Latest News

74ನೇ ವರ್ಷದ ಸ್ವಾತಂತ್ರ್ಯೋತ್ಸವ ಆಚರಣೆ
ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ ರಾಮಕುಂಜ, ಇಲ್ಲಿ 74ನೇ ವರ್ಷದ ಸ್ವಾತಂತ್ರ್ಯೋತ್ಸವನ್ನು ಸಾಂಕೇತಿಕವಾಗಿ ಆಚರಿಸಲಾಯಿತು. ಸಭಾಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಮಾನ್ಯ ಕಾರ್ಯದರ್ಶಿಯವರಾದ ಶ್ರೀ ಯುತ ಸೇಸಪ್ಪ ರೈ ಕೆ ಯವರು 74ನೇವರ್ಷದ ಸ್ವಾತಂತ್ರ್ಯ ದಿನದ ಶುಭ ಹಾರೈಸುತ್ತಾ, ಹೊಸ ರಾಷ್ಟ್ರ್ರೀಯ ಶಿಕ್ಷಣ ನೀತಿಗೆ ಶಿಕ್ಷಕರು ಬದ್ಧರಾಗುವಂತೆ ಸೂಚಿಸುತ್ತಾ, ಕೋವಿಡ್-19 ರ ಸಂಘರ್ಷದ ನಡುವೆ ಶಿಕ್ಷಕರು ವಿದ್ಯಾರ್ಥಿಗಳಿಗೆ ಆನ್-ಲೈನ್ ಶಿಕ್ಷಣ ನೀಡುವುದರ ಮೂಲಕ ಕಾಲವಕಾಶದ ಸದ್ಭಳಕೆ ಮಾಡಿಕೊಳ್ಳಲು ಶಿಕ್ಷಕರಿಗೆ ಇದು ವರದಾನವಾಯಿತು ಎಂದರು. ಶಾಲಾ ಆಡಳಿತಾಧಿಕಾರಿಯಾದ ಶ್ರೀಯುತ ಆನಂದ ಎಸ್ ಟಿ ಯವರು ಧ್ವಜಾರೋಹಣ ಗೈದು, ಮಾರಣಾಂತಿಕ ಕೋವಿಡ್-19 ರ ಪ್ರತಿಕೂಲ ಪರಿಸ್ಥಿತಿಯಲ್ಲೂ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಆಚರಿಸುತ್ತಾ ಎಲ್ಲಾ ಶಿಕ್ಷಕ ಬಂಧುಗಳಿಗೆ ಅತ್ಯಂತ ಎಚ್ಚರಿಕೆಯಿಂದ ಜೀವನ ಕ್ರಮ ನಡೆಸುವಂತೆ ಕಿವಿ ಮಾತು ಹೇಳಿ, ರಾಷ್ಟ್ರೀಯ ಐಕ್ಯತೆಯನ್ನು ಇನ್ನಷ್ಟು ಭದ್ರ ಪಡಿಸುವಂತೆ ಎಲ್ಲಾಶಿಕ್ಷಕರಲ್ಲಿ ಮನವಿ ಮಾಡಿಕೊಂಡರು. ಶಾಲಾ ಶೈಕ್ಷಣಿಕ ಸಲಹೆಗಾರರಾದ ಶ್ರೀಯುತ ರವೀಂದ್ರ ದರ್ಬೆ ಯವರು ಮಾತಾನಾಡುತ್ತಾ, ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರ ಹುತಾತ್ಮರನ್ನು ನೆನಪಿಸುತ್ತಾ, ಅವರ ಜೀವನ,ತತ್ವಾದರ್ಶ ಇನ್ನೂ ಕೂಡ ಮಾದರಿ. ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ತಿಳಿಸಿದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಗಾಯತ್ರಿ ಯು ಎನ್ ಸ್ವಾಗತಿಸಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಲೋಹಿತಾ ವಂದನಾರ್ಪಣೆಗೈದರು. ನಂತರ ಸಿಹಿ ತಿಂಡಿ ವಿತರಿಸಲಾಯಿತು.