Shri Ramakunjeshwara Residential English Medium High School, Ramakunja

Latest News

ಭರತನಾಟ್ಯ ನೃತ್ಯ ಶಾಲೆ ಉದ್ಘಾಟನೆ

ಶ್ರೀರಾಮಕುಂಜೇಶ್ವರ ಕಿಂಡರ್ ಗಾರ್ಟನ್‍ನಲ್ಲಿ ಶ್ರೀರಾಮಕುಂಜೇಶ್ವರಯನ್ನು ವಿದುಷಿ ಆರಾಧಿತ ಅವರು ಉದ್ಘಾಟಿಸಿದರು. ನಂತರ ಮಾತನಾಡಿದವರು ಭಾರತೀಯ ನೃತ್ಯಕಲೆಗಳಲ್ಲಿ ವಿವಿಧ ರೀತಿಯ ನೃತ್ಯಕಲೆಗಳು ಇದೆ. ಅದರಲ್ಲಿ ನಮ್ಮ ಶಾಸ್ತ್ರೀಯ ನೃತ್ಯವೊಂದಾಗಿದೆ. ನೃತ್ಯ ಲಯಬದ್ದವಾಗಿ ಸಂಗೀತಕ್ಕೆ ದೇಹವನ್ನು ಚಲಿಸುವ ಒಂದು ಕಲೆಯಾಗಿದೆ. ನೃತ್ಯದ ಹೆಜ್ಜೆಗಳ ಅಭ್ಯಾಸದಿಂದ ಉಸಿರಾಟದ ನಿಯಂತ್ರಣದಿಂದ ತೊಡಗಿ ಶರೀರದ ದೃಢತೆ, ನಿಲುವು, ದೇಹಕ್ಕೆ ಒಂದು ಆಕರ್ಷಕ ರೂಪ ಬರುವುದು ಎಂದು ಹೇಳಿದರು.

ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ.ರೈ ಮಾತನಾಡಿ ಶಾಲಾ ಸಾಂಸ್ಕೃತಿಕ ಕಾರ್ಯಕ್ರಮಗಳು ಮೌಲ್ಯಧಾರಿತವಾಗಲು ಶಾಸ್ತ್ರೀಯ ನೃತ್ಯ ಸಾಧ್ಯವಾಗುತ್ತದೆ. ಸಂಸ್ಕೃತಿಯ ಅರಿವಿನೊಂದಿಗೆ ಸಹೃದಯವಂತ ವಿದ್ಯಾರ್ಥಿಗಳ ನಿರ್ಮಾಣಕ್ಕೆ ಅವಕಾಶವಾಗುತ್ತದೆ. ಸಾಮಾನ್ಯವಾಗಿ ನೃತ್ಯಕಲಾ ಶಿಕ್ಷಣದಿಂದಲೂ ಪೂರಕವಾಗಿ ದೊರೆತಾಗ ಶಿಕ್ಷಣದ ಮೌಲ್ಯ ವೃದ್ಧಿಸುತ್ತದೆ ಎಂದು ತಿಳಿಸಿದರು.

ವಿದುಷಿ ಆರಾಧಿತ ಅವರು ಮಕ್ಕಳಿಗೆ ಭರತನಾಟ್ಯ ನೃತ್ಯವನ್ನು ತರಬೇತಿ ನೀಡಿದರು. ಕಾರ್ಯಕ್ರಮದಲ್ಲಿ ಪುರುಷೋತ್ತಮ, ಆಡಳಿತಾಧಿಕಾರಿ ಆನಂದ.ಎಸ್.ಟಿ ಸಹಶಿಕ್ಷಕರು ಸಿಬಂದಿ ವರ್ಗ ಹಾಗೂ ಪೋಷಕರು ಮೊದಲಾದವರು ಉಪಸ್ಥಿತರಿದ್ದರು. ಶಾಲಾ ಮುಖ್ಯಗುರು ಲೋಹಿತ ,ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.