Shri Ramakunjeshwara Residential English Medium High School, Ramakunja

Latest News

ರಾಜ್ಯ ಮಟ್ಟದ ಸಾಂಸ್ಕೃತಿಕ ಸಮ್ಮಿಲನ

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ನೇತ್ರಾವತಿ ತುಳುಕೂಟ ರಾಮಕುಂಜ ಇವರ ಸಹಯೋಗದೊಂದಿಗೆ ಮತ್ತು ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ ರಾಮಕುಂಜ ಇವರ ಆಶ್ರಯದಲ್ಲಿ ರಾಮಕುಂಜ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಸಭಾಂಗಣದಲ್ಲಿ “ತುಳು ಜೋಕ್ಲೆನ ರಸ ಮಂಟಮೆ” ನಡೆಯಲಿದೆ.

ತುಳು ಭಾಷಾ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಸ್ಪರ್ಧೆಗಳು

ದಿನಾಂಕ 28-07-2018 ಶನಿವಾರದಂದು ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ ರಾಮಕುಂಜ.ಇಲ್ಲಿ ಉಡುಪಿ ಮತ್ತು ದಕ್ಕಿಣಕನ್ನಡ ಜಿಲ್ಲೆಯ ತುಳು ಕಲಿಸುತ್ತಿರುವ ಎಲ್ಲಾ ಶಾಲೆಯ, ತೃತೀಯ ಭಾಷೆಯಾಗಿ ತುಳುವನ್ನು ಅಭ್ಯಸಿಸುತ್ತಿರುವ ತುಳು ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದಲ್ಲಿಯೆ ಮೊದಲ ಬಾರಿಗೆ ವಿವಿಧ ಸ್ಪರ್ದೆಗಳನ್ನು ಆಯೋಜಿಸಿದ್ದೇವೆ. ಸ್ಪರ್ದೆಗಳು ಬೆಳಗ್ಗೆ ಗಂಟೆ. 9ರಿಂದ ನಡೆಯಲಿರುವುದು. ಹಾಗೂ ಉದ್ಘಾಟನಾ ಸಮಾರಂಭವು ಬೆಳಗ್ಗೆ 10.00 ಗಂಟೆಗೆ ನಡೆಯಲಿರುವುದು. ಈ ಸಭೆಯ ಉದ್ಘಾಟಕರಾಗಿ ಶ್ರೀ ರತ್ನಕುಮಾರ್.ಎಂ ಮಂಗಳೂರು ತುಳುಕೂಟದ ಕಾರ‍್ಯದರ್ಶಿ, ಸಭೆಯ ಅಧ್ಯಕ್ಷರಾಗಿ ಶ್ರೀ.ಎ.ಸಿ.ಭಂಡಾರಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು, ಅತಿಥಿಗಳಾಗಿ ಶ್ರೀಮತಿ ಸುಕನ್ಯ.ಡಿ.ಎನ್. ಪುತ್ತೂರಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶ್ರೀಕೃಷ್ಣಮೂರ್ತಿ.ಇ.ಕಲ್ಲೇರಿ, ಅಧ್ಯಕ್ಷರು , ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾ ರಾಮಕುಂಜ, ವಿಶ್ರಾಂತ ಗುರುಗಳಾದ ಶ್ರೀ ಗೋಪಾಲ ಶೆಟ್ಟಿ.ಇ. ಕಳೆಂಜ ಹಾಗೂ ಪುತ್ತೂರು ತಾಲೂಕಿನ ತುಳುಕೂಟದ ಅಧ್ಯಕ್ಷರುಗಳು ಈ ಕಾರ‍್ಯಕ್ರಮದಲ್ಲಿ ಭಾಗವಹಿಸಲಿರುವರು. ಹಾಗೂ ಅದೇ ದಿನ ಸಂಜೆ ಗಂಟೆ 4.30ಕ್ಕೆ, ಸಮಾರೋಪ ಸಮಾರಂಭನಡೆಯಲಿದೆ. ಆ ಸಭೆಯ ಅಧ್ಯಕ್ಷರಾಗಿ ನೇತ್ರಾವತಿ ತುಳುಕೂಟದ ಉಪಾದ್ಯಕ್ಷರಾದ ಶ್ರೀ ರಾಮ್‌ಮೋಹನ್.ರೈ., ಬಹುಮಾನ ವಿತರಣೆಯ ಅತಿಥಿಗಳಾಗಿ ಶ್ರೀ ರಾಧಾಕೃಷ್ಣ ಕುವೆಚ್ಚಾರು, ಕಾರ‍್ಯದರ್ಶಿ ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾ(ರಿ) ರಾಮಕುಂಜ, ಅತಿಥಿಗಳಾಗಿ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಪ್ರದೀಪ್.ರೈ ಮನವಳಿಕೆ ಭಾಗವಹಿಸುವವರು.

