Latest News

ಶ್ರೀರಾಮಕುಂಜೇಶ್ವರ ಆಂ.ಮಾ.ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ
ದ.ಕ.ಜಿ.ಪಂ. ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಹಾಗೂ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಂಯುಕ್ತ ಆಶ್ರಯದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಕ್ರೀಡಾಂಗಣದಲ್ಲಿ ನಡೆದ ತಾಲೂಕು ಮಟ್ಟದ ವಿವೇಕ ಕ್ರೀಡಾ ಸಂಭ್ರಮದಲ್ಲಿ ಶ್ರೀರಾ.ಆಂ.ಮಾ.ವಿದ್ಯಾರ್ಥಿಗಳಾದ ಸಂಕಲ್ಪ.ಬಿ.ಆರ್(10ನೇ)ಕೋಲು ಜಿಗಿತ ಪ್ರಥಮ, ವರುಣ್.ಡಿ.ಸಿ(10ನೇ)ಹ್ಯಾಮರ್ ತ್ರೋ ಪ್ರಥಮ, ಕಿರಣ್.ಕೆ(10ನೇ)100ಮೀ ದ್ವಿತೀಯ, ಧನುಶ್.ಕೆ.(8ನೇ)100ಮೀ ದ್ವೀತೀಯ ಸ್ಥಾನಗಳನ್ನು ಗಳಿಸಿ ಅ.30,31ರಂದು ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ದೈಹಿಕ ಶಿಕ್ಷಕರಾದ ಪ್ರೇಮ ಹಾಗೂ ವಾಸಪ್ಪ ತರಬೇತಿ ನೀಡಿದರು. ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ.ರೈ , ಆಡಳಿತಾಧಿಕಾರಿ ಆನಂದ.ಎಸ್.ಟಿ, ಶಾಲಾ ಮುಖ್ಯಗುರು ಗಾಯತ್ರಿ.ಯು.ಎನ್, ಶೈಕ್ಷಣಿಕ ಸಲಹೆಗಾರ ರವೀಂದ್ರ ದರ್ಬೆ, ಶಿಕ್ಷಕರು ಹಾಗೂ ಸಂಸ್ಥೆಯ ಸಿಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದರು.