Contact : +91 9663 755 105 / sremramakunja@gmail.com

ವಿಶ್ವ ಪರಿಸರ ದಿನಾಚರಣೆ

 

ಶ್ರೀರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢ ಹಾಗೂ ಪ್ರಾಥಮಿಕ ಶಾಲೆ ರಾಮಕುಂಜ ಇದರ ವತಿಯಿಂದ ವಿಶ್ವಪರಿಸರ ದಿನಾಚರಣೆ ಅಂಗವಾಗಿ ಶಾಲಾ ಸ್ಕೌಟ್ಸ್-ಗೈಡ್ಸ್ ಕ್ಲಬ್-ಬುಲ್‌ಬುಲ್ ಹಾಗೂ ಇಖೋ ಕ್ಲಬ್ ವತಿಯಿಂದ ವಿವಿಧ ಜಾತಿಯ ಬೆಲೆ ಬಾಳುವ ಸಸಿಗಳನ್ನು ನೆಡುವುದರ ಮೂಲಕ ‘ಪರಿಸರ ಉಳಿಸಿ-ಬೆಳೆಸಿ’ ಜಾಗೃತಿ ಕಾರ‍್ಯಕ್ರಮ ನಡೆಯಿತು.

ಈ ವೇಳೆ ಸಂಸ್ಥೆಯ ಕಾರ‍್ಯದರ್ಶಿ ಕೆ.ಸೇಸಪ್ಪ ರೈ ಮಾತನಾಡಿ ಇತ್ತಿಚೀನ ದಿನಗಳಲ್ಲಿ ಮರ ಗಿಡಗಳು ನಾಶ ಹೊಂದುವ ಪರಿಸ್ಥಿತಿ ಎದುರಾಗಿದೆ. ಸರಿಯಾದ ರೀತಿಯ ಗಾಳಿ ಇಲ್ಲದೆ ಆರೋಗ್ಯದ ಮೇಲೆ ಪ್ರಭಾವ ಬೀರ ತೊಡಗಿದೆ. ಅಲ್ಲದೇ ಮುಂಬರುವ ದಿನಗಳಲ್ಲಿ ನಮ್ಮ ಪರಿಸರವನ್ನು ನಾವೇಲ್ಲರು ಕಾಪಾಡಿಕೊಳ್ಳಬೇಕು. ಕೆಲವೊಮ್ಮೆ ತಂದೆ-ತಾಯಿ ಮಕ್ಕಳಲ್ಲಿ ಗಿಡಗಳನ್ನು ನೆಡುವ ಬಗ್ಗೆ ಅರಿವು ಮೂಡಿಸಬೇಕು ಎಂದು ಹೇಳಿದರು.

ನಂತರ ಶಾಲಾ ವಿದ್ಯಾರ್ಥಿಗಳಿಂದ ಪರಿಸರ ಜಾಗೃತಿಯನ್ನು ಮಾಡಿಸುವ ಚಿತ್ರಕಲಾ ಸ್ಪರ್ಧೆ, ಭಾಷಣ ಸ್ಪರ್ಧೆಯನ್ನು ಏರ್ಪಡಿಸಿ, ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಮಕ್ಕಳಿಗೆ ಯಾವ ರೀತಿಯಾಗಿ ಸಸಿಗಳನ್ನು ನೆಡಬೇಕೆಂದು ಪ್ರಾತ್ಯಕ್ಷತೆ ನಡೆಯಿತು. ಈ ಸಂದರ್ಭದಲ್ಲಿ ಆಂಗ್ಲ ಮಾಧ್ಯಮ ಪ್ರೌಢ ಹಾಗೂ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಗಾಯಿತ್ರಿ ಲೋಹಿತ, ಸ್ಕೌಟ್ಸ್-ಗೈಡ್ಸ್ ಕ್ಲಬ್-ಬುಲ್‌ಬುಲ್ ಹಾಗೂ ಇಖೋ ಕ್ಲಬ್ ಸಂಚಾಲಕರಾದ ಪ್ರೇಮ, ವಾಸಪ್ಪ ಹಾಗೂ ಶಿಕ್ಷಕರು, ಸಂಸ್ಥೆಯ ಸಿಬ್ಬಂದಿ ವರ್ಗ ಮೊದಲಾದವರು ಉಪಸ್ಥಿತರಿದ್ದರು.