Latest News

ಕೆಡ್ಡಸ ಕೂಟ ಆಚರಣೆ
ನೇತ್ರಾವತಿ ತುಳುಕೂಟ ರಾಮಕುಂಜ, ಶ್ರೀರಾಮಕುಂಜೇಶ್ವರ ಆಂ.ಮಾ.ಪ್ರೌಢ ಹಾಗೂ ಪ್ರಾಥಮಿಕ ಶಾಲೆಯಲ್ಲಿ ಕೆಡ್ಡಸ ಕೂಟ ಹಬ್ಬ ಆಚರಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾದ ಯಮುನಾ.ಎಸ್.ರೈ ಅವರು ಭೂಮಿಗೆ ಎಣ್ಣೆ ಹಾಕುವ ಮೂಲಕ ಕೆಡ್ಡಸ ಹಬ್ಬದ ಆಚರಣೆಯನ್ನು ಮಕ್ಕಳಿಗೆ ಸಾಂಕೇತಿಕವಾಗಿ ಪ್ರದರ್ಶಿಸಲಾಯಿತು. ನಂತರ ಮಾತನಾಡಿದವರು ನಮ್ಮ ತುಳುನಾಡಿನ ಜನರು ಕೆಡ್ಡಸ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಯಾಕೆಂದರೆ ಭೂಮಿತಾಯಿಯು ಮೈನೆರೆದು, ಫಲವಂತಿಕೆಗೆ ತಾಯಿಯಾಗಿರುತ್ತಾಳೆ ಎಂದು ಹೇಳಿದರು.
ಅಲಂಕಾರು ಜೆ.ಸಿ.ಐ. ಅಧ್ಯಕ್ಷರಾದ ಜೆ.ಸಿ. ಹೇಮಲತಾ ಪ್ರದೀಪ್ ಇವರು ಹಬ್ಬದ ಕುರಿತಾಗಿ ಶುಭ ಹಾರೈಸಿದರು.
ಸಭೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ.ರೈ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಪ್ರದೀಪ್.ರೈ.ಮನವಳಿಕೆ, ಆಲಂಕಾರಿನ ಸಿಆರ್ಪಿ ಪ್ರದೀಪ್ ಬಾಕಿಲ, ಸಂಸ್ಥೆಯ ಆಡಳಿತಾಧಿಕಾರಿ ಆನಂದ್.ಎಸ್.ಟಿ ಮೊದಲಾದವರು ಉಪಸ್ಥಿತರಿದ್ದರು. ಪ್ರೌಢ ಶಾಲಾ ಮುಖ್ಯಗುರು ಗಾಯತ್ರಿ.ಯುನ್ ಸ್ವಾಗತಿಸಿ, ಪ್ರಾಥಮಿಕ ಶಾಲಾ ಮುಖ್ಯಗುರು ಲೋಹಿತ ವಂದಿಸಿ, ಶಿಕ್ಷಕಿ ಸರಿತಾ ಕಾರ್ಯಕ್ರಮ ನಿರೂಪಿಸಿದರು.