ನಮ್ಮ ತುಳುನಾಡ ಪರಂಪರ, ಆಚರಣೆ ನಂಬಿಕೆ, ಸಂಸ್ಕೃತಿ ,ಇವುಗಳನ್ನೆಲ್ಲ ಉಳಿಸಿ ಬೆಳೆಸುವಲ್ಲಿ ನಮ್ಮ ಮಾಧ್ಯಮ ಮಿತ್ರರ, ಪಾಲು ಬಹಳಷ್ಟಿದೆ. ಮಾಧ್ಯಮಗಳು ತುಳು ಪರಂಪರೆಗೆ ಸಂಬಂಧಿಸಿದ ಕಾರ‍್ಯಕ್ರಮಗಳನ್ನು ಜನರಿಗೆ ತಲುಪಿಸಿದಾಗ ಮಾತ್ರ ತುಳು ಭಾಷೆ ತುಳುನಾಡ, ಸಂಸ್ಕೃತಿ ಅಭಿಮಾನ ಜನರಲ್ಲಿ ಮೂಡಲು ಸಾಧ್ಯ.ತುಳು ಭಾಷೆ ಮಾಧ್ಯಮದ ನಡುವೆ ಮಾಧ್ಯಮವು ಒಂದು ಸೇತುವೆಯಾಗಿ ಕಾರ‍್ಯ ನಿರ್ವಹಿಸಿದಾಗ ಮಾತ್ರ ಯಶಸ್ಸನ್ನು ಪಡೆದು ಜನರನ್ನು ಆರ್ಕಷಿಸಲು ಸಹಾಯವಾಗುತ್ತಿದೆ. ಆಧುನಿಕ ಯುಗದಲ್ಲಿ ಮಾಧ್ಯಮಗಳಿಗೆ ಮಾತ್ರ ಜನರ ಮನಸ್ಸನ್ನು ಮುಟ್ಟುವ ತಾಕತ್ತಿರುವುದು.

ತುಳು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸುವ ಒಂದು ಹೆಜ್ಜೆ. ತುಳು ಲಿಪಿ, ಸಾಹಿತ್ಯ, ಭಾಷೆ ಸಂಸ್ಕೃತಿಯು ರಾಜಾಶ್ರಯ ಇಲ್ಲದೆ, ಸೊರಗಿ ಬರಡರಾದ ಈ ಕಾಲದಲ್ಲಿ ಹಿರಿಯರು ಮಕ್ಕಳಿಗೆ ಅವುಗಳನ್ನು ವರ್ಗಾಯಿಸುವ ಕಾರ‍್ಯವೊಂದು ನಡೆಯಬೇಕಾಗಿದೆ. ಕುಟುಂಬದ ಹಿರಿಯ ಕೊಂಡಿಗಳಾದ ಅಜ್ಜ ಅಜ್ಜಿಗೆ , ಮಕ್ಕಳಿಗೆ ಸುಲಭವಾಗಿ ಅರ್ಥವಾಗುವ ಈಗಿನ ಆಂಗ್ಲ / ಕನ್ನಡ ಭಾಷೆಯ ಮಾಹಿತಿ ಇಲ್ಲದೆ ಇರುವುದರಿಂದ ತುಳು ಸಂಸ್ಕೃತಿಯನ್ನು ತಿಳಿಸುವುದಕ್ಕೆ ಕಷ್ಟ. ಹೀಗಾಗಿ ಇಂದಿನ ಮಕ್ಕಳಿಗೆ ಅವರ ಅಪ್ಪ-ಅಮ್ಮ ಮಾತೃ ಭಾಷೆಯಾದ ತುಳುವನ್ನು ಕಲಿಯಲು ಅವಕಾಶ ಮಾಡಿಕೊಡುವುದು ಒಳ್ಳೆಯದು. ಇದನ್ನು ಕಾರ‍್ಯರೂಪಕ್ಕೆ ತರಲು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಬೇಕಾದಷ್ಟು ಅನುವು ಮಾಡಿಕೊಟ್ಟಿದೆ. ಅಲ್ಲದೆ ಪ್ರೋತ್ಸ್ಸಾಹವನ್ನು ಕೂಡ ನೀಡಿದೆ. ತುಳುಭಾಷೆ ಶಾಲೆಗಳಲ್ಲಿ ಕಲಿಕೆಯ ಭಾಷೆಯಾಗಿದ್ದರೆ ಮಾತ್ರ ಅದು ಮುಂದಿನ ಪೀಳಿಗೆಗೆ ಪಸರಿಕೊಂಡು ಹೋಗಲು ಸಾಧ್ಯ.

2010ರಲ್ಲಿ ಕರ್ನಾಟಕ ಸರ್ಕಾರವು ಉಡುಪಿ ಮತ್ತು ದಕ್ಷಿಣಕನ್ನಡ ಕರಾವಳಿ ಜಿಲ್ಲೆಗಳಲ್ಲಿ 3ನೇ ಭಾಷೆಯಾಗಿ ತುಳುವನ್ನು ಬೋಧಿಸಬಹುದೆಂದು ಆದೇಶ ಹೊರಡಿಸಿದೆ. ಆ ಸಂದರ್ಭದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್ ರವರ ಪರಿಶ್ರಮ ಮತ್ತು ಸತತ ಪ್ರಯತ್ನದಿಂದಾಗಿ ಸರಕಾರವು ಅಲ್ಪಸಂಖ್ಯಾತ ಪ್ರಾದೇಶಿಕ ಭಾಷೆದೆಂದು ಶಾಲೆಗಳಲ್ಲಿ ಕಲಿಸುವವರೆ ಅವಕಾಶ ಮಾಡಿಕೊಟ್ಟಿದೆ. ಆಗಿನ ಅಧಿಕಾರಿಗಳಾಗಿದ್ದ ಪುತ್ತೂರಿನ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಶಶಿಧರ್.ಜಿ.ಎಸ್. ಇವರು ತುಳು ಭಾಷಿಕರಲ್ಲದಿದ್ದರೂ ಮತ್ತು ಈಗಿನ ಶಿಕ್ಷಣ ಇಲಾಖೆ ಉಪನಿರ್ದೇಶಕರಾಗಿರುವ ಶ್ರೀ ಶಿವರಾಮಯ್ಯರವರು ತುಳು ಬೋಧನೆಯನ್ನು ಜಿಲ್ಲೆಯಾದ್ಯಂತ ಪಸರಿಸಲು ಉತ್ತೇಜನ ನೀಡಿದ್ದಾರೆ. ಅಪರೂಪದ ವಿದ್ವಾಂಸರಾದ ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್‌ರವರು ಅಕಾಡೆಮಿಯಿಂದ ನಿವೃತಿ ಹೊಂದಿದರೂ, ತುಳು ಭಾಷೆ ಮತ್ತು ಸಂಸ್ಕೃತಿಯ ಪ್ರಚಾರ ಕಾರ‍್ಯದಲ್ಲಿ ಅಕಾಡೆಮಿಯೊಂದಿಗೆ ಪೂರ್ಣ ಸಂಪರ್ಕದಲ್ಲಿದ್ದುಕೊಂಡು ಬಹುತೇಕ ಶಾಲೆಗಳಲ್ಲಿ ಪ್ರತಿವರ್ಷವು ಹೆಚ್ಚು ಹೆಚ್ಚು ಮಕ್ಕಳು ತುಳು ಕಲಿಕೆ ಮುಂದಾಗುವಂತೆ ಶ್ರಮ ಪಡುತ್ತಿದ್ದರು. ತುಳು ಆಸಕ್ತಿ ಹೊಂದಿದಂತಹ ತುಳು ನಾಡಿನ ಜನರು ಪ್ರಾರಂಭಿಸಿದ ಕೆಲಸಗಳನ್ನು ಮುಂದುವರಿಸಕೊಂಡು ಹೋಗುವುದು ನಮ್ಮ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಈ ಕಾರ‍್ಯಕ್ರಮವನ್ನು ಆಯೋಜಿಸಿಕೊಂಡಿದ್ದೇವೆ.

