Shri Ramakunjeshwara Residential English Medium High School, Ramakunja

Latest News

“ತುಳು ಕಲ್ಪಾದಿಲೆನ ಓದು-ಬರವುದ ಕಜ್ಜಕೊಟ್ಯ” ಕಾರ್ಯಕ್ರಮ ಜರುಗಿತು

ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ, ರಾಮಕುಂಜ ಇಲ್ಲಿ ದಿನಾಂಕ 18-01-2022 ನೇ ಮಂಗಳವಾರ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಇದರ ಸಹಯೋಗದೊಂದಿಗೆ ಉಡುಪಿ ಹಾಗೂ ದ.ಕ ಜಿಲ್ಲೆಯ “ತುಳು ಕಲ್ಪಾದಿಲೆನ ಓದು-ಬರವುದ ಕಜ್ಜಕೊಟ್ಯ” ಕಾರ್ಯಕ್ರಮ ಜರುಗಿತು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀಯುತ ದಯಾನಂದ ಕತ್ತಲ್ಸಾರ್ ರವರ ಅಧ್ಯಕ್ಷತೆಯ ನೆಲೆಯಲ್ಲಿ ತುಳು ಭಾಷಾ ಶಿಕ್ಷಣ ಹಾಗೂ ತುಳು ಶಿಕ್ಷಕರು ಹಲವಾರು ಶೈಕ್ಷಣಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇದು ಬಲಗೊಳ್ಳಬೇಕಾದರೆ ತುಳು ಸಾಹಿತ್ಯ ಅಕಾಡೆಮಿಯ ಒಟ್ಟಿಗೆ ಶಿಕ್ಷಣ ಇಲಾಖೆ ಮತ್ತು ಸಾರ್ವಜನಿಕರು ಕೈ ಜೋಡಿಸಿದಾಗ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂಬ ಭರವಸೆಯನ್ನು ಕೊಟ್ಟರು. ಶ್ರೀಯುತ ಗೋಪಾಲ್ ಶೆಟ್ಟಿ ಕಳೆಂಜ, ನಿವೃತ್ತ ಶಿಕ್ಷಕರು- ಪೆರ್ನೆ, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಶಾಲೆಗಳಲ್ಲಿ ತುಳು ಭಾಷೆ ಬೆಳವಣಿಗೆಯಾಗಬೇಕಾದರೆ ಶಿಕ್ಷಕರ ಪಾತ್ರ ಮುಖ್ಯವಾದುದು, ದ.ಕ ಮತ್ತು ಉಡುಪಿ ಜಿಲ್ಲೆಯ ಎಲ್ಲಾ ತಾಲೂಕುಗಳ ತುಳು ಭಾಷಾ ಆಸಕ್ತರ ಸಂಘಟನೆಯಿಂದ ಈ ತೊಡಕುಗಳನ್ನು ಪರಿಹರಿಸಬಹುದೆಂದು ತಿಳಿಸಿದರು. ಸಂಸ್ಥೆಯ ಕಾರ್ಯದರ್ಶಿ ಸೇಸಪ್ಪ ರೈ ಯವರು ಪ್ರಾಸ್ತಾವಿಕ ಮಾತುಗಳನ್ನಾಡಿ, ತುಳು ಶಿಕ್ಷಣ ಕ್ಷೇತ್ರದಲ್ಲಾಗುವ ಶಿಕ್ಷಕರ ನೋವುಗಳಿಗೆ ಹೇಗೆ ಸ್ಪಂದಿಸಬಹುದೆಂದು ಮಾರ್ಗದರ್ಶನಗೈದರು. ಅತಿಥಿಗಳಾಗಿ ಆಗಮಿಸಿದ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಶ್ರೀಯುತ ದಿನೇಶ್ ರೈ ಕಡಬ, ತುಳು ಶಿಕ್ಷಣಕ್ಕೆ ಅಕಾಡೆಮಿ ಮಾಡುವ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ಗೋಪಾಲ್ ಶೆಟ್ಟಿ ಕಳೆಂಜ – ‘ಸಾಲೆಡ್ ತುಳು ಕಲಿಕೆ ‘ ಮತ್ತು ಶ್ರೀಯುತ ಬಿ ಯಾದವ, ಪ್ರಾಂಶುಪಾಲರು ಪದವಿ ಪೂರ್ವ ಕಾಲೇಜು, ಉಪ್ಪುಂದ- ‘ದುಂಬುದ ಸಾಲೆಲೆಡ್ ತುಳು ಕಲಿಕೆ ’ ಎಂಬ ಕಾರ್ಯಾಗಾರ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಶ್ರೀಯುತ ಆನಂದ ಎಸ್ ಟಿ, ನಿಲಯ ವ್ಯವಸ್ಥಾಪಕರಾದ ಶ್ರೀಯುತ ರಮೇಶ್ ರೈ, ವಿವಿಧ ಶಾಲಾ ತುಳು ಭಾಷಾ ಶಿಕ್ಷಕರು, ಸಂಸ್ಥೆಯ ಶಿಕ್ಷಕ ಶಿಕ್ಷಕೇತರರು ಉಪಸ್ಥಿತರಿದ್ದರು. ತುಳು ಭಾಷಾ ಶಿಕ್ಷಕಿ ಶ್ರೀಮತಿ ಸರಿತಾ ರಾಮಕುಂಜ ಕಾರ್ಯಕ್ರಮ ಸಂಯೋಜಿಸಿದರು. ಪ್ರೌಢಶಾಲಾ ಮುಖ್ಯಶಿಕ್ಷಕಿ ಶ್ರೀಮತಿ ಗಾಯತ್ರಿ ಯು ಎನ್ ಸ್ವಾಗತಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕಿ ಶ್ರೀಮತಿ ಅಕ್ಷತಾ ಟಿ ವಂದನಾರ್ಪಣೆಗೈದರು. ಶಿಕ್ಷಕಿ ಪ್ರೇಮಾ ಬಿ ಕಾರ್ಯಕ್ರಮ ನಿರೂಪಿಸಿದರುಜರು