Contact : +91 9663 755 105 / sremramakunja@gmail.com

ತಾಲೂಕು ಮಟ್ಟದ ಕ್ರೀಡಾಕೂಟ

 

 

ಕೆಯ್ಯೂರಿನಲ್ಲಿ ದಿನಾಂಕ 3, 4/10/2017ರಂದು ನಡೆದ ಪುತ್ತೂರು ತಾಲೂಕು ಮಟ್ಟದ ಪ್ರಾಥಮಿಕ, 14ರ ವಯೋಮಾನ ಹಾಗೂ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟದಲ್ಲಿ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಾಥಮಿಕ ವಿಭಾಗ, 8ನೇ ವಿಭಾಗ ಹಾಗೂ ಪ್ರೌಢಶಾಲಾ ವಿಭಾಗ ಒಟ್ಟು ಮೂರು ವಿಭಾಗಗಳಲ್ಲಿಯೂ ಒಟ್ಟು 21 ಕ್ರೀಡಾಪಟುಗಳು ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ತಮ್ಮ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿರುತ್ತಾರೆ. ಪ್ರಾಥಮಿಕ ವಿಭಾಗದ ಆಕಾಶ್ ಯಾದವ್- ಎತ್ತರ ಜಿಗಿತದಲ್ಲಿ ಪ್ರಥಮ, 8ನೇ ತರಗತಿ ಗಗನ್ ಹೆಚ್- 100 ಮೀ, 200ಮೀ ಪ್ರಥಮ ಹಾಗೂ 80ಮೀ ಹರ್ಡಲ್ಸ್‌ನಲ್ಲಿ ದ್ವಿತೀಯ ಸ್ಥಾನ ಮತ್ತು ವೈಯಕ್ತಿಕ ಚಾಂಪಿಯನ್‌ಶಿಪ್, ಮಿಥುನ್ ಗೌಡ-ಉದ್ದಜಿಗಿತ ಪ್ರಥಮ, ಉಪನಿಷತ್- ಪೋಲ್ ವಾಲ್ಟ್ ಪ್ರಥಮ, ಮನೋಜ್ ಬಿ.ಪಿ- ನಡಿಗೆ ದ್ವಿತೀಯ, ಗೌತಮ್ ಎಂ-800ಮೀ,3000ಮೀ ದ್ವಿತೀಯ ಹಾಗೂ 1500ಮೀ ಪ್ರಥಮ, ಮತ್ತು ಜ್ಯೋತಿಕಾ ಪಿ ರೈ- ಗುಂಡೆಸೆತದಲ್ಲಿ ದ್ವಿತೀಯ ಸ್ಥಾನ ಹಾಗೂ 8ನೇ ಭಾಲಕರ ತಂಡ ಹಾಗೂ ಪ್ರೌಢಶಾಲಾ ಬಾಲಕರ ತಂಡ ದ್ವಿತೀಯ ತಂಡ ಪ್ರಶಸ್ತಿಯನ್ನು ಪಡೆದುಕೊಂಡು 7 ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ. ಉಳಿದ 14 ಕ್ರೀಡಾಪಟುಗಳು ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.