Contact : +91 9663 755 105 / sremramakunja@gmail.com

ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ “ತುಡರ್ ಪರ್ಬ”


ದಿನಾಂಕ: 16.11.2020 ಸೋಮವಾರದಂದು ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ತುಳುನಾಡಿನ ಸಂಸ್ಕøತಿಯನ್ನು ಬಿಂಬಿಸುವ “ತುಡರ್ ಪರ್ಬ” ವನ್ನು ಆಚರಿಸಲಾಯಿತು.ದಿನಾಂಕ: 16.11.2020 ಸೋಮವಾರದಂದು ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ತುಳುನಾಡಿನ ಸಂಸ್ಕøತಿಯನ್ನು ಬಿಂಬಿಸುವ “ತುಡರ್ ಪರ್ಬ” ವನ್ನು ಆಚರಿಸಲಾಯಿತು. ಹಿಂದಿನ ಕಾಲದ ಎಲ್ಲಾ ಹತ್ಯಾರುಗಳಿಗೆ ಅಕ್ಕಿ ನೀರನ್ನು ಪ್ರೋಕ್ಷಣಿಸಿ, ದೀಪ ಹಚ್ಚಿ, ಸಂಪ್ರದಾಯದಂತೆ ಕಾರ್ಯಕ್ರಮ ನಡೆಸಲಾಯಿತು. ನೇತ್ರಾವತಿ ತುಳುಕೂಟ ರಾಮಕುಂಜದ ಉಪಾಧ್ಯಕ್ಷರಾದ ಶ್ರೀ. ರಾಮ್‍ಮೊಹನ್ ರೈ ಯವರು ಹತ್ಯಾರುಗಳಿಗೆ ದೀಪಾರತಿ ಮಾಡಿದರು. ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮದ ಕಾರ್ಯದರ್ಶಿ ಶ್ರೀ ಕೆ. ಸೇಸಪ್ಪ ರೈ ಯವರು ಹಬ್ಬದ ಕುರಿತಾಗಿ ಮಾತನಾಡಿದರು. ಸಂಸ್ಥೆಯ ಶೈಕ್ಷಣಿಕ ಸಲಹೆಗಾರರು ಶ್ರೀ ರವೀಂದ್ರ ದರ್ಬೆ ಇವರು ಉಪಸ್ಥಿತರಿದ್ದರು. ಹತ್ಯಾರುಗಳ ಸಂಗ್ರಾಹಕಿ ಶ್ರೀಮತಿ ಸರಿತಾ ಜನಾರ್ಧನ್ ಇವರು ಕಾರ್ಯಕ್ರಮ ಸಂಯೋಜಿಸಿದರು.