Contact : +91 9663 755 105 / sremramakunja@gmail.com

ಶ್ರೀರಾ.ಆಂ.ಮಾ.ಶಾಲೆಯ ವಿದ್ಯಾರ್ಥಿಗಳು ಫೌಂಡೇಶನ್ ಕೋರ್ಸ್ ಪರೀಕ್ಷೆಯಲ್ಲಿ ತೇರ್ಗಡೆ

ಶಾಲಾ ಮಟ್ಟದಲ್ಲಿ ನಡೆಸಿದ 2019-20ನೇ ಸಾಲಿನ ಫೌಂಡೇಶನ್ ಕೋರ್ಸ್ ಎನ್‍ಟಿಎಸ್‍ಇ, ಜೆಇಇ, ಸಿಇಟಿ, ನೀಟ್ ಮೊದಲಾದ ಪರೀಕ್ಷೆಯಲ್ಲಿ ಶ್ರೀರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಅಂಕ ಗಳಿಸಿ ತೇರ್ಗಡೆ ಹೊಂದಿದ್ದಾರೆ.

ಅತ್ಯುತ್ತಮ ಅಂಕ ಗಳಿಸಿದ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಾದ ಅಂಜಲಿ ಎ.ಆರ್ ಭಟ್(8ನೇ), ಕಾವ್ಯ.ಪಿ(9ನೇ) ಅಂಜಲಿ(8ನೇ), ಲಿಖಿತ್ ಬಿ.ಜೆ(9ನೇ), ಜ್ಞಾನ್ ಕೆ.ಅರಸ್(9ನೇ).

 

ಹಿರಿಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳಾದ ಮೇಘ ಎಸ್.ಪಿ(6ನೇ), ಯಶ್ವಿತ್ ರೈ(7ನೇ), ಗುರುಕಿರಣ್(7ನೇ), ಅಂಕಿತ್ ಯು ಗೌಡ(7ನೇ), ಸಿದ್ಧಾಂತ್ ಜೆ ಶೆಟ್ಟಿ(7ನೇ).

ಪ್ರತಿ ವಾರ ನುರಿತ ಸಂಪನ್ಮೂಲ ವ್ಯಕ್ತಿಯಿಂದ ವಿಶೇಷ ತರಗತಿಗಳು ನಡೆಯುತ್ತಿದ್ದವು. 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ಎನ್‍ಟಿಎಸ್‍ಇ, ನೀಟ್, ಸಿಇಟಿ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಸದುಪಯೋಗ ಪಡೆದುಕೊಂಡರು. ಪೋಷಕರ ಸಹಕಾರದಿಂದ ಫೌಂಡೇಶನ್ ಕೋರ್ಸ್ ನಿರಂತರವಾಗಿ ನಡೆಯುತ್ತದೆ ಎಂದು ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ.ರೈ ಹೇಳಿದರು.
ಈ ನಿಟ್ಟಿನಲ್ಲಿ ಶಾಲಾ ಮುಖ್ಯಗುರು ಗಾಯತ್ರಿ.ಯು.ಎನ್, ಆಡಳಿತಾಧಿಕಾರಿ ಆನಂದ.ಎಸ್.ಟಿ, ಶೈಕ್ಷಣಿಕ ಸಲಹೆಗಾರ ರವೀಂದ್ರ ದರ್ಬೆ ಹಾಗೂ ಶಿಕ್ಷಕರು ಮಾರ್ಗದರ್ಶನ ನೀಡಿದರು.