Contact : +91 9663 755 105 / sremramakunja@gmail.com

ಓಪನ್ ಕರಾಟೆ ಚಾಂಪಿಯನ್‍ಶಿಪ್‍ನಲ್ಲಿ ಶ್ರೀರಾ.ಆಂ.ಮಾ.ಶಾಲೆಗೆ ದ್ವಿತೀಯ ಸಮಗ್ರ ಪ್ರಶಸ್ತಿ

ಮಂಗಳೂರು ಮಿಲಾಗ್ರಿಸ್ ಸಿಬಿಎಸ್‍ಇ ಶಾಲೆ ಹಂಪನಕಟ್ಟೆಯಲ್ಲಿ ನಡೆದ ಓಪನ್ ಕರಾಟೆ ಚಾಂಪಿಯನ್‍ಶಿಪ್ ವೆಸ್ರ್ಟನ್ ಕಪ್-2019ರ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಶ್ರೀರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ದ್ವಿತೀಯ ಸಮಗ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಫಲಿತಾಂಶ : ನಿರಂಜನ್(6ನೇ)ಕಟಾ ಪ್ರಥಮ, ಕುಮಿಟೆ ಪಥಮ್ರ, ಭುವನ್(6ನೇ) ಕಟಾ ಪ್ರಥಮ, ಕುಮಿಟೆ ಪ್ರಥಮ, ಕೇಸರಿನಂದನ್(6ನೇ) ಕಟಾ ದ್ವಿತೀಯ, ಕುಮಿಟೆ ದ್ವಿತೀಯ, ಕುಶಾಲ್ ಗೌಡ.ಎಸ್.ಸಿ(7ನೇ) ಕಟಾ ಪ್ರಥಮ, ಕುಮಿಟೆ ಪ್ರಥಮ, ಕುಂದನ್.ವಿ(8ನೇ) ಕಟಾ ಪ್ರಥಮ, ಲಿಖಿತ್ ಗೌಡ.ಎಸ್(10ನೇ) ಕಟಾ ದ್ವಿತೀಯ, ಕುಮಿಟೆ ದ್ವಿತೀಯ, ಸುಚಿತ್ ಆಚಾರ್(10ನೇ) ಕಟಾ ಪ್ರಥಮ, ಕುಮಿಟೆ ತೃತೀಯ, ಕೈವಲ್ಯ(10ನೇ) ಕಟಾ ತೃತೀಯ, ಕುಮಿಟೆ ತೃತೀಯ, ಶ್ರೇಯಸ್.ಕೆ.ಎಂ(10ನೇ) ಕಟಾ ಪ್ರಥಮ, ಕುಮಿಟೆ ಪ್ರಥಮ, ದರ್ಶನ್.ವೈ.ಆರ್(10ನೇ) ಕಟಾ ಪ್ರಥಮ, ಕುಮಿಟೆ ಪ್ರಥಮ, ತನುಜ್ ಗೌಡ.ಎಚ್.ಎನ್(10ನೇ) ಕಟಾ ಪ್ರಥಮ, ಕುಮಿಟೆ ತೃತೀಯ, ಮಹದೇವ್ ಸ್ವಾಮಿ(10ನೇ) ಕಟಾ ತೃತೀಯ, ಕುಮಿಟೆ ತೃತೀಯ ಸ್ಥಾನ ಗಳಿಸಿದ್ದಾರೆ.

ದೈಹಿಕ ಶಿಕ್ಷಕರಾದ ಪ್ರೇಮ, ವಾಸಪ್ಪ ಹಾಗೂ ಕರಾಟೆ ಶಿಕ್ಷಕ ಚಂದ್ರಶೇಖರ್ ಕನಕಮಜಲು.ಸುಳ್ಯ ತರಬೇತಿ ನೀಡಿದರು. ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ.ರೈ , ಆಡಳಿತಾಧಿಕಾರಿ ಆನಂದ.ಎಸ್.ಟಿ, ಶಾಲಾ ಮುಖ್ಯಗುರು ಗಾಯತ್ರಿ.ಯು.ಎನ್, ಶೈಕ್ಷಣಿಕ ಸಲಹೆಗಾರ ರವೀಂದ್ರ ಶೆಟ್ಟಿ ದರ್ಬೆ ಹಾಗೂ ಶಿಕ್ಷಕವೃಂದ ಮಾರ್ಗದರ್ಶನ ನೀಡಿದರು.