Latest News

ಯೋಗಾ ದಿನಾಚರಣೆ
ಶ್ರೀರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢ ಹಾಗೂ ಪ್ರಾಥಮಿಕ ಶಾಲೆ ರಾಮಕುಂಜ ಇದರ ವತಿಯಿಂದ ೪ನೇ ವಿಶ್ವ ಯೋಗ ದಿನದ ಅಂಗವಾಗಿ ಯೋಗ ದಿನಾಚರಣೆ ಆಚರಿಸಲಾಯಿತು.
ಕಾರ್ಯಕ್ರಮವನ್ನು ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈ ಉದ್ಘಾಟಿಸಿ ಮಾತನಾಡಿ ಯೋಗ ಎನ್ನುವುದು ಒಂದು ಜೀವನ ಪದ್ಧತಿ. ನಮ್ಮ ದೇಹ ಮತ್ತು ಮನಸ್ಸನ್ನು ಶುಚಿತ್ವಗೊಳಿಸುತ್ತದೆ. ಯೋಗ ಚಿಕಿತ್ಸೆಯೂ ಕೂಡ ಅತ್ಯಂತ ಪರಿಣಾಮಕಾರಿಯಾಗಿದೆ. ಯೋಗದಿಂದ ನಮ್ಮ ಮನಸ್ಸನ್ನು ಏಕಾಗ್ರತೆ ಒಳಪಡಿಸಲು ಸಹಾಕಾರಿಯಾಗಿದೆ. ಯೋಗಾಭ್ಯಾಸ, ಯೋಗ ಚಿಕಿತ್ಸೆಗಳನ್ನು ಇತ್ತಿಚೀನ ದೈನಂದಿನ ದಿನಗಳಲ್ಲಿ ಬಹುತೇಕ ಜನರು ಅಳವಡಿಸುವುದನ್ನು ಗಮನಿಸಬಹುದು ಎಂದು ತಿಳಿಸಿದರು.
ನಂತರ ದೈಹಿಕ ಶಿಕ್ಷಕರ ಮಾರ್ಗದರ್ಶನದಲ್ಲಿ ಸಾಮೂಹಿಕವಾಗಿ ಪ್ರೌಢ ಹಾಗೂ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಯೋಗಾಭ್ಯಾಸವನ್ನು ಮಾಡಿದರು.
ಈ ಸಂದರ್ಭದಲ್ಲಿ ಮುಖ್ಯಗುರು ಗಾಯತ್ರಿ ಹಾಗೂ ಶಿಕ್ಷಕರು, ಸಂಸ್ಥೆಯ ಸಿಬ್ಬಂದಿ ವರ್ಗ ಮೊದಲಾದವರು ಉಪಸ್ಥಿತರಿದ್ದರು.