Latest News

ಕೆಡ್ಡಸ ಕೂಟ- ಕೆಡ್ಡಸ ಆಚರಣೆ ಕಾರ್ಯಕ್ರಮ
ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ ರಾಮಕುಂಜ ಇಲ್ಲಿ ಕೆಡ್ಡಸ ಆಚರಣೆ ಕಾರ್ಯಕ್ರಮವನ್ನು ಸಂಸ್ಥೆಯ ಮುಖ್ಯಗುರುಗಳಾದ ಶ್ರೀಮತಿ ಗಾಯತ್ರಿ ಯು. ಎನ್ ಯವರು ಭೂಮಿತಾಯಿಗೆ ಎಣ್ಣೆ ಬಿಟ್ಟು ಭೂಮಿ ಪೂಜೆ ಮಾಡುವುದರ ಮೂಲಕ ಸಾಂಪ್ರದಾಯಿಕವಾಗಿ ಆಚರಿಸಲಾಯಿತು. ಶಾಲಾ ವಿದ್ಯಾರ್ಥಿಗಳಿಂದಲೇ ಆರಂಭಗೊಂಡ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿ ಶ್ರೀಯುತ ಕೆ ಸೇಸಪ್ಪ ರೈ ಯವರು ವಹಿಸಿ, ಹಿರಿಯರು ಆಚರಿಸಿಕೊಂಡು ಬಂದಿರುವ ತುಳು ಆಚಾರ ವಿಚಾರ ಪದ್ಧತಿಗಳನ್ನು ಉಳಿಸಿ ಬೆಳೆಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ತರವಾದುದೆಂದು ತಿಳಿಸಿದರು ತುಳು ಶಿಕ್ಷಕಿ ಶ್ರೀಮತಿ ಸರಿತಾ ಸಂಧರ್ಭೋಚಿತವಾಗಿ ಮಾತನಾಡಿದರು ತುಳು ವಿದ್ಯಾರ್ಥಿನಿ ಕುಮಾರಿ ಮನ್ವಿತಾ ಕೆಡ್ಡಸ ಆಚರಣೆಯ ಮಹತ್ವದ ಬಗ್ಗೆ ತಿಳಿಸಿದರು. ವೇದಿಕೆಯಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಶ್ರೀಯುತ ಆನಂದ ಯಸ್. ಟಿ, ನಿಲಯ ವ್ಯವಸ್ಥಾಪಕಾರದ ಶ್ರೀಯುತ ರಮೇಶ್ ರೈ ಪ್ರಾಥಮಿಕ ಶಾಲಾ ಮುಖ್ಯೋಪಾದ್ಯಾಯಿನಿ ಶ್ರೀಮತಿ ಅಕ್ಷತ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರು ಕೆಡ್ಡಸ ಕುರಿತ ಗೀತೆಯನ್ನು ಹಾಡಿದರು. ತುಳು ವಿದ್ಯಾರ್ಥಿನಿಯರಾದ ಕುಮಾರಿ ಲೀಕ್ಷಿತಾ ಸ್ವಾಗತಿಸಿದರು. ಕುಮಾರಿ ಅನುಶ್ರೀ ವಂದಿಸಿ, ಕುಮಾರಿ ತಾನ್ಯ ಕಾರ್ಯಕ್ರಮ ನಿರೂಪಿಸಿದರು. ಕೆಡ್ಡಸದ ವಿಶೇಷ ತಿಂಡಿ ನನ್ನೇರಿಯನ್ನು ಹಂಚಲಾಯಿತು.