Contact : +91 9663 755 105 / sremramakunja@gmail.com

‘ಕೊರೋನ ಜಾಗೃತಿ- ಮಾಹಿತಿ’ ಕಾರ್ಯಾಗಾರ

ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ, ರಾಮಕುಂಜ ಇಲ್ಲಿ ದಿನಾಂಕ 15.09.2020ರಂದು ‘ಕೊರೋನ ಜಾಗೃತಿ- ಮಾಹಿತಿ’ ಎಂಬ ವಿಶೇಷ ಕಾರ್ಯಕ್ರಮವು ಶಾಲಾ ಸಭಾಂಗಣದಲ್ಲಿ ಸ್ವದೇಶಿ ಜಾಗರಣ ವೇದಿಕೆ ದಕ್ಷಿಣ ಪ್ರಾಂತ್ಯದ ಅಧ್ಯಕ್ಷರಾದ ಶ್ರೀಯುತ ಜಗದೀಶ್ ಇವರ ನೇತೃತ್ವದಲ್ಲಿ ಶಿಕ್ಷಕರಿಗೆ ಮಾಹಿತಿ ಕಾರ್ಯಾಗಾರ ನಡೆಯಿತು. ಸಂಸ್ಥೆಯ ಕಾರ್ಯನಿರ್ವಹಣಾ ಕಾರ್ಯದರ್ಶಿ ಶ್ರೀಯುತ ಸೇಸಪ್ಪ ರೈ ಕೆ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ರಾಮಕುಂಜ ವಿದ್ಯಾವರ್ಧಕ ಸಭಾದ ಸಂಚಾಲಕರಾದ ಶ್ರೀಯುತ ನಾರಾಯಣ ಭಟ್ ಟಿ ಹಾಗೂ ಶಾಲಾ ಶಿಕ್ಷಕ- ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀಯುತ ಪ್ರದೀಪ್ ರೈ ಮನವಳಿಕೆ ಉಪಸ್ಥಿತರಿದ್ದರು. ‘ಸ್ವದೇಶಿ ಚಿಂತನೆಯ ಜೊತೆಗೆ ಪ್ರಾಕೃತಿಕವಾಗಿ ದೊರೆಯುವ ಸಸ್ಯಮೂಲಗಳಿಂದ ಮನೆಮದ್ದು ತಯಾರಿಸುವುದರ ಜೊತೆಗೆ ಆತ್ಮಸ್ಥೈರ್ಯ, ದೇಹದ ರೋಗ ನಿರೋಧಕ ಶಕ್ತಿಗಳನ್ನು ಹೆಚ್ಚಿಸುವುದರಿಂದ ಕೊರೋನ ಎಂಬ ಮಹಾಮಾರಿ ಸಾಂಕ್ರಾಮಿಕ ರೋಗದಿಂದ ಮುಕ್ತಿ ಪಡೆಯಬಹುದು ಎಂದು ಶಿಕ್ಷಕರಲ್ಲಿ ಮನೋಸ್ಥೈರ್ಯವನ್ನು ತುಂಬಿದರು.’ ಅದೇ ರೀತಿ ನಮ್ಮ ಸಂಸ್ಥೆಯಲ್ಲಿ ವ್ಯಾಸಂಗ ಮಾಡಲಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಥಮವಾಗಿ ಡಾ. ಗಿರಿಧರ್ ಕಜೆಯವರ ‘ಆರ್ಯುವೇದ ಔಷಧ’ಗಳನ್ನು ಪ್ರಾರಂಭದ ಹತ್ತು ದಿನಗಳವರೆಗೆ ನೀಡುದರ ಮುಖೇನ ರೋಗನಿರೋಧಕ ಶಕ್ತಿ ವೃದ್ಧಿಸುವÀ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಶಾಲಾ ಆಡಳಿತ ಅಧಿಕಾರಿ ಶ್ರೀಯುತ ಆನಂದ ಎಸ್ ಟಿ, ಶೈಕ್ಷಣಿಕ ಸಲಹೆಗಾರರಾದ ಶ್ರೀಯುತ ರವೀಂದ್ರ ದರ್ಬೆ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಗಾಯತ್ರಿ ಯು ಎನ್ ವಂದಿಸಿದರು.