Contact : +91 9663 755 105 / sremramakunja@gmail.com

ದೈಹಿಕ ಶಿಕ್ಷಕಿ ಪ್ರೇಮ ರಾಜ್ಯಮಟ್ಟಕ್ಕೆ ಆಯ್ಕೆ

ಶ್ರೀರಾಮಕುಂಜೇಶ್ವರ ಆ.ಮಾ.ಪ್ರೌ.ಶಾಲಾ ದೈಹಿಕ ಶಿಕ್ಷಕಿ ಪ್ರೇಮ ಅವರು ಸುಳ್ಯ ತಾಲೂಕಿನ ಪಂಜದ ಕೋಟಿ-ಚೆನ್ನಯ್ಯ ಕ್ರೀಡಾಂಗಣದಲ್ಲಿ ನ.11ರಂದು ಜರುಗಿದ ಸುಳ್ಯ ಹಾಗೂ ಪುತ್ತೂರು ತಾಲೂಕು ಮಟ್ಟದ 9ನೇಯ ಮಾಸ್ಟರ್ ಅಥ್ಲೆಟ್ ಕ್ರೀಡಾಕೂಟದಲ್ಲಿ 45ರ ವಯೋಮಾನದ 100ಮೀ. ಓಟ ಪ್ರಥಮ, ಉದ್ದಜಿಗಿತ ಪ್ರಥಮ, ತ್ರಿವಿಧ ಜಿಗಿತ ಪ್ರಥಮ ಸ್ಥಾನ ಗಳಿಸಿ, ನಂ.11ರಂದು ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ 100ಮೀ.ಓಟ, ಉದ್ದಜಿಗಿತ, ತ್ರಿವಿಧ ಜಿಗಿತ, ಹಾಗೂ 4*100ಮೀ ರಿಲೇಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ಡಿ.8ಮತ್ತು 9ರಂದು ಶಿವಮೊಗ್ಗದ ನೆಹರೂ ಕ್ರೀಡಾಂಗಣದಲ್ಲಿ ಜರುಗುವ ರಾಜ್ಯಮಟ್ಟದ ಕ್ರೀಡಾಕೂಡಕ್ಕೆ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈ ಅಭಿನಂದಿಸಿದರು.