Latest News

ತಾಲೂಕು ಮಟ್ಟದ ಪ್ರತಿಭಾ ಕಾರಂಜಿ
ಉಪ್ಪಿನಂಗಡಿ ಸ.ಪ.ಪೂರ್ವ ಕಾಲೇಜ್ನಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ರಾಮಕುಂಜದ ಶ್ರೀರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿಭಾಗ ದ್ವಿತೀಯ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.
ಪ್ರೌಢಶಾಲಾ ವಿಭಾಗ : ತೆಲುಗು ಭಾಷಣ ಸುಹಾಸ್ ಮಾರುತಿ(ಪ್ರ.ಸ್ಥಾನ), ಮರಾಠಿ ಭಾಷಣ ಕೈವಲ್ಯ.ಟಿ.ವಿ( ಪ್ರ.ಸ್ಥಾನ), ಭಾವಗೀತೆ ಅನಘ(ದ್ವಿ.ಸ್ಥಾನ), ಇಂಗ್ಲೀಷ್ ಭಾಷಣ ಕೌಶಲ್ ದಿನೇಶ್(ದ್ವಿ.ಸ್ಥಾನ), ಆಶುಭಾಷಣ ಭೂಮಿಕಾ(ತೃ.ಸ್ಥಾನ) ಪಡೆದುಕೊಂಡಿದ್ದಾರೆ.
ಪ್ರಾಥಮಿಕ ವಿಭಾಗ: ಭೌತಿಕ್ ಲಘು ಸಂಗೀತ ತೃ.ಸ್ಥಾನ, ಹಿಂದಿ ಕಂಠಪಾಠ ದ್ವಿತೀಯ ಪಡೆದುಕೊಂಡಿದ್ದಾರೆ.
ಸುಹಾಸ್ ಮಾರುತಿ ಹಾಗೂ ಕೈವಲ್ಯ.ಟಿ.ವಿ. ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ.ರೈ, ಶೈಕ್ಷಣಿಕ ಸಲಹೆಗಾರ ರವೀಂದ್ರ ದರ್ಭೆ, ಆಢಳಿತಾಧಿಕಾರಿ ಆನಂದ.ಎಸ್.ಟಿ, ಶಾಲಾ ಮುಖ್ಯಗುರು ಗಾಯತ್ರಿ , ಶಿಕ್ಷಕರು ಹಾಗೂ ಸಿಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದರು.