Shri Ramakunjeshwara Residential English Medium High School, Ramakunja

Latest News

ಶಿಕ್ಷಕರ ದಿನಾಚರಣೆ

 

ಶ್ರೀರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ ರಾಮಕುಂಜ ಇಲ್ಲಿಯ ಶಾಲಾ ವಿದ್ಯಾರ್ಥಿಗಳು ಶಿಕ್ಷಕರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಶಿಕ್ಷಕರ ದಿನಾಚರಣೆಯನ್ನು ವಿಭಿನ್ನವಾಗಿ ಆಚರಿಸಿದರು.

 

ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈ ದೀಪ ಬೆಳಗಿಸಿ ಉದ್ಘಾಟಿಸಿ ಗುರು-ಶಿಷ್ಯರ ಸಂಬಂಧಕ್ಕೆ ಶಿಕ್ಷಕರ ದಿನಾಚರಣೆ ಸಾಕ್ಷಿಯಾಗಿದೆ. ಗುರು ಪರಂಪರೆ ಎನ್ನುವುದು ಜ್ಞಾನ ಭಂಡಾರ ಇದ್ದಂತೆ, ದಿನದಿಂದ ದಿನಕ್ಕೆ ಗುರು ಪರಂಪರೆ ನಾಶಿಸಿ ಹೋಗುವ ಪರಿಸ್ಥಿತಿ ಎದುರಾಗಿದೆ. ಪ್ರಸ್ತುತವಾಗಿ ವಿದ್ಯಾರ್ಥಿಗಳಿಗೆ ಗುರುಕುಲ ಮಾದರಿಯ ಶಿಕ್ಷಣ ಅಗತ್ಯ. ಆದರೆ ಜಾಗತೀಕರಣ ಮುಂದುವರಿದಂತೆ ಶಿಕ್ಷಣದಲ್ಲಿ ಬದಲಾವಣೆಯನ್ನು ಕಾಣುತ್ತಿದ್ದೇವೆ. ಎಲ್ಲ ವಿದ್ಯಾರ್ಥಿಗಳು ಗುರುಗಳನ್ನು ಗೌರವಿಸುವ ಮೂಲಕ ಗುರು-ಸ್ಥಾನ ಲಭಿಸುವುದು ಎಂದು ಹೇಳಿದರು.

 

ವಿದ್ಯಾರ್ಥಿ ನಿಲಯದ ವಾರ್ಡನ್ ರಮ್ಯ.ರೈ ಹಾಗೂ ವಿದ್ಯಾರ್ಥಿನಿ ಕು.ಶುಭಪ್ರದಾ ಶಿಕ್ಷಕರ ದಿನಾಚರಣೆಯ ಮಹತ್ವಗಳ ಬಗ್ಗೆ ವಿಚಾರ ಮಂಡಿಸಿದರು.

 

ಸ್ಪರ್ಧೆಗಳು: ಸಂಗೀತ ಕುರ್ಚಿ, ಲಿಂಬೆ ಚಮಚ ಓಟ, ವಾಲಿಬಾಲ್, ಕ್ರಿಕೆಟ್ ಹೀಗೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ಎಲ್ಲ ಶಿಕ್ಷಕರಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಯಿತು.

 

ವೇದಿಕೆಯಲ್ಲಿ ಆಡಳಿತಾಧಿಕಾರಿ ಆನಂದ್.ಎಸ್.ಟಿ, ಪ್ರೌ.ಶಾಲೆಯ ಮುಖ್ಯಗುರು ಗಾಯತ್ರಿ.ಯು.ಎನ್, ಪ್ರಾ.ಶಾಲೆಯ ಮುಖ್ಯಗುರು ಲೋಹಿತ, ಶಿಕ್ಷಕರು ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗ ಮೊದಲಾದವರು ಉಪಸ್ಥಿತರಿದ್ದರು. ವಿದ್ಯಾರ್ಥಿ ನವೀನ ಕೃಷ್ಣ ಕಾರ್ಯಕ್ರಮ ನಿರೂಪಿಸಿದರು.