Latest News

ಶ್ರೀರಾ.ಆಂ.ಮಾ.ಶಾಲೆ ವಿದ್ಯಾರ್ಥಿಗಳಾದ ಸಂಕಲ್ಪ ಮತ್ತು ಶುಭಪ್ರದ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ
ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಶ್ರೀರಾ.ಆಂ.ಮಾ.ಶಾಲೆ ವಿದ್ಯಾರ್ಥಿಗಳಾದ ಸಂಕಲ್ಪ 10ನೇ( ಕೋಲು ಜಿಗಿತ ಪ್ರಥಮ ) ಮತ್ತು ಶುಭಪ್ರದಾ 10ನೇ (ಚೆಸ್ ಸ್ಪರ್ಧೆ ದ್ವಿತೀಯ) ಇವರಿಗೆ ಆತೂರುನಿಂದ ಮೆರವಣಿಗೆಯ ಮೂಲಕ ಅದ್ದೂರಿ ಸ್ವಾಗತವನ್ನು ಮಾಡಲಾಯಿತು. ಸಂಕಲ್ಪ.ಬಿ.ಆರ್ ಡಿಸೆಂಬರ್ ತಿಂಗಳಿನಲ್ಲಿ ಪಂಜಾಬಿನಲ್ಲಿ ನಡೆಯುವ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾನೆ. ಶುಭಪ್ರದಾ ಕೊಲ್ಕತ್ತಾದಲ್ಲಿ ನಡೆಯುವ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾಳೆ. ದೈಹಿಕ ಶಿಕ್ಷಕರಾದ ಪ್ರೇಮ ಹಾಗೂ ವಾಸಪ್ಪ ತರಬೇತಿ ನೀಡಿದರು.ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ.ರೈ , ಆಡಳಿತಾಧಿಕಾರಿ ಆನಂದ.ಎಸ್.ಟಿ, ಶಾಲಾ ಮುಖ್ಯಗುರು ಗಾಯತ್ರಿ.ಯು.ಎನ್, ಶೈಕ್ಷಣಿಕ ಸಲಹೆಗಾರ ರವೀಂದ್ರ ಶೆಟ್ಟಿ ದರ್ಬೆ, ಶಿಕ್ಷಕರು ಹಾಗೂ ಶಾಲಾ ಮಕ್ಕಳು ಮೊದಲಾದವರು ಉಪಸ್ಥಿತರಿದ್ದರು.