Contact : +91 9663 755 105 / sremramakunja@gmail.com

ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ

1449276115148ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ನವೆಂಬರ್.29 ರಂದು ಸಂಸ್ಥೆಯ ವಾರ್ಷಿಕ ಕ್ರೀಡಾಕೂಟ ಜರುಗಿತು. ಶ್ರೀ ಪ್ರಶಾಂತ್ ಆರ್.ಕೆ ಅಧ್ಯಕ್ಷರು ಗ್ರಾಮ ಪಂಚಾಯತು ರಾಮಕುಂಜ ಇವರ ಅಧ್ಯಕ್ಷತೆಯಲ್ಲಿ ಕ್ರೀಡಾಕೂಟದ ಉದ್ಘಾಟನೆಯನ್ನು ಧ್ವಜಾರೋಹಣ ಮಾಡುವ ಮುಖಾಂತರ ಶ್ರೀ ಬಾಲಚಂದ್ರ ಜಿ. ದೈ.ಶಿ.ಶಿಕ್ಷಕರು ಸ.ಉ.ಹಿ.ಪ್ರಾ.ಶಾಲೆ ಕೊಲ ಇವರು ನೆರವೇರಿಸಿದರು. ಶ್ರೀ ಕೆ ಸೇಸಪ್ಪ ರೈ ಕಾರ್ಯನಿರ್ವಹಣಾ ಕಾರ್ಯದರ್ಶಿ ಇವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಪುರಂದರ ಅಧ್ಯಕ್ಷರು ಶಿಕ್ಷಕ-ರಕ್ಷಕ ಸಂಘ, ಶ್ರೀಮತಿ ಗಾಯತ್ರೀ ಯು ಎನ್ ಮುಖ್ಯಗುರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು. ವಿದ್ಯಾರ್ಥಿಗಳ ಹೆತ್ತವರಿಗೆ ಹಾಗೂ ಹಿರಿಯ ವಿದ್ಯಾರ್ಥಿಗಳಿಗೆ ಮತ್ತು ಹಾಸ್ಟೆಲ್ ವಿದ್ಯಾರ್ಥಿಗಳಿಗೂ ವಿವಿಧ ಕ್ರೀಡೆಗಳನ್ನು ಏರ್ಪಡಿಸಲಾಯಿತು. ಸಂಸ್ಥೆಯ ಮುಖ್ಯಗುರುಗಳು ಶ್ರೀಮತಿ ಗಾಯತ್ರಿ ಸ್ವಾಗತಿಸಿ ನಿಲಯಪಾಲಕರಾದ ಚೇತನ್ ವಂದಿಸಿದರು. ವಿದಾರ್ಥಿನಿಯರು ಪ್ರಾರ್ಥಿಸಿ ಸಹ ಶಿಕ್ಷಕರಾದ ಶ್ರೀ ರಾಧಾಕೃಷ್ಣ ಕಾರ್ಯಕ್ರಮ ನಿರೂಪಿಸಿದರು.