Latest News

ಅ.3 ಮತ್ತು 4ರಂದು ಕಡಬ ವಲಯ ಮಟ್ಟದ ಕ್ರೀಡಾಕೂಟ
ಕಡಬ ವಲಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಕ್ರೀಡಾಕೂಟದ ಪೂರ್ವಭಾವಿ ಸಭೆ ಶ್ರೀರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು.
ಅ.3ಮತ್ತು 4ರಂದು ಶ್ರೀರಾ.ಆಂ.ಮಾ.ಶಾಲೆಯ ಮೈದಾನದಲ್ಲಿ ಕ್ರೀಡಾಕೂಟ ನಡೆಯಲಿದೆ. ಪೂ.9.30ರಿಂದ ಕ್ರೀಡೆಗಳು ಪ್ರಾರಂಭಗೊಳ್ಳಿದೆ. ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.
ಅಧ್ಯಕ್ಷತೆ ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ.ರೈ , ಜಿಲ್ಲಾ ದೈಶಿಶಿ ಸಂಘದ ಅಧ್ಯಕ್ಷ ಶಿವರಾಮ ಏನೆಕಲ್, ತಾಲೂಕು ದೈಶಿಶಿ ಸಂಘದ ಅಧ್ಯಕ್ಷ ಬಾಲಕೃಷ್ಣ.ರೈ.ಓಂತ್ರಡ್ಕ, ರಾಮಕುಂಜ ಸಿಆರ್ಪಿ ಮಹೇಶ್, ಅಲಂಕಾರಿನ ಸಿಆರ್ಪಿ ಪ್ರದೀಪ್ ಬಾಕಿಲ, ಆಡಳಿತಾಧಿಕಾರಿ ಆನಂದ.ಎಸ್.ಟಿ, ಶೈಕ್ಷಣಿಕ ಸಲಹೆಗಾರ ರವೀಂದ್ರ ದರ್ಭೆ, ಶಾಲಾ ಮುಖ್ಯಗುರು ಗಾಯತ್ರಿ.ಯು.ಎನ್ ದೈಹಿಕ ಶಿಕ್ಷಕಿ ಪ್ರೇಮ, ಹಾಗೂ ಕಡಬ ವಲಯ ಮಟ್ಟದ ಸಿಆರ್ಪಿ, ಶಾಲಾ ಮುಖ್ಯಗುರುಗಳು, ದೈಹಿಕ ಶಿಕ್ಷಕರು ಮೊದಲಾದವರು ಉಪಸ್ಥಿತರಿದ್ದರು.