Latest News

ಮೌಲ್ಯಾಧಾರಿತ ಶಿಕ್ಷಣ ಕಾರ್ಯಕ್ರಮ
ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ ರಾಮಕುಂಜ ಇಲ್ಲಿ ದಿನಾಂಕ 13.12.2021 ನೇ ಸೋಮವಾರದಂದು ವಿದ್ಯಾರ್ಥಿಗಳಿಗೆ “ಮಾನವೀಯ ಮೌಲ್ಯಗಳು” ಎಂಬ ವಿಚಾರದ ಬಗ್ಗೆ ಕಾರ್ಯಗಾರ ನಡೆಯಿತು. ಮಂಗಳೂರು ಶ್ರೀನಿವಾಸ ತಾಂತ್ರಿಕ ವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀಯುತ ಸೂರ್ಯನಾರಾಯಣ ಕೆ ಇವರು ಮಾರ್ಗದರ್ಶನ ನಡೆಸಿಕೊಟ್ಟರು. ಮಾನವೀಯ ಮೌಲ್ಯಗಳಾದ ಪ್ರೀತಿ, ಸಹನೆ, ಕೃತಜ್ಞತೆ, ಸಂಬಂಧಗಳು ಹಾಗೂ ಸಂತೋಷ ಇವುಗಳನ್ನು ಜೀವನದಲ್ಲಿ ಪಡೆಯುವ ಹಾಗೂ ಅನುಭವಿಸುವ ಸುಲಭ ಮಾರ್ಗೋಪಾಯಗಳನ್ನು ವಿದ್ಯಾರ್ಥಿ ದೆಸೆಯಲ್ಲಿ ಹೇಗೆ ಅಳವಡಿಸಿಕೊಳ್ಳಬೇಕು ಎಂದು ಮಾರ್ಮಿಕವಾಗಿ ದೃಷ್ಟಾಂತಗಳ ಮೂಲಕ ಮನದಟ್ಟು ಮಾಡಿದರು. ಸಭಾಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಶ್ರೀಯುತ ಕೆ ಸೇಸಪ್ಪ ರೈ ಸಭಾಧ್ಯಕ್ಷತೆ ವಹಿಸಿ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಗುಣಗಾನ ಮಾಡಿದರು. ಆಡಳಿತಾಧಿಕಾರಿ ಶ್ರೀಯುತ ಆನಂದ ಯಸ್ ಟಿ. ಸಂದರ್ಭೋಚಿತವಾಗಿ ಮಾತನಾಡಿದರು. ಸಂಸ್ಥೆಯ ಮುಖ್ಯೋಪಧ್ಯಾಯಿನಿ ಶ್ರೀಮತಿ ಗಾಯತ್ರಿ ಯು ಎನ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರು- ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.