಮಟ್ಟದ ಕ್ರೀಡಾಕೂಟ ನಡೆಯಿತು. ಶ್ರೀರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ದೈಹಿಕ ಶಿಕ್ಷಕಿ ಪ್ರೇಮಾ ಅವರ ಮಾರ್ಗದರ್ಶನದಲ್ಲಿ ತೆಲಂಗಾಣದಲ್ಲಿ ನಡೆಯಲಿರುವ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಹಲವು ಪ್ರಶಸ್ತಿಗಳು : ಚೇತನ್.ಟಿಎನ್.(8ನೇ)600ಮೀ.ಪ್ರಥಮ, 400ಮೀ.ತೃತೀಯ, ಜಯಗೋಪಾಲ(8ನೇ) 4*100ಮೀ.ಪ್ರಥಮ, ಮನೋಜ್.ಬಿ.ಪಿ.(10ನೇ) ವಾಕ್ ರೇಸ್ ಪ್ರಥಮ, ಸುಶಾಂತ್(10ನೇ) ವಾಕ್ ರೇಸ್ ದ್ವಿತೀಯ , ದರ್ಶನ್.ವೈ.ವಿ(10ನೇ) ಜಾವೆಲಿನ್ ದ್ವಿತೀಯ, ಸಂಕಲ್ಪ(9ನೇ) ಎತ್ತರ ಜಿಗಿತ ದ್ವಿತೀಯ, ಯಶಸ್ವಿನಿ(8ನೇ) ಚಕ್ರಎಸೆತ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ.ರೈ ಪ್ರಕಟಣೆಗೆ ತಿಳಿಸಿದ್ದಾರೆ.