Latest News

ದಿನಾಂಕ 12-01-2022 ರಂದು ಬ್ಲೂ ಡೇ ಆಚರಿಸಲಾಯಿತು
ಶ್ರೀ ರಾಮಕುಂಜೇಶ್ವರ ಕಿಂಡರ್ ಗಾರ್ಟನ್ ನಲ್ಲಿ ದಿನಾಂಕ 12-01-2022 ರಂದು ಬ್ಲೂ ಡೇ ಆಚರಿಸಲಾಯಿತು. ಬಾಲ್ಯದಲ್ಲಿ ಬಣ್ಣದ ಅರಿವು ಅತಿ ಸುಲಭದಲ್ಲಿ ಮಕ್ಕಳಿಗೆ ಪರಿಚಯಿಸಲು ವಿವಿಧ ಬಣ್ಣಗಳ ಗುರುತಿಸುವಿಕೆ ಸ್ಪಷ್ಟವಾಗಲು ಈ ಬಾರಿ ಬ್ಲೂ ಬಣ್ಣವನ್ನು ಮಕ್ಕಳಿಗೆ ಪರಿಚಯಿಸಲಾಯಿತು. ಬ್ಲೂ ಬಣ್ಣದ ವಿವಿಧ ಕ್ರಾಫ್ಟ್ ಗಳು ಬಲೂನುಗಳು, ಆಟಿಕೆಗಳು, ನೀಲಿ ಬಣ್ಣದ ವಿವಿಧ ಪರಿಕರಗಳನ್ನು ಒಂದೇ ಕಡೆ ಜೋಡಿಸಿ, ಅಲಂಕರಿಸಿ ಬ್ಲೂ ಡೇ ಆಚರಿಸುವುದರೊಂದಿಗೆ ನೀಲಿ ಬಣ್ಣದಿಂದ ಕೂಡಿದ ಪೇಂಟಿಂಗ್, ಡ್ರಾಯಿಂಗ್ ಮಾಡುವ ಮೂಲಕ ಬಣ್ಣದ ತಿಳುವಳಿಕೆ ಮೂಡಿಸಲು ಈ ಬಾರಿ ಬ್ಲೂ ಡೇ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಕೆ ಸೇಸಪ್ಪ ರೈ, ಪ್ರಾಥಮಿಕ ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಅಕ್ಷತಾ ಟಿ, ಶಿಕ್ಷಕ ವೃಂದ ಹಾಗೂ ಶಾಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.