Contact : +91 9663 755 105 / sremramakunja@gmail.com

ವಾರ್ಷಿಕ ಕ್ರೀಡೋತ್ಸವ

ಶ್ರೀರಾಮಕುಂಜೇಶ್ವರ ಆ.ಮಾ.ಪ್ರೌ ಹಾಗೂ ಪ್ರಾಥಮಿಕ ಶಾಲೆ ರಾಮಕುಂಜ, ಶ್ರೀರಾಮಕುಂಜೇಶ್ವರ ವಿದ್ಯಾರ್ಥಿ ನಿಲಯ , ಹಿರಿಯ ವಿದ್ಯಾರ್ಥಿ ಸಂಘ ಹಾಗೂ ಶಿಕ್ಷಕ-ರಕ್ಷಕ ಸಂಘ ಇದರ ವತಿಯಿಂದ 2018-19ರ ಸಾಲಿನ ವಾರ್ಷಿಕ ಕ್ರೀಡೋತ್ಸವ ವಿಜೃಂಭಣೆಯಿಂದ ನಡೆಯಿತು.

 

ದೈಹಿಕ ಶಿಕ್ಷಕಿ ಸರಕಾರಿ ಪದವಿ ಪೂರ್ವ ಕಾಲೇಜು ಕೊಂಬೆಟ್ಟು ಪುತ್ತೂರು ಗೀತಾಮಣಿಯವರು ಧ್ವಜಾರೋಹಣ ಗೈದು ಶುಭ ಹಾರೈಸಿ ಮಾತಾನಾಡಿ ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆಯು ಮಹತ್ವವಾಗಿದೆ. ವಿದ್ಯಾರ್ಥಿಗಳು ಶಿಸ್ತಿನ ಜೀವನಕ್ಕೆ ಸ್ಕೌಟ್ಸ್ ಮತ್ತು ಗೈಡ್ಸ್ ಮಾದರಿಯನ್ನಾಗಿ ಬೆಳಸಬೇಕು ಎಂದು ಹೇಳಿದರು.

ನಂತರ ಮಾತನಾಡಿದ ಶ್ರೀ.ರಾ.ಆ.ಮಾ.ಪ್ರೌ.ಶಾಲೆಯ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಎಂ.ಪ್ರದೀಪ್.ರೈ ಮನವಳಿಕೆ ಶಾಲಾ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಹೊರಹಾಕಬೇಕು. ಶಾಲಾ ಕ್ರೀಡೆಯಲ್ಲಿ ಭಾಗವಹಿಸಿ ರಾಷ್ಟ್ರಮಟ್ಟಕ್ಕೆ ಏರಲು ಸಾಧ್ಯ ಎಂದು ಹೇಳಿದರು.

 

ಸಂಸ್ಥೆಯ ಕಾರ್ಯದರ್ಶಿ ಸೇಸಪ್ಪ ರೈ.ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ಜರುಗಿತು. ಅತಿಥಿಗಳು ಧ್ವಜವಂದನೆ ಸ್ವೀಕರಿಸಿದರು. ಶಾಲಾ ಕಾರ್ಯದರ್ಶಿಗಳು ಅತಿಥಿಗಳಿಗೆ ಕ್ರೀಡಾಪಟುಗಳನ್ನು ಪರಿಚಯಿಸಿದರು. ವಿದ್ಯಾರ್ಥಿ ಚಿನ್ಮಯಿ ಸ್.ಜೆ. ಪ್ರತಿಜ್ಞಾ ವಿಧಿ ಭೋದಿಸಿದರು.

 

ವಿದ್ಯಾರ್ಥಿಗಳ ಹೆತ್ತವರಿಗೆ : ಹಗ್ಗಜಗ್ಗಾಟ, ಗುಂಡು ಎಸೆತ ಬಾಲ್ ತ್ರೋ, ಮಡಕೆ ಒಡೆಯುವುದು.

ಹಿರಿಯ ವಿದ್ಯಾರ್ಥಿಗಳಿಗೆ : ವಾಲಿಬಾಲ್ ,ಹಗ್ಗಜಗ್ಗಾಟ, ಗುಂಡೆಸೆತ, ಚಕ್ರ ಎಸೆತ ಹೀಗೆ ಪ್ರತ್ಯೇಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

 

ಶಾಲಾ ಮುಖ್ಯೋಪಾದ್ಯಾಯಿನಿ ಗಾಯತ್ರಿ.ಯು.ಎನ್. ಸ್ವಾಗತಿಸಿ, ಮ್ಯಾನೇಜರ್ ರಮೇಶ್ ರೈ ವಂದಿಸಿದರು. ಸಹಶಿಕ್ಷಕ ವೆಂಕಟೇಶ್ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಶಾಲಾ ಆqsಳಿತಾಧಿಕಾರಿ ಆನಂದ್.ಎಸ್.ಟಿ, ಪ್ರಾಥಮಿಕ ಶಾಲಾ ಮುಖ್ಯಗುರು ಲೋಹಿತ, ಶಿಕ್ಷಕರು ಹಾಗೂ ಸಂಸ್ಥೆಯ ಸಿಬಂದಿ ವರ್ಗ ಮೊದಲಾದವರು ಉಪಸ್ಥಿತರಿದ್ದರು.