ಭಾಷೆ ಮತ್ತು ಸಂಸ್ಕೃತಿ:-

ಭಾಷೆ ಮತ್ತು ಸಂಸ್ಕೃತಿಗೆ ಅವಿನಾಭಾವ ಸಂಬಂಧವಿದೆ., ತುಳುವರು ಸಾವಿರಾರು ವರ್ಷಗಳಿಂದ ತನ್ನ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಬಂದವರು. ತುಳು ಸಂಸ್ಕೃತಿಯಲ್ಲಿ ವೈಜ್ಞಾನಿಕತೆ ಇದೆ. ಸಾಮಾಜಿಕ ಪ್ರಜ್ಞೆಯಿದೆ. ಧಾರ್ಮಿಕ ನೆಲೆಗಟ್ಟು ಇದೆ. ಈ ಸಂಸ್ಕೃತಿ ತುಳು ಭಾಷೆಯಿಂದಾಗಿ ಉಳಿದು ಬಂದಿದೆ. ಸಂಸ್ಕೃತಿಯ ಬಗ್ಗೆ ತಿಳಿಯಬೇಕಾದರೆ ಮೊದಲು ನಮ್ಮ ಪರಿಸರದ ಬಗ್ಗೆ ತಿಳಿದುಕೊಳ್ಳಬೇಕು. ತುಳು ಭಾಷೆ ಅಲ್ಲದೇ ಹಿಂದಿ, ಇಂಗ್ಲೀಷ್‌ನಲ್ಲಿ ತುಳು ಪರಿಸರದ ಬಗ್ಗೆ ತಿಳಿಯಲು ಕಷ್ಟ ಸಾಧ್ಯ. ಗಾದೆ, ಒಗಟು, ಕತೆಗಳು ಮಣ್ಣುಪಾಲಾಗಿದೆ. ತುಳುಪಾಠದ ಮೂಲಕ ಮಕ್ಕಳು ಇದನ್ನೆಲ್ಲ ಅಭ್ಯಸಿಸಬಹುದು.

