Shri Ramakunjeshwara Residential English Medium High School, Ramakunja

Latest News

ತುಡರ್ ತೋಜಾದ್ ಪರ್ಬ ಬಲಸುನೆ ಕಾರ್ಯಕ್ರಮ

ಶ್ರೀ ರಾಮಕುಂಜೇಶ್ವರ ಆಂ.ಮಾ. ಶಾಲೆ ಮತ್ತು ನೇತ್ರಾವತಿ ತುಳುಕೂಟ ರಾಮಕುಂಜ ಇದರ ವತಿಯಿಂದ ದೀಪಾವಳಿ ಹಬ್ಬದ ಅಂಗವಾಗಿ ತುಡರ್ ತೋಜಾದ್ ಪರ್ಬ ಬಲಸುನೆ ಕಾರ್ಯಕ್ರಮ ವಿಜೃಂಭಣೆಯಿಂದ ಆಚರಿಸಲಾಯಿತು.

 

ಮುಖ್ಯ ಅತಿಥಿಯಾಗಿ ಆಗಮಿಸಿದ ಮಂಗಳೂರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ದಿನೇಶ್ ರೈ.ಕಡಬ ಅವರು ಮಾತನಾಡಿ ದೀಪಾವಳಿ ಹಬ್ಬವು ಪವಿತ್ರ ಸಂಕೇತವಾದ ಬೆಳಕಿನ ಹಬ್ಬ. ನಮ್ಮ ನೈರ್ಸಗಿಕವಾದ ಮಣ್ಣಿನ ಹಣತೆಯನ್ನು ಬಳಸಿ ದೀಪ ಹಚ್ಚಬೇಕು. ರಾಸಾಯನಿಕಯುಕ್ತವಾದ ಪಟಾಕಿಗಳನ್ನು ಹಚ್ಚಬಾರದು ಎಂದು ತಿಳಿಸಿದರು.

 

ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ. ರೈ ಮಾತನಾಡಿ ಕೃಷಿ ವಾಸಕ್ಕೆ ಭೂಮಿಯೇ ಆಸರೆ. ಭೂಮಿಯನ್ನು ಅವಲಂಬಿಸಿದ ಮನುಷ್ಯ ಭೂಮಿಯ ಮೂಲಕ ಪ್ರಪಂಚ ಕಂಡು ವಿಶ್ವವ್ಯಾಪಿಯಾಗಿರುವ ಚೈತನ್ಯವೊಂದರ ಇರುವಿಕೆ ಸೃಷ್ಟಿಸಿಕೊಂಡಾಗಿದೆ. ಇದೇ ಆರಾಧನೆ , ಆಚರಣೆಗೆ ಪ್ರೇರಣೆ ದೊರೆತ ಸ್ಥಿತಿ. ಇಂದಿನ ಮಕ್ಕಳಿಗೆ ದೀಪಾವಳಿಯ ಹಬ್ಬದ ತಿಳುವಳಿಕೆಯ ಅಗತ್ಯತೆ ಎಂದು ಹೇಳಿದರು.

 

ದೀಪಾವಳಿ ವಿಶೇಷತೆ : ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ವಸ್ತುಗಳ ಪೂಜೆ, ತುಳಸಿ ಪೂಜೆ ಹಾಗೂ ಗೋವು ಪೂಜೆ ಕಾರ್ಯಕ್ರಮವು ಸಾಂಪ್ರಾದಾಯಿಕ ರೀತಿಯಲ್ಲಿ ಆಚರಿಸಲಾಯಿತು.

 

ವೇದಿಕೆಯಲ್ಲಿ ಶ್ರೀರಾ.ಆಂ.ಮಾ.ಪ್ರೌಢ ಶಾಲೆ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಪ್ರದೀಪ್.ರೈ ಮನವಳಿಕೆ, ರಾಮಕುಂಜ ನೇತ್ರಾವತಿ ತುಳುಕೂಟದ ಉಪಾಧ್ಯಕ್ಷ ರಾಮಮೋಹನ್ ರೈ, ಶ್ರೀರಾ.ಆಂ.ಮಾ.ಪ್ರೌಢ ಶಾಲೆ ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷ ಬಾಬು ಪೂಜಾರಿ, ಆಡಳಿತಾಧಿಕಾರಿ ಆನಂದ.ಎಸ್.ಟಿ, ಶೈಕ್ಷಣಿಕ ಸಲಹೆಗಾರ ರವೀಂದ್ರ ದರ್ಬೆ, ಕ್ರಾಪ್ಟ್ ಶಿಕ್ಷಕಿ ಸುಮನ ಕೆರೆಕರೆ, ಶಿಕ್ಷಕರು ಹಾಗೂ ಸಂಸ್ಥೆಯ ಸಿಬಂದಿ ವರ್ಗದವರು ಮೊದಲಾದವರು ಉಪಸ್ಥಿತರಿದ್ದರು. ಶಾಲಾ ಮುಖ್ಯಗುರು ಗಾಯತ್ರಿ.ಯು.ಎನ್ ಸ್ವಾಗತಿಸಿದರು. ದೈಹಿಕ ಶಿಕ್ಷಕಿÀ ಪ್ರೇಮ ವಂದಿಸಿ, ಶಿಕ್ಷಕಿ ಸರಿತಾ ಜನಾರ್ಧನ್ ಕಾರ್ಯಕ್ರಮ ನಿರೂಪಿಸಿದರು.