Latest News

Hindi Divas Celebration
ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ರಾಮಕುಂಜ ಇದರ ಸಹಯೋಗದೊಂದಿಗೆ ರೋಟರಿ ಕ್ಲಬ್ ಉಪ್ಪಿನಂಗಡಿ ಹಾಗೂ ಜೇಸಿಐ ಉಪ್ಪಿನಂಗಡಿ ಜಂಟಿ ಆಶ್ರಯ ದಲ್ಲಿ ‘ಹಿಂದಿ ದಿವಸ್’ ಕಾರ್ಯಕ್ರಮವನ್ನು 14.09.2020 ರಂದು ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಸಂಸ್ಥೆಯ ಕಾರ್ಯನಿರ್ವಹಣಾ ಕಾರ್ಯದರ್ಶಿ ಶ್ರೀಯುತ ಸೇಸಪ್ಪ ರೈ ಕೆ ಭಾಗವಹಿಸಿ ಮಾತನಾಡಿ ಎಲ್ಲಾ ಭಾಷೆಗಳನ್ನು ಕಲಿಯುವ ಮುಖೇನ ಪ್ರಾಪಂಚಿಕ ಜ್ಞಾನವನ್ನು ವೃಧ್ಧಿಪಡಿಸುವಂತೆ ಎಲ್ಲಾ ಶಿಕ್ಷಕರಲ್ಲಿ ಮನವಿ ಮಾಡಿಕೊಂಡರು. ಪ್ರಧಾನ ಭಾಷಣಕಾರರಾಗಿ ಆಗಮಿಸಿದ ಶ್ರೀಯುತ ಜಯಪ್ರಕಾಶ್ ಪುಣಚ ‘ಹಿಂದಿ ಸಾಹಿತಿಗಳ ಕೆಲವು ಪಧ್ಯದ ಸಾಲುಗಳನ್ನು ಹಾಡುತ್ತಾ, ಭಾಷೆ ತಮ್ಮ ಸಾಂಸ್ಕೃತಿಕ ಬದುಕನ್ನು ಹೇಗೆ ಕಟ್ಟಿ ಕೊಡುತ್ತದೆ’ ಎನ್ನುವ ಮುಖೇನ ಹಿಂದಿ ಭಾಷೆಯೊಂದಿಗೆ ಮಾತೃಭಾಷೆ ಹಾಗೂ ಇತರ ಭಾಷೆಗಳನ್ನು ಕಲಿಯಬೇಕೆಂದು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷರಾದ ರೋ. ರವೀಂದ್ರ ದರ್ಬೆ ಯವರು ಎಲ್ಲಾ ಶಿಕ್ಷಕರಿಗೆ ರೋಟರಿ ವತಿಯಿಂದ ಮುಖಗವಚವನ್ನು ವಿತರಿಸುತ್ತಾ ರೋಟರಿ ಸಂಘಟನೆಯ ಕಿರುಪರಿಚಯವನ್ನು ಸಭಿಕರಿಗೆ ನೀಡಿದರು. ವೇದಿಕೆಯಲ್ಲಿ ಸಂಸ್ಥೆಯ ಆಡಳಿತ ಅಧಿಕಾರಿ ಶ್ರೀಯುತ ಆನಂದ ಎಸ್ ಟಿ, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಗಾಯತ್ರಿ ಯು ಎನ್, ಶ್ರೀಮತಿ ಲೋಹಿತ ಉಪಸ್ಥಿತರಿದ್ದರು. ಪ್ರಾರ್ಥನೆಯನ್ನು ಕುಮಾರಿ ಮಾನ್ಯ ನಿರ್ವಹಿಸಿದರು. ಜೇಸಿಐ ಅಧ್ಯಕ್ಷರಾದ ಶ್ರೀಯುತ ಶಶಿಧರ್ ವಂದನಾರ್ಪಣೆಗೈದರು. ಹಿಂದಿ ಸಹ ಶಿಕ್ಷಕರಾದ ಶ್ರೀಯುತ ಗೋಪಾಲ್ ಕಾರ್ಯಕ್ರಮ ನಿರೂಪಿಸಿದರು. ಸಿಹಿತಿಂಡಿ ವಿತರಿಸಲಾಯಿತು.