Latest News

ದೀಪಾವಳಿ ಹಬ್ಬ ಆಚರಣೆ
ಶ್ರೀರಾಮಕುಂಜೇಶ್ವರ ಆ.ಮಾ.ಪ್ರಾ.ಶಾಲೆ ಮತ್ತು ಕಿಂಡರ್ ಗಾರ್ಟನ್ನಲ್ಲಿ ದೀಪಾವಳಿ ಹಬ್ಬವನ್ನು ವಿಜೃಭಂಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈ ದೀಪಾವಳಿ ಹಬ್ಬವು ಪವಿತ್ರ ಸಂಕೇತವಾದ ಬೆಳಕಿನ ಹಬ್ಬ. ರಾಸಾಯನಿಕವಾದ ಪಟಾಕಿಗಳನ್ನು ಮಕ್ಕಳು ಹಚ್ಚಬಾರದು. ನಮ್ಮ ನೈರ್ಸಗಿಕವಾದ ಮಣ್ಣಿನ ಹಣತೆಯನ್ನು ಬಳಸಿ ದೀಪ ಹಚ್ಚಬೇಕು ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯಗುರು ಲೋಹಿತ, ಸಹಶಿಕ್ಷಕರು ಹಾಗೂ ಸಂಸ್ಥೆಯ ಸಿಬಂದಿ ವರ್ಗ ಮೊದಲಾದವರು ಉಪಸ್ಥಿತರಿದ್ದರು.