Contact : +91 9663 755 105 / sremramakunja@gmail.com

ಎಸ್‍ಎಸ್‍ಎಲ್‍ಸಿ ಮರುಮೌಲ್ಯ ಮಾಪನದಲ್ಲಿ ಶೇ.100 ಫಲಿತಾಂಶ

ಮಾರ್ಚ್-ಏಪ್ರಿಲ್ 2018-19ನೇ ಸಾಲಿನ ನಡೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶ್ರೀರಾಮಕುಂಜೇಶ್ವರ ಆ.ಮಾ.ಪ್ರೌಢಶಾಲೆಯ ವಿದ್ಯಾರ್ಥಿ ಶ್ರೇಯಸ್.ಜೆ.ಎಂ ವಿಜ್ಞಾನ ವಿಷಯದಲ್ಲಿ ಅನುತ್ತೀರ್ಣಗೊಂಡಿದ್ದ. ಆದ್ರೆ ಮರು ಮೌಲ್ಯಮಾಪನದಲ್ಲಿ 75.2% ಅಂಕ ಗಳಿಸಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾನೆ, ಇದೀಗ ಶ್ರೀರಾ.ಆ.ಮಾ.ಶಾಲೆಗೆ ಶೇ.100 ಫಲಿತಾಂಶ ಬಂದಿರುತ್ತದೆ ಎಂದು ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ.ರೈ ಪ್ರಕಟಣೆಗೆ ತಿಳಿಸಿದ್ದಾರೆ. ಶಾಲಾಮುಖ್ಯ ಗುರು ಗಾಯತ್ರಿ.ಯು.ಎನ್, ಆಡಳಿತಾಧಿಕಾರಿ ಆನಂದ್.ಎಸ್.ಟಿ, ಶಿಕ್ಷಕರು ಹಾಗೂ ಸಂಸ್ಥೆಯ ಸಿಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದರು.