Contact : +91 9663 755 105 / sremramakunja@gmail.com

ಜಿಲ್ಲಾ ಮಟ್ಟದ ಚೆಸ್ ಪಂದ್ಯಾವಳಿ

ಚೆಸ್ ಅಸೋಶಿಯೆಶನ್ ವತಿಯಿಂದ 7ನೇ ಅಂತರ್ ಜಿಲ್ಲಾ ಮಟ್ಟದ ಚೆಸ್ ಪಂದ್ಯಾವಳಿ 14ರ ವಯೋಮಿತಿಯಲ್ಲಿ ಕುಮಾರಿ ಶುಭಪ್ರದಾ ಕೆ.ಎಸ್. ಪ್ರಥಮ ಸ್ಥಾನ ಪಡೆದು, ನಂತರ ಉಡುಪಿ ಚೆಸ್ ಅಸೋಶಿಯೆಶನ್ ಹಾಗೂ ರೋಟರಿ ಕ್ಲಬ್ ಉಡುಪಿ ವತಿಯಿಂದ 11ನೇ ಅಂತರ್ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ತೃತೀಯಾ ಸ್ಥಾನ ಪಡೆದಿದ್ದಾಳೆ.

ಪ್ರಸ್ತುತ ಕುಮಾರಿ ಶುಭಪ್ರದಾ ಕೆ.ಎಸ್. ಶ್ರೀರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ ರಾಮಕುಂಜ 9ನೇ ತರಗತಿಯ ಪ್ರತಿಭಾನ್ವಿತ ವಿದ್ಯಾರ್ಥಿನಿ. ಈಕೆ ಶ್ರೀಕಾಂತ್ ಕೆ.ಬಿ ಹಾಗೂ ಸುಕನ್ಯಾ ಕೆ.ಎಸ್. ಸಪ್ತಗಿರಿ ಆಲಂಕಾರು ಇವರ ಸುಪುತ್ರಿ. ಈ ಸಂದರ್ಭದಲ್ಲಿ ಸಂಸ್ಥೆಯ ಕಾರ‍್ಯದರ್ಶಿಯಾದ ಕೆ.ಸೇಸಪ್ಪ ರೈ , ಮುಖ್ಯ ಗುರು ಗಾಯತ್ರಿ , ಶಿಕ್ಷಕರು ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗ ಅಭಿನಂದನೆ ಸಲ್ಲಿಸಿದ್ದರು.