Shri Ramakunjeshwara Residential English Medium High School, Ramakunja

Latest News

ತುಳು ಭಾಷಾ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಸ್ಪರ್ಧೆಗಳು

ದಿನಾಂಕ 28-07-2018 ಶನಿವಾರ ರಂದು ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ರಾಮಕುಂಜ ಇಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಹಕಾರದೊಂದಿಗೆ ವಿವಿಧ ತುಳು ಸ್ಫರ್ಧೆಗಳನ್ನು ನಡೆಸಲಿದ್ದೇವೆ. ತುಳು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ತುಳು ಕಲಿಸುತ್ತಿರುವ ಶಾಲೆಯ ತುಳುವ ವಿದ್ಯಾರ್ಥಿಗಳಿಗೆಂದು ಸ್ಫರ್ಧೆಗಳನ್ನು ಹಮ್ಮಿಕೊಂಡಿದ್ದು ತಮಗೆ ಆಮಂತ್ರಣ ಪತ್ರಿಕೆಯನ್ನು ಕಳುಹಿಸಿ ಕೊಡಲಿದ್ದೇವೆ. ಆದುದರಿಂದ ತಾವುಗಳು ತುಳು ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಈ ಅವಕಾಶವನ್ನು ಒದಗಿಸಿ ಕೊಡಬೇಕು ಮತ್ತು ತಾವು ಈ ಕಾರ್ಯಕ್ರಮಕ್ಕೆ ಪೂರ್ಣ ಪ್ರೋತ್ಸಾಹ, ಸಹಕಾರದೊಂದಿಗೆ ಭಾಗವಹಿಸಬೇಕು ಎಂದು ಕೇಳಿಕೊಳ್ಳುತ್ತಿದ್ದೇನೆ.

ಇದರ ವಿವರಗಳು ಈ ಕೆಳಗಿವೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ತೃತೀಯ ಭಾಷೆಯಾಗಿ ತುಳು ಕಲಿಯುತ್ತಿರುವ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ನಡೆಸುವ ಸ್ಫರ್ಧೆಗಳ ವಿವರ.
ದಿನಾಂಕ: 28-07-2018 ಶನಿವಾರ ಬೆಳಗ್ಗೆ ಗಂಟೆ 9ಕೆ.

  • ವೈಯಕ್ತಿಕ ಸ್ಫರ್ಧೆಗಳು

1. ತುಳು ಕಬಿತೆ  3 ನಿ.
2. ತುಳು ಭಾವ ಗೀತೆ 5 ನಿ.
3. ಮಡಲಿನ ಕರಕುಶಲ ವಸ್ತುಗಳ ತಯಾರಿ 30  ನಿ.
4. ತುಳುವೆರೆ ಹಳ್ಳಿ ಜೀವನದ ಚಿತ್ರ 30 ನಿ.
5. ತುಳು ಭಾಷಣ 5 ನಿ.
6. ತುಳು ಏಕಪಾತ್ರ ಅಭಿನಯ 7 ನಿ.
7. ತುಳು ವೈಯಕ್ತಿಕ ಯಕ್ಷಗಾನ 15 ನಿ.
8. ತುಳು ಜನಪದ ಕತೆ 6 ನಿ.

  • ತಂಡ ಸ್ಫರ್ಧೆಗಳು (ಇಬ್ಬರು)

9. ತುಳು ಒಗಟು  10 ನಿ.
10. ತುಳು ಗಾದೆ 8 ನಿ.
11. ತುಳು ರಸಪ್ರಶ್ನೆ 10 ನಿ.

  • ತಂಡ ಸ್ಫರ್ಧೆಗಳು(ಗುಂಪು-ಗರಿಷ್ಠ 10ಜನ)

12. ತುಳು ಸಂಸ್ಕೃತಿಯನ್ನು ಬಿಂಬಿಸುವ ತುಳು ನಾಟಕ 20 ನಿ.
13. ತುಳು ಜನಪದ ಕುಣಿತ 8 ನಿ.