ಕಲಿಕೆ ಎಂದರೆ ಮೊದಲು ತನ್ನನ್ನು ತಾನು ತಿಳಿದುಕೊಳ್ಳುವುದು ತನ್ನ ಕುಟುಂಬದ ಸದಸ್ಯರ ಬಗೆಗೆ ತಿಳಿದುಕೊಳ್ಳುವುದು. ತನ್ನ ಪರಿಸರದ ಬಗ್ಗೆ ತಿಳಿದುಕೊಳ್ಳುವುದು, ಪ್ರತಿಯೊಂದು ಮನೆಯ ಎದುರಿಗೂ ಸಾಮಾನ್ಯವಾಗಿ ಒಂದು ತೆಂಗಿನಮರ ಇರುತ್ತದೆ. ಆ ತೆಂಗಿನ ಮರದ ಬಗ್ಗೆ ಹಿಂದಿ/ ಇಂಗ್ಲೀಷ್‌ಲ್ಲಿ ಎಷ್ಟು ಪದಗಳನ್ನು ಹೇಳಲು ಸಾಧ್ಯ? ಆದರೆ ತುಳುವಿನಲ್ಲಿ ತಾರೆ, ಮಡಲ್ ಕೊತ್ತಲಿಂಗೆ, ಪಾಂದೊಲು, ತಾರೆದ ಸಿರಿ, ಚೀಂಕ್ರ್, ಪಿಂಗಾರ, ಕುಬೆ, ಕೊಂಬು, ಚೆಪ್ಪರಿಂಗೆ, ತೆಂಡೆಲ್, ಬೊಂಡ, ಕರ್ಕ್ , ತಾರಾಯಿದ ನೀರ್, ಬನ್ನಂಗಾಯಿ, ತಾರಾಯಿ, ಗೋಟುತಾರಾಯಿ, ಕಿಲೆ, ತಿಪ್ಪಿ, ತೆಪ್ಪು, ಹೀಗೆ ಹಲವಾರು ಶಬ್ದಗಳನ್ನು ತಿಳಿದುಕೊಳ್ಳಲು ಸಾಧ್ಯ. ಇದು ಮಗುವಿನ ಜ್ಞಾನವನ್ನು ವೃದ್ಧಿಸಲು ಸಾಧ್ಯ. ತುಳು ಕಲಿಯದ ಮಗುವಿಗೆ ಈ ಪದಗಳೆಲ್ಲ ನಷ್ಟಗೊಳ್ಳುತ್ತದೆ. ಹಾಗೆಯೆ, ಸಂಬಂಧಗಳು ಮನೆಯೊಳಗಿರುವ ಪಾತ್ರೆಗಳು, ಪರಿಸರದಲ್ಲಿಯ ಮರ-ಗಿಡ, ಪ್ರಾಣಿ-ಪಕ್ಷಿಗಳ ಹೆಸರುಗಳು ಹೀಗೆ ಅನೇಕ ಶಬ್ದಗಳನ್ನು ತುಳುವಿನಲ್ಲಿ ಕಲಿಯಲು ಸಾಧ್ಯ. ಅಂಡಮಾನ್ ದ್ವೀಪದಲ್ಲಿದ್ದ ಮೂಲ ನಿವಾಸಿಗಳು ‘ಭೋ’ ಎಂಬ ಭಾಷೆಯನ್ನು ಮಾತನಾಡುತ್ತಿದ್ದರು. ಅಲ್ಲಿಗೆ ವಲಸೆ ಹೋದವರ ಪ್ರಭಾವದಿಂದಾಗಿ ಆದಿವಾಸಿಗಳ ಭಾಷೆ ಎಂಬ ಕೀಳರಿಮೆಯಿಂದ ‘ಭೋ’ ಭಾಷೆ ನಶಿಸುತ್ತಾ ಬಂತು. ಕೊನೆಗೆ ಒಬ್ಬ ಆದಿವಾಸಿ ಮುದುಕಿ ಮಾತ್ರ ‘ಭೋ’ ಭಾಷೆ ಮಾತನಾಡುವವಳಿದ್ದಳು. ಅವಳು ತೀರಿದಾಗ ಅವಳೊಂದಿಗೆ ಆ ಭಾಷೆ ಕೂಡ ಮಣ್ಣಾಯಿತು. ತುಳುವಿನ ಸ್ಥಿತಿ ಹಾಗಾಗ ಕೂಡದು ಎಂಬ ದೃಷ್ಟಿಯಿಂದ ಅಕಾಡೆಮಿ ಹಾಗೂ ಹಿರಿಯ ವಿದ್ವಾಂಸರು ಬಹಳಷ್ಟು ಕಾರ‍್ಯವನ್ನು ಮಾಡಿಕೊಂಡು ಬರುತ್ತಿದ್ದಾರೆ.

