Latest News

ಮಕ್ಕಳ ದಿನಾಚರಣೆ ಆಚರಣೆ
ಶ್ರೀರಾಮಕುಂಜೇಶ್ವರ ಆ.ಮಾ.ಪ್ರೌ.ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ .ರೈ ಮಾತನಾಡಿ ಜವಾಹರಲಾಲ್ ನೆಹರು ಅವರ ತತ್ವ-ಆದರ್ಶಗಳನ್ನು ನಾವು ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ನಂತರ ಶಿಕ್ಷಕಿ ರಾಜೇಶ್ವರಿ ಹಾಗೂ ವಿದ್ಯಾರ್ಥಿಗಳಾದ ಭೂಮಿಕ, ಸೀಮಾ, ಸಂಧ್ಯಾ ಮಕ್ಕಳ ದಿನಾಚರಣೆಯ ಕುರಿತಾದ ವಿಷಯಗಳನ್ನು ಮಂಡಿಸಿದರು.ವಿದ್ಯಾರ್ಥಿ ಸಂಘದ ನಾಯಕ ಸ್ವಾತಿಕ್.ಜಿ.ರೈ ಸ್ವಾಗತಿಸಿ, ವಿದ್ಯಾರ್ಥಿ ಸ್ಫೂರ್ತಿ ವಂದಿಸಿ, ವಿದ್ಯಾರ್ಥಿ ಜೇಷ್ಮ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಶಾಲಾ ಮುಖ್ಯಗುರು ಗಾಯತ್ರಿ.ಯು.ಎನ್, ಉಪನಾಯಕ ಸಂಕಲ್ಪ್.ಬಿ.ಆರ್, ಹಾಗೂ ಶಿಕ್ಷಕರು, ಸಂಸ್ಥೆಯ ಸಿಂಬಂದಿ ವರ್ಗ ಮೊದಲಾದವರು ಉಪಸ್ಥಿತರಿದ್ದರು.