ಸೂಚನೆ :

    • ತುಳುವನ್ನು ತೃತೀಯ ಭಾಷೆಯಾಗಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ
    • ಕುಣಿತ ಮತ್ತು ನಾಟಕ ಬಿಟ್ಟು ಒಬ್ಬ ವಿದ್ಯಾರ್ಥಿಗೆ ಒಂದು ಸ್ಫರ್ಧೆಯಲ್ಲಿ ಮಾತ್ರ ಭಾಗವಹಿಸಲು ಅವಕಾಶ.
    • ಒಗಟು, ಗಾದೆ, ರಸಪ್ರಶ್ನೆಗಳಿಗೆ 2 ವಿದ್ಯಾರ್ಥಿಗಳ ಒಂದು ತಂಡ; ಒಂದು ಶಾಲೆಯಿಂದ ಒಂದು ತಂಡಕ್ಕೆ ಮಾತ್ರ ಅವಕಾಶ.
    • ಹಿಮ್ಮೇಳದ ವಿದ್ಯಾರ್ಥಿಗಳನ್ನು ಬಿಟ್ಟು ಕುಣಿತ ಮತ್ತು ನಾಟಕಕ್ಕೆ 10 ಜನ ಮೀರಿರಬಾರದು.
    • ಭಾವಗೀತೆಗೆ ಕವಿಯ ಹೆಸರು ಕಡ್ಡಾಯ.
    • ಕರಕುಶಲ ವಸ್ತುಗಳ ತಯಾರಿಕೆಗೆ ಮತ್ತು ಚಿತ್ರಕಲೆಗೆ ಸಂಬಂಧಿಸಿದ ವಸ್ತುಗಳನ್ನು ತರತಕ್ಕದ್ದು.
    • ಭಾಷಣದ ವಿಷಯಗಳು

1.ಮರಿಯಾಲಗ್ ಬೋಡಾಪಿನ ಅಟ್ಟಣೆ ಬೊಕ್ಕ ಜೀವನ
2.ತುಳು ನಾಡ್‌ದ ನಂಬೊಲಿಗೆಲು, ಆಚರಣೆ ಬೊಕ್ಕ ವಿಧಿ ವಿಧಾನೊಲು.

ಈ ಎರಡರಲ್ಲಿ ಯಾವುದಾದರೂ ಒಂದನ್ನು ಸ್ಫರ್ಧೆಯ ದಿನ ಆಯ್ಕೆ ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:9481922843/9980903545/08251258535 ಅಥವಾ sremramakunja@gmail.comನ್ನು ಸಂಪರ್ಕಿಸಬಹುದು.

ಸ್ಫರ್ಧೆಗಳು ಬೆಳಗ್ಗೆ 9 ಗಂಟೆಗೆ ನಡೆಯುವುದರಿಂದ ದೂರದ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅವಶ್ಯವಿದ್ದಲ್ಲಿ ಸ್ಫರ್ಧೆಯ ಹಿಂದಿನ ದಿನದ ವಸತಿ ಸೌಕರ್ಯಗಳನ್ನು ಕಲ್ಪಿಸಿ ಕೊಡಲಾಗುವುದು.

    • ಸ್ಫರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರದೊಂದಿಗೆ ನಗದು ಬಹುಮಾನವನ್ನು ನೀಡಲಾಗುವುದು.

ವೈಯಕ್ತಿಕ ಸ್ಫರ್ಧೆಗಳ ಮೊದಲನೇ ಬಹುಮಾನ 500ರೂ.
ಎರಡನೇ ಬಹುಮಾನ  300ರೂ
ಮೂರನೇ ಬಹುಮಾನ 200ರೂ
ತಂಡ-(ಇಬ್ಬರು) ಸ್ಫರ್ಧೆಗಳ ಮೊದಲನೇ ಬಹುಮಾನ 1000ರೂ
ಎರಡನೇ ಬಹುಮಾನ 600ರೂ
ಮೂರನೇ ಬಹುಮಾನ 400ರೂ
ತಂಡ-(ಗುಂಪು) ಸ್ಫರ್ಧೆಗಳಲ್ಲಿ ಮೊದಲನೇ ಬಹುಮಾನ 3000ರೂ
ಎರಡನೇ ಬಹುಮಾನ 2000ರೂ
ಮೂರನೇ ಬಹುಮಾನ 1000ರೂ
ಅಲ್ಲದೇ ಶಾಲೆಗೆ ಸಮಗ್ರ ಪ್ರಶಸ್ತಿಯನ್ನು ಕೂಡ ನೀಡಲಾಗುವುದು.