ಕಳೆದ ಸುಮಾರು 10 ವರ್ಷಗಳ ಹಿಂದೆ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯು ತುಳು ಅಕಾಡೆಮಿಯ ಸಹಕಾರದೊಂದಿಗೆ “ತುಳು ಕಲಿಕೆ-ನಲಿಕೆ-ತೆಲಿಕೆ” ಕಜ್ಜಕೊಟ್ಯವನ್ನು ಮಾಡಿತು. ಈ ಸಂದರ್ಭದಲ್ಲಿ ಉಡುಪಿಯ ಮಠಾದೀಶರಾದ ಶ್ರೀ ಪೇಜಾವರ ಸ್ವಾಮಿಗಳು ತುಳು ಲಿಪಿಯ ಹಸ್ತಾಕ್ಷರದೊಂದಿಗೆ ಸಭೆಯನ್ನು ಉದ್ಘಾಟಿಸಿದರು. ಅಂದಿನಿಂದ ತುಳುಭಾಷೆ ಸಂಸ್ಕೃತಿಯನ್ನು ಉಳಿಸುವ ಮತ್ತು ಪಸರಿಸುವ ಮಹತ್ತರವಾದ ಕಾರ್ಯವನ್ನು ಸಂಸ್ಥೆ ಮಾಡುತ್ತಾ ಬರುತ್ತಿದೆ. ತುಳು ಹಬ್ಬಗಳಾದ ಪತ್ತನಾಜೆ, ಆಟಿ, ಕೆಡ್ಡಸ ಇವುಗಳ ಕುರಿತಾಗಿ ಮಾಹಿತಿಗಳನ್ನು ಒಳಗೊಂಡಂತೆ ಬಹಳ ವಿಜೃಂಭಣೆಯಿಂದ ಹಾಗೂ ಜನಪದ ಕುಣಿತಗಳನ್ನು , ಕಬಿತೆಗಳನ್ನು ನಡೆಸುತ್ತಾ ಬಂದಿದೆ. ಪ್ರಾಥಮಿಕ ಮತ್ತು ಪ್ರೌಢ ವಿಭಾಗಳಲ್ಲಿ ತುಳು ಸಂಸ್ಕೃತಿಯನ್ನು ಸಂಬಂಧಿಸಿದ ಹಲವು ವಿಷಯಗಳನ್ನು ಮಂಗಳೂರು ಆಕಾಶವಾಣಿಯಲ್ಲಿ ಪಸರಿಸುತ್ತಾ ಬಂದಿದೆ. ಹಾಗೂ ಹೊರಗಿನ ಬೇರೆ ಬೇರೆ ಜಿಲ್ಲೆಗಳಲ್ಲಿ ತುಳು ಸಂಸ್ಕೃತಿಯನ್ನು ಪಸರಿಸುವ ಕಾರ‍್ಯವನ್ನು ಇಂದಿನವರೆಗೂ ಮಾಡುತ್ತಾ ಬಂದಿದೆ.

6ನೇ ತರಗತಿಯಿಂದ ಹತ್ತನೇ ತರಗತಿವರೆಗೆ ತುಳು ಪಠ್ಯವನ್ನು ಕೂಡ ಬೋಧಿಸುತ್ತಾ ಬರುತ್ತಿದೆ. ಅಕಾಡೆಮಿ ನಡೆಸಿದ ರಾಜ್ಯಮಟ್ಟದ ಜನಪದ ಗೀತೆ ಸ್ಪರ್ಧೆಯಲ್ಲಿ ಕೂಡ ಪ್ರಥಮ ಸ್ಥಾನವನ್ನು ಸಂಸ್ಥೆಯು ಪಡೆದುಕೊಂಡಿದೆ.

ಪ್ರಸ್ತುತ ಸಂಸ್ಥೆಯು ಅಕಾಡೆಮಿಯ ವತಿಯಿಂದ ಉಡುಪಿ ಮತ್ತು ದ.ಕ.ಜಿಲ್ಲೆಗಳಲ್ಲಿ ತುಳು ಪಠ್ಯವನ್ನು ಕಲಿಯುತಿರುವ ವಿದ್ಯಾರ್ಥಿಗಳಿಗೆ ಮುಂದಿನ ಪೀಳಿಗೆಗೆ ತುಳು ಭಾಷೆಂ ಸಂಸ್ಕೃತಿಯನ್ನು ಉಳಿಸಲು, ಬೆಳೆಸಲು , ಪ್ರೋತ್ಸಾಹಿಸಲು ನಮ್ಮ ಸಂಸ್ಥೆಯಲ್ಲಿ ತುಳು ಸಂಸ್ಕೃತಿಯನ್ನು ಬಿಂಬಿಸುವ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಿದ್ದೇವೆ.

