Latest News
ರಾಮಕುಂಜದಲ್ಲಿ ಆಟಿ ಅಮವಾಸ್ಯೆ ಆಚರಣೆ
ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ರಾಮಕುಂಜ ಇಲ್ಲಿ ಪ್ರತೀ ವರ್ಷದಂತೆ ದಿನಾಂಕ 20-07-2020 ರಂದು ಆಟಿ ಅಮವಾಸ್ಯೆ ಆಚರಣೆಯನ್ನು ಸಾಂಕೇತಿಕವಾಗಿ ಸರಳವಾಗಿ ಸಂಸ್ಥೆಯ ಕಾರ್ಯದರ್ಶಿಯವರ ನೆತೃತ್ವದಲ್ಲಿ ನಡೆಸಲಾಯಿತು. ಅಮವಾಸ್ಯೆಯ ವಿಶೇಷತೆಯ ಬಗ್ಗೆ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಯುತ ಸೇಸಪ್ಪ ರೈ ಕೆ ಯವರು ತಿಳಿಸಿದರು. ಶೈಕ್ಷಣಿಕ ಸಲಹೆಗಾರರಾದ ಶ್ರೀಯುತ ರವೀಂದ್ರ ದರ್ಬೆಯವರು ಸಂದರ್ಭೋಚಿತವಾಗಿ ಮಾತನಾಡಿದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಗಾಯತ್ರಿ ಯು ಎನ್ ರವರು ಸ್ವಾಗತಿಸಿದರು. ಸುಮಾರು 20 ಬಗೆಯ ನಿಸರ್ಗದತ್ತವಾದ ವಿಶೇಷ ತಿಂಡಿ ತಿನಿಸುಗಳನ್ನು ತಯಾರಿಸಲಾಗಿತ್ತು.