Contact : +91 9663 755 105 / sremramakunja@gmail.com

ಶಾಲಾ ಮಂತ್ರಿಮಂಡಲ ಚುನಾವಣೆ

 

ಶ್ರೀರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 2018-19 ಸಾಲಿನ ಶಾಲಾ ಮಂತ್ರಿಮಂಡಲ ಚುನಾವಣೆಯು ಕೃತಕ ಇವಿಎಂ ಮತಯಂತ್ರದ ಮೂಲಕ ಪ್ರಜಾಪ್ರಭುತ್ವದ ಮಾದರಿಯ ಸಾರ್ವಜನಿಕ ಮತದಾನದ ಪ್ರಕಾರದಂತೆ ಶಾಂತಿಯುತವಾಗಿ ಜರುಗಿತು. ಶಾಲಾ ಮಂತ್ರಿಮಂಡಲದ ನಾಯಕನಾಗಿ ಸಾತ್ವಿಕ್ ಜಿ.ರೈ(10ನೇ ತರಗತಿ) ಹಾಗೂ ಉಪನಾಯಕನಾಗಿ ಸಂಕಲ್ಪ್ ಬಿ.ಆರ್(9ನೇ ತರಗತಿ) ಆಯ್ಕೆಯಾದರು.

ಸಂಸ್ಥೆಯ ಕಾರ‍್ಯದರ್ಶಿಯಾದ ಕೆ.ಸೇಸಪ್ಪ ರೈ ಇವಿಎಂ ಮತಯಂತ್ರವನ್ನು ನೋಟಾ ಮತದಾನ ಗೈವ ಮೂಲಕ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಶಾಲಾ ಮುಖ್ಯ ಗುರು ಶ್ರೀಮತಿ ಗಾಯತ್ರಿ ಪ್ರಿಸೈಡಿಂಗ್ ಆಫೀಸರ್‌ರಾಗಿ ಸಹಕರಿಸಿದರು. ಶಾಲಾ ಆಡಳಿತಾಧಿಕಾರಿಯಾದ ಶ್ರೀಯುತ ಆನಂದ ಎಸ್.ಟಿ ಇವರ ಸೂಕ್ತ ಮಾರ್ಗದರ್ಶನದಂತೆ ಸಹ ಶಿಕ್ಷಕ ರಾಧಾಕೃಷ್ಣ ಇವರು ಮತದಾನದ ಪ್ರಕ್ರಿಯೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿ, ಮತದಾನ ಪ್ರಕ್ರಿಯೆಯನ್ನು ಸುಸೂತ್ರವಾಗಿ ನಡೆಸಿಕೊಟ್ಟರು. ಶಾಲಾ ಶಿಕ್ಷಕ ಶ್ರೀ ವೆಂಕಟೇಶ್ ಬಿ.ಸಿ. ಇವರು ಕೃತಕ ಇವಿಎಂ ಯಂತ್ರವನ್ನು ಸಿದ್ಧಪಡಿಸಿ, ನಿರ್ವಹಿಸಿದರು. ಚುನಾವಣೆ ಪ್ರಕ್ರಿಯೆಯಲ್ಲಿ ಪೋಲಿಂಗ್ ಆಫೀಸರ್‌ಯಾಗಿ ಶ್ರೀ ಗೋಪಾಲ್.ಎಂ, ಶ್ರೀಮತಿ ಸುಧಾ ಹಾಗೂ ಕುಮಾರಿ ರಕ್ಷಾ ಸಹಕರಿಸಿದರು. ಸಂಸ್ಥೆಯ ಎಲ್ಲಾ ಶಿಕ್ಷಕ ಮತ್ತು ಶಿಕ್ಷಕೇತರ ವೃಂದ ಸಹಕರಿಸಿದರು