                                                        “ತುಳು ಕಲ್ಪಿ ಜೋಕ್ಲೆನ ರಸ ಮಂಟಮೆ”
ಎಂಬ ಹೆಸರಿನೊಂದಿಗೆ, ಪ್ರತಿ ಮಗುವಿನಲ್ಲಿ ಅಡಗಿರುವ ತುಳುಭಾಷೆ- ಸಂಸ್ಕೃತಿ ಈ ಮಂಟಪದಲ್ಲಿ ಹೊರಬರಲಿ ಎನ್ನುವ ದಿಶೆಯಿಂದ ರಾಜ್ಯ ಮಟ್ಟದಲ್ಲಿ ಮೊದಲ ಬಾರಿಗೆ ಈ ಕಾರ‍್ಯಕ್ರಮವಮನ್ನು ಹಮ್ಮಿಕೊಂಡಿದೆ. ಇದರ ವಿವರಗಳು ಈ ಕೆಳಗಿವೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ತೃತೀಯ ಭಾಷೆಯಾಗಿ ತುಳು ಕಲಿಯುತ್ತಿರುವ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ನಡೆಸುವ ಸ್ಫರ್ಧೆಗಳ ವಿವರ.

ದಿನಾಂಕ: 28-07-2018 ಶನಿವಾರ ಬೆಳಗ್ಗೆ ಗಂಟೆ 9ಕೆ.

  • ವೈಯಕ್ತಿಕ ಸ್ಫರ್ಧೆಗಳು

1. ತುಳು ಕಬಿತೆ 3 ನಿ.
2. ತುಳು ಭಾವ ಗೀತೆ 5 ನಿ.
3. ಮಡಲಿನ ಕರಕುಶಲ ವಸ್ತುಗಳ ತಯಾರಿ 30 ನಿ.
4. ತುಳುವೆರೆ ಹಳ್ಳಿ ಜೀವನದ ಚಿತ್ರ 30 ನಿ.
5. ತುಳು ಭಾಷಣ 5 ನಿ.
6. ತುಳು ಏಕಪಾತ್ರ ಅಭಿನಯ 7 ನಿ.
7. ತುಳು ವೈಯಕ್ತಿಕ ಯಕ್ಷಗಾನ 15 ನಿ.
8. ತುಳು ಜನಪದ ಕತೆ 6 ನಿ.

  • ತಂಡ ಸ್ಫರ್ಧೆಗಳು (ಇಬ್ಬರು)

9. ತುಳು ಒಗಟು 10 ನಿ.
10. ತುಳು ಗಾದೆ 8 ನಿ.
11. ತುಳು ರಸಪ್ರಶ್ನೆ 10 ನಿ.

  • ತಂಡ ಸ್ಫರ್ಧೆಗಳು(ಗುಂಪು-ಗರಿಷ್ಠ 10ಜನ)

12. ತುಳು ಸಂಸ್ಕೃತಿಯನ್ನು ಬಿಂಬಿಸುವ ತುಳು ನಾಟಕ 20 ನಿ.
13. ತುಳು ಜನಪದ ಕುಣಿತ 8 ನಿ.

ಸ್ಫರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರದೊಂದಿಗೆ ನಗದು ಬಹುಮಾನವನ್ನು ನೀಡಲಾಗುವುದು.
ವೈಯಕ್ತಿಕ ಸ್ಫರ್ಧೆಗಳ ಮೊದಲನೇ ಬಹುಮಾನ 500ರೂ.
ಎರಡನೇ ಬಹುಮಾನ 300ರೂ
ಮೂರನೇ ಬಹುಮಾನ 200ರೂ

ತಂಡ-(ಇಬ್ಬರು) ಸ್ಫರ್ಧೆಗಳ ಮೊದಲನೇ ಬಹುಮಾನ 1000ರೂ
ಎರಡನೇ ಬಹುಮಾನ 600ರೂ
ಮೂರನೇ ಬಹುಮಾನ 400ರೂ

ತಂಡ-(ಗುಂಪು) ಸ್ಫರ್ಧೆಗಳಲ್ಲಿ ಮೊದಲನೇ ಬಹುಮಾನ 3000ರೂ
ಎರಡನೇ ಬಹುಮಾನ 2000ರೂ
ಮೂರನೇ ಬಹುಮಾನ 1000ರೂ

ಅಲ್ಲದೇ ಶಾಲೆಗೆ ಸಮಗ್ರ ಪ್ರಶಸ್ತಿಯನ್ನು ಕೂಡ ನೀಡಲಾಗುವುದು.

