Latest News

ಕೃಷ್ಣೈಕ್ಯರಾದ ಶ್ರೀಶ್ರೀಶ್ರೀ ಪರಮ ಪೂಜನೀಯ ವಿಶ್ವೇಶ ತೀರ್ಥ ಶ್ರೀ ಪಾದಂಗಳ ರವxxರ ಎರಡನೆಯ ಪುಣ್ಯಸ್ಮರಣೆ
ಕೃಷ್ಣೈಕ್ಯರಾದ ಶ್ರೀಶ್ರೀಶ್ರೀ ಪರಮ ಪೂಜನೀಯ ವಿಶ್ವೇಶ ತೀರ್ಥ ಶ್ರೀ ಪಾದಂಗಳ ರವರ ಎರಡನೆಯ ಪುಣ್ಯಸ್ಮರಣೆಯು ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆ ರಾಮಕುಂಜ ಇಲ್ಲಿ ನಿರ್ಮಾಣಗೊಂಡಿರುವ ‘ಶ್ರೀಶ್ರೀಶ್ರೀ ವಿಶ್ವೇಶ ತೀರ್ಥ’ ಧ್ಯಾನ ಮಂದಿರದಲ್ಲಿ ಜರುಗಿತು. ಸಂಸ್ಥೆಯ ಕಾರ್ಯದರ್ಶಿಯವರಾದ ಶ್ರೀಯುತ ಕೆ. ಸೇಸಪ್ಪ ರೈ ಯವರು ಸ್ವಾಮಿಜಿಯವರ ಪುತ್ಥಳಿಗೆ ತುಳಸಿ ಹಾರ ಹಾಕಿ ಪುಷ್ಪಾರ್ಚಣೆಗೈದು ವಿದ್ಯಾರ್ಥಿ ಗಳಿಗೆ ಶ್ರೀಗಳ ಜೀವನಾದರ್ಶಗಳ ಮಹತ್ವವನ್ನು ತಿಳಿಸಿದರು. ಈ ಸಂಧರ್ಭದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಶ್ರೀಯುತ ಆನಂದ ಎಸ್.ಟಿ, ನಿಲಯದ ವ್ಯವಸ್ತಾಪಕರಾದ ಶ್ರೀಯುತ ರಮೇಶ್ ರೈ, ಪ್ರೌಢಶಾಲಾ ಮುಖ್ಯೋಪಧ್ಯಾಯಿನಿ ಶ್ರೀಮತಿ ಗಾಯತ್ರಿ ಯು. ಎನ್ , ಪ್ರಾಥಮಿಕ ಶಾಲಾ ಮುಖ್ಯೋಪಧ್ಯಾಯಿನಿ ಶ್ರೀಮತಿ ಅಕ್ಷತಾ, ಸಂಸ್ಥೆಯ ಎಲ್ಲಾ ಶಿಕ್ಷಕ ಶಿಕ್ಷಕೇತರರು ಹಾಗೂ ವಿಧ್ಯಾರ್ಥಿಗಳು ಪಾಲ್ಗೊಂಡರು.