Contact : +91 9663 755 105 / sremramakunja@gmail.com

ಕೆಡ್ಡಸ ದಿನ ಹಾಗೂ ತುಳು ಶಿಕ್ಷಕರ ಶೈಕ್ಷಣಿಕ ಕಾರ್ಯಗಾರ

ದ.ಕ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯ ತುಳು ಶಿಕ್ಷಕರ ಶೈಕ್ಷಣಿಕ ಕಾರ್ಯಗಾರ ಮತ್ತು ಕೆಡ್ಡಸ ದಿನ ಕಾರ್ಯಕ್ರಮ ಫೆ.11 ಮಂಗಳವಾರದಂದು ಶ್ರೀರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಲಿದೆ.

ಈ ಕಾರ್ಯಕ್ರಮದಲ್ಲಿ ಭೂಮಿ ಪೂಜೆ ಹಾಗೂ ಕೆಡ್ಡಸದ ಮಾಹಿತಿಗಾರರಾಗಿ ನಮ್ಮ ಕುಡ್ಲ ಚಾನೆಲ್‍ನ ಪ್ರಿಯಾ ಹರೀಶ್ ಶೆಟ್ಟಿ, ಸಭೆಯ ಅಧ್ಯಕ್ಷತೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ದಯಾನಂದ ಕತ್ತಲ್ ಸಾರ್, ಮುಖ್ಯ ಅಥಿತಿಗಳಾಗಿ ಪುತ್ತೂರಿನ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್.ಸಿ, ನಮ್ಮ ಟಿ.ವಿ ಚಾನೆಲ್‍ನ ಆಡಳಿತ ನಿರ್ದೇಶಕರಾದ ಶಿವರಣ ಶೆಟ್ಟಿ , ಗೌರವಾನ್ವಿತ ಅತಿಥಿಗಳಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರುಗಳಾದ ನಿಟ್ಟೆ ಶಶಿಧರ್ ಶೆಟ್ಟಿ, ಕಡಬ ದಿನೇಶ್.ರೈ, ರವೀಂದ್ರ ಶೆಟ್ಟಿ.ಬಳಂಜ, ಇವರು ಭಾಗವಹಿಸಲಿದ್ದಾರೆ. ಅಲ್ಲದೇ, ತುಳು ಶಿಕ್ಷಕರ ಶೈಕ್ಷಣಿಕ ಕಾರ್ಯಗಾರದಲ್ಲಿ ಪದ್ಯಭಾಗ, ವ್ಯಾಕರಣಕ್ಕೆ – ಶಿಕ್ಷಣ ಸಂಯೋಜಕರು ಕಾಸರಗೋಡು.ಡಾ.ಶಿವರಾಮ ಶೆಟ್ಟಿ, ಗದ್ಯಭಾಗ-ಶಾಲಾ ಮುಖ್ಯಗುರು, ಪ್ರಗತಿ ಆಂಗ್ಲ ಮಾಧ್ಯಮ ಕಾಣಿಯೂರು ಗಿರಿಶಂಕರ ಸುಲಾಯ, ಪ್ರಶ್ನೆ ಪತ್ರಿಕೆ – ಶ್ರೀಮತಿ ಸರಿತಾ ರಾಮಕುಂಜ ಶಿಕ್ಷಕಿ ಶ್ರೀರಾ.ಆಂ.ಮಾ.ಶಾಲೆ ರಾಮಕುಂಜ, ಪೊಸ ಪದೊಕುಲೆ ಪೊಲಬು, ಪಠ್ಯ ಪೋಷಕ ಕತೆಕುಲು – ತುಳು ಸಾಹಿತಿ ಪುಚ್ಚೇರಿ ಬೆದ್ರ ಉಗ್ಗಪ್ಪ ಪೂಜಾರಿ, ಪಠ್ಯ ಪೋಷಕ ಜನಪದಸಾಹಿತ್ಯ –ಶಿಕ್ಷಣ ಸಂಯೋಜಕರು ತುಳು ಸ್ನಾತಕೋತ್ತರ ಅಧ್ಯಯನ ವಿಭಾಗ & ಮಂಜುನಾಥೇಶ್ವರ ತುಳು ಪೀಠ ಮಂಗಳೂರು ಡಾ.ಮಾಧವ ಎಂ.ಕೆ ಇವರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ಉಡುಪಿ ಹಾಗೂ ದ.ಕ ಜಿಲ್ಲೆ ಸೇರಿದಂತೆ 42 ಶಾಲೆಯ ತುಳು ಶಿಕ್ಷಕರು ಪಾಲ್ಗೊಳ್ಳಲಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ.ರೈ ಪ್ರಕಟಣೆಗೆ ತಿಳಿಸಿದ್ದಾರೆ.