ಸೂಚನೆ :

  • ತುಳುವನ್ನು ತೃತೀಯ ಭಾಷೆಯಾಗಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ
  • ಕುಣಿತ ಮತ್ತು ನಾಟಕ ಬಿಟ್ಟು ಒಬ್ಬ ವಿದ್ಯಾರ್ಥಿಗೆ ಒಂದು ಸ್ಫರ್ಧೆಯಲ್ಲಿ ಮಾತ್ರ ಭಾಗವಹಿಸಲು ಅವಕಾಶ.
  • ಒಗಟು, ಗಾದೆ, ರಸಪ್ರಶ್ನೆಗಳಿಗೆ 2 ವಿದ್ಯಾರ್ಥಿಗಳ ಒಂದು ತಂಡ; ಒಂದು ಶಾಲೆಯಿಂದ ಒಂದು ತಂಡಕ್ಕೆ ಮಾತ್ರ ಅವಕಾಶ.
  • ಹಿಮ್ಮೇಳದ ವಿದ್ಯಾರ್ಥಿಗಳನ್ನು ಬಿಟ್ಟು ಕುಣಿತ ಮತ್ತು ನಾಟಕಕ್ಕೆ 10 ಜನ ಮೀರಿರಬಾರದು.
  • ಭಾವಗೀತೆಗೆ ಕವಿಯ ಹೆಸರು ಕಡ್ಡಾಯ.
  • ಕರಕುಶಲ ವಸ್ತುಗಳ ತಯಾರಿಕೆಗೆ ಮತ್ತು ಚಿತ್ರಕಲೆಗೆ ಸಂಬಂಧಿಸಿದ ವಸ್ತುಗಳನ್ನು ತರತಕ್ಕದ್ದು.
  • ಭಾಷಣದ ವಿಷಯಗಳು

1.ಮರಿಯಾಲಗ್ ಬೋಡಾಪಿನ ಅಟ್ಟಣೆ ಬೊಕ್ಕ ಜೀವನ
2.ತುಳು ನಾಡ್‌ದ ನಂಬೊಲಿಗೆಲು, ಆಚರಣೆ ಬೊಕ್ಕ ವಿಧಿ ವಿಧಾನೊಲು.

ಈ ಎರಡರಲ್ಲಿ ಯಾವುದಾದರೂ ಒಂದನ್ನು ಸ್ಫರ್ಧೆಯ ದಿನ ಆಯ್ಕೆ ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:9481922843/9980903545/08251258535 ಅಥವಾ sremramakunja@gmail.comನ್ನು ಸಂಪರ್ಕಿಸಬಹುದು.

ಸ್ಫರ್ಧೆಗಳು ಬೆಳಗ್ಗೆ9 ಗಂಟೆಗೆ ನಡೆಯುವುದರಿಂದ ದೂರದ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅವಶ್ಯವಿದ್ದಲ್ಲಿ ಸ್ಫರ್ಧೆಯ ಹಿಂದಿನ ದಿನದ ವಸತಿ ಸೌಕರ್ಯಗಳನ್ನು ಕಲ್ಪಿಸಿ ಕೊಡಲಾಗುವುದು.

ಈ ಪತ್ರಿಕಾಗೋಷ್ಠಿಯಲ್ಲಿ ಶ್ರೀ.ಎ.ಸಿ.ಭಂಡಾರಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು, ಶ್ರೀ ಚಂದ್ರಹಾಸ.ರೈ.ರಿಜಿಸ್ಟ್ರಾರರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು, ಶ್ರೀ.ಕೆ.ಸೇಸಪ್ಪ ರೈ ಕಾರ‍್ಯದರ್ಶಿ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ರಾಮಕುಂಜ, ಶ್ರೀಮತಿ ಸರಿತಾ ಶಿಕ್ಷಕಿ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ರಾಮಕುಂಜ, ಪ್ರೇಮ ದೈಹಿಕ ಶಿಕ್ಷಕಿ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ರಾಮಕುಂಜ ಮೊದಲಾದವರು ಉಪಸ್ಥಿತರಿರುವರು.