Latest News

ರಾಮಕುಂಜ: ಭಾರತ್ ಸ್ಕೌಟ್ ಗೈಡ್ಸ್ ನಿಂದ ಕೊರೊನಾ ವೈರಸ್ನ ಮಾಹಿತಿ ಹಾಗೂ ಜಾಗೃತಿ
ಭಾರತ್ ಸ್ಕೌಟ್ ಗೈಡ್ಸ್ ರಾಷ್ಟ್ರ ಸಂಸ್ಥೆ, ರಾಜ್ಯ ಸಂಸ್ಥೆ ಹಾಗೂ ಜಿಲ್ಲಾ ಸಂಸ್ಥೆಯು ಪ್ರತಿಯೊಬ್ಬ ಸ್ಕೌಟ್ಸ್ ಗೈಡ್ಸ್ ಸದಸ್ಯರುಗಳಿಗೆ ಒಂದು ವಿಶೇಷವಾದ ಜವಾಬ್ದಾರಿಯನ್ನು ಕೊಟ್ಟಿರುತ್ತದೆ. ಅದೇನೆಂದರೆ ಕೊರೊನ ಜಾಗೃತಿಯನ್ನು ಪ್ರತಿಯೊಬ್ಬರಿಗೂ ಮನದಟ್ಟು ಮಾಡುವುದು. ಅದರಂತೆಯೇ ನಾನು ಕೂಡ ನಮ್ಮ ಸುತ್ತಮುತ್ತಲ ಹಾಗೂ ನನ್ನೂರಿನ ನಮ್ಮ ಗ್ರಾಮದಲ್ಲಿ ಇದರ ಬಗ್ಗೆ ಮಾಹಿತಿ ಹಾಗೂ ಜಾಗೃತಿಯನ್ನು ಕೂಡ ಮಾಡಿರುತ್ತೇನೆ. ಮಾತ್ರವಲ್ಲದೆ ಮಾಸ್ಕನ್ನು ಹಂಚುವುದರೊಂದಿಗು ನಮ್ಮ ಸೇವೆ ಹಾಗೂ ಕರ್ತವ್ಯವನ್ನು ಕೂಡ ಮಾಡಿರುತ್ತೇನೆ. ಇಷ್ಟು ಮಾತ್ರವಲ್ಲದೆ 6 ತಿಂಗಳ ಪೆÇ್ರೀಜೆಕ್ಟ್ಗಳಲ್ಲಿ ಒಂದಾದ ಕಿಚನ್ ಗಾರ್ಡನ್ ನಮ್ಮ ಸಂಸ್ಥೆಯಲ್ಲಿಯೇ ಮಾಡಿದ್ದು ಅದರಲ್ಲಿ ಬೆಳೆಸಲಾದ ಬಸಳೆ, ಅಲಸಂಡೆ, ಬೆಂಡೆಕಾಯಿ, ಬದನೆ, ಹರಿವೆ ಹಾಗೂ ಕಾಯಿ ಮೆಣಸು ಮತ್ತು ಸಿಹಿಕುಂಬಳಕಾಯಿ, ಸೌತೆಕಾಯಿ, ಬೂದುಕುಂಬಳಕಾಯಿ ತರಕಾರಿಗಳನ್ನು ಕೂಡ ಮಾರ್ಚ್ 23ರಿಂದ ನಿರಂತರವಾಗಿ ನಮ್ಮ ಸುತ್ತಮುತ್ತಲಿನ ಹಾಗೂ ಗ್ರಾಮಸ್ಥರಿಗೆ ಸಂಸ್ಥೆಯ ಕಾರ್ಯದರ್ಶಿ ಸೇಸಪ್ಪ ರೈಯವರ ಸಂಪೂರ್ಣ ಸಹಕಾರದೊಂದಿಗೆ ಯಾವುದೇ ಪ್ರಚಾರಕ್ಕಾಗಿ ಅಲ್ಲದೆ ನಮ್ಮ ಸೇವೆ ಮತ್ತು ಕರ್ತವ್ಯಕ್ಕಾಗಿ ಎಲ್ಲಾ ಕಬ್ಸ್ ಬುಲ್ಬುಲ್, ಸ್ಕೌಟ್ಸ್ ಗೈಡ್ಸ್, ಕಬ್ ಮಾಸ್ಟರ್, ಪ್ಲಾಕ್ ಲೀಡರ್ಸ್, ಸ್ಕೌಟ್ ಮಾಸ್ಟರ್ ಮತ್ತು ಗೈಡ್ಸ್ ಕ್ಯಾಪ್ಟನ್ಗಳ ಪರವಾಗಿ ಗೈಡ್ ಕ್ಯಾಪ್ಟನ್ ಆದ ಶ್ರೀಮತಿ ಪ್ರೇಮಾ ಇವರ ನೇತೃತ್ವದಲ್ಲಿ ಕೊರೊನಾ ವೈರಸ್ನ ಜಾಗೃತಿಯನ್ನು ಮಾಡುತ್ತಿದ್ದೇನೆ.
ಮಾಸ್ಕನ್ನು ಕಡ್ಡಾಯವಾಗಿ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಿ. ಕೊರೊನಕ್ಕಾಗಿ ಶ್ರಮಿಸುತ್ತಿರುವ ಪ್ರತಿಯೊಬ್ಬರನ್ನೂ ಗೌರವಿಸೋಣ.
ನಮಸ್ಕಾರಗಳು,
ಜೇಷ್ಮಾ ಎಸ್ ಬಿ., 10ನೇ ತರಗತಿ
ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ರಾಮಕುಂಜ
ಕಡಬ ತಾಲೂಕು ದ